ಹಜ್ ಭವನಕ್ಕೆ ಟಿಪ್ಪು ಹೆಸರಿಟ್ಟರೆ ತೀವ್ರ ಹೋರಾಟ
ಮೈಸೂರು

ಹಜ್ ಭವನಕ್ಕೆ ಟಿಪ್ಪು ಹೆಸರಿಟ್ಟರೆ ತೀವ್ರ ಹೋರಾಟ

June 24, 2018

ಬೆಂಗಳೂರು: ನಗರದ ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಟ್ಟರೆ ಕರ್ನಾಟಕ ಮತ್ತೊಮ್ಮೆ ಹೊತ್ತಿ ಉರಿಯಲು ಕಾರಣವಾಗುತ್ತದೆ ಎಂದು ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಇದ್ದಾಗ ಹಜ್ ಯಾತ್ರಿಕರಿಗೆ ಅನುಕೂಲ ಆಗಲು ಹಜ್ ಭವನ ನಿರ್ಮಾಣಕ್ಕೆ ಹಣ ಕೊಟ್ಟಿತ್ತೇ ಹೊರತು ಟಿಪ್ಪು ಹೆಸರು ಇಡಲು ಅಲ್ಲ, ಟಿಪ್ಪು ಒಬ್ಬ ಮತಾಂಧ, ಕೊಲೆ ಗಡುಕ ಎಂದು ಗುಡುಗಿದರು. ಹಜ್ ಭವನಕ್ಕೆ ಒಬ್ಬ ಮತಾಂಧ ಮತ್ತು ದೇಶದ್ರೋಹಿಯ ಹೆಸರು ಇಡಬಾರದು. ಟಿಪ್ಪು ದೇಶದ್ರೋಹಿ ಅಂತಾ ನಾನು ನೇರವಾಗಿ ಆಪಾದನೆ ಮಾಡು ತ್ತೇನೆ. ಕೊಡಗು ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ದೇವಸ್ಥಾನ ಹಾಳು ಮಾಡಿ, 80 ಸಾವಿರಕ್ಕೂ ಹೆಚ್ಚು ಜನರನ್ನು ಕೊಲೆ ಮಾಡಿದ್ದಾನೆ ಎಂದರು. ಕೊಡಗು ಜಿಲ್ಲೆಯವರು ಇಂದಿಗೂ ಟಿಪ್ಪು ಕೊಲೆಗಡುಕ ಅಂತಲೇ ಹೇಳುತ್ತಾರೆ. ರಾಜ್ಯ ಸರ್ಕಾರ ಟಿಪ್ಪು ಹೆಸರಿಡುವ ನಿರ್ಧಾರ ಮಾಡಿ ದರೆ, ಕೊಡಗು ಜಿಲ್ಲೆಯಲ್ಲಿ ತೀವ್ರ ಹೋರಾಟ ಮಾಡುತ್ತೇವೆ. ಕರ್ನಾಟಕ ಮತ್ತೊಮ್ಮೆ ಹೊತ್ತಿ ಉರಿಯಲು ಕಾರಣವಾಗಲಿದೆ ಎಂದರು.

Translate »