ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಬದಲು ಅಧಿಕಾರಿಗಳಿಗೆ ಉಸ್ತುವಾರಿ
ಮೈಸೂರು

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಬದಲು ಅಧಿಕಾರಿಗಳಿಗೆ ಉಸ್ತುವಾರಿ

June 24, 2018

ಬೆಂಗಳೂರು: ಜಿಲ್ಲಾ ಉಸ್ತುವಾರಿ ಮಂತ್ರಿಗಳ ನೇಮಕ ಮಾಡದ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಿಗೆ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ಹಂಚಿದ್ದಾರೆ.

ಮುಖ್ಯಮಂತ್ರಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ ಅವರನ್ನು ಮೈಸೂರಿಗೆ, ಜಾವೇದ್ ಅಖ್ತರ್ ಮಂಡ್ಯಕ್ಕೆ, ಡಾ.ಜಿ.ಕಲ್ಪನಾ ಕೊಡಗು ಜಿಲ್ಲೆಗೆ, ರಾಜೇಂದ್ರ ಕುಮಾರ್ ಕಠಾರಿಯಾ ಅವ ರನ್ನು ಚಾಮರಾಜನಗರಕ್ಕೂ ನೇಮಕ ಮಾಡಿ ದ್ದಾರೆ. ಉಮಾಶಂಕರ ಅವರನ್ನು ದಾವಣಗೆರೆಗೂ, ಪಂಕಜ್ ಕುಮಾರ್ ಪಾಂಡೆ ಚಿತ್ರದುರ್ಗಕ್ಕೆ, ಬೆಂಗಳೂರು ನಗರ ಅಂಜುಂ ಪರ್ವೇಜ್, ಬೆಂಗಳೂರು ಗ್ರಾಮಾಂತರ ಡಾ.ಬಿ.ಬಸವರಾಜು, ರಾಮನಗರಕ್ಕೆ ಅಜಯ್ ಸೇಠ್ ನೇಮಕ ವಾಗಿದ್ದಾರೆ. ಕೋಲಾರಕ್ಕೆ ವಿ.ಮಂಜುಳಾ, ತುಮಕೂರಿಗೆ ಡಾ. ಶಾಲಿನಿ ರಜನೀಶ್, ಚಿಕ್ಕಬಳ್ಳಾಪುರಕ್ಕೆ ಡಾ.ನಾಗಾಂ ಬಿಕಾದೇವಿ, ಶಿವಮೊಗ್ಗಕ್ಕೆ ಚಕ್ರವರ್ತಿ ಮೋಹನ್, ಹಾಸನ ಜಿಲ್ಲೆಗೆ ನವೀನ್ ರಾಜ್ ಸಿಂಗ್, ಚಿಕ್ಕಮಗಳೂರಿಗೆ ರಾಜೀವ್ ಚಾವ್ಲಾ, ಉಡುಪಿ-ಮಹೇಶ್ವರರಾವ್ ನೇಮಕಗೊಂಡಿ ದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ವಿ.ಪೆÇನ್ನು ರಾಜ್, ಬೆಳಗಾವಿಗೆ ರಾಕೇಶ್ ಸಿಂಗ್, ಧಾರ ವಾಡಕ್ಕೆ ದರ್ಪಣ್ ಜೈನ್, ಗದಗ್ ಜಿಲ್ಲೆಗೆ ಆಮ್ಲನ್ ಆದಿತ್ಯ ಬಿಸ್ವಾಸ್, ಹಾವೇರಿಗೆ ಪಿ. ಹೇಮಲತಾ, ವಿಜಯಪುರಕ್ಕೆ ಮೊಹ ಮದ್ ಮೊಹಿಸಿನ್, ಉತ್ತರ ಕನ್ನಡ ಜಿಲ್ಲೆಗೆ ಮೌನೀಷ್ ಮುದ್ಗಿಲ್, ಬಾಗಲಕೋಟೆಗೆ ರೇಣುಕಾ ಚಿದಂಬರಂ, ಕಲಬುರಗಿಗೆ ಜೆ. ರವಿಶಂಕರ್ ಅವರನ್ನು ನೇಮಕ ಮಾಡಿ, ಆದೇಶ ಹೊರಡಿಸಲಾಗಿದೆ. ಯಾದಗಿರಿ ಜಿಲ್ಲೆಗೆ ಟಿ.ಕೆ.ಅನಿಲ್ ಕುಮಾರ್, ರಾಯ ಚೂರಿಗೆ ಜಿ.ಕುಮಾರ್ ನಾಯಕ್, ಕೊಪ್ಪಳಕ್ಕೆ ಉಮಾ ಮಹದೇವನ್, ಬಳ್ಳಾರಿಗೆ ಡಾ. ರಜನೀಶ್ ಗೋಯಲ್, ಬೀದರ್ ಜಿಲ್ಲೆಗೆ ಡಾ.ಇ.ವಿ.ರಮಣರೆಡ್ಡಿ ನೇಮಕವಾಗಿದ್ದಾರೆ.

Translate »