ವಿವಿಧೆಡೆ ಕಾರ್ಗಿಲ್ ವಿಜಯೋತ್ಸವ ಆಚರಣೆ
ಕೊಡಗು

ವಿವಿಧೆಡೆ ಕಾರ್ಗಿಲ್ ವಿಜಯೋತ್ಸವ ಆಚರಣೆ

July 27, 2018

ವಿರಾಜಪೇಟೆ:  ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ವಿರಾಜಪೇಟೆ ಸ್ಟೇಟ್ ಬ್ಯಾಂಕ್ ಎದುರಿನಲ್ಲಿರುವ ಯೋಧರ ಸ್ಮಾರಕಕ್ಕೆ ಸ್ಥಳೀಯ ಶಾಸಕ ಕೆ.ಜಿ.ಬೋಪಯ್ಯ ಅವರು, ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ಯೋಧರಿಗೆ ಗೌರವ ವಂದನೆ ಸಲ್ಲಿಸಿದರು.

ಈ ಸಂದರ್ಭ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚೇಂದ್ರಿ ಮಾಡ ಗಣೇಶ್ ನಂಜಪ್ಪ, ಜ.ತಿಮ್ಮಯ್ಯ ಹಾಗೂ ಜ.ಕಾರ್ಯಪ್ಪ, ಫೋರಮ್ ಅಧ್ಯಕ್ಷ ಕರ್ನಲ್ ಸುಬ್ಬಯ್ಯ, ಕರ್ನಲ್ ಭರತ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ.ಜೀವನ್, ತಾಲೂಕು ತಹಶೀ ಲ್ದಾರ್ ಆರ್.ಗೋವಿಂದರಾಜು, ಎಸ್‍ಬಿಐ ಬ್ಯಾಂಕ್‍ನ ವ್ಯವಸ್ಥಾಪಕ ರಮೇಶ್ ಭಟ್, ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್, ಪೊಲೀಸ್ ವೃತ್ತ ನಿರೀಕ್ಷಕ ಎನ್.ಕುಮಾರ್ ಆರಾಧ್ಯ, ಗ್ರಾಮಾಂತರ ಠಾಣಾಧಿಕಾರಿ ಸುರೇಶ್ ಬೋಪಣ್ಣ, ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ್, ರಾಜ, ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ.ಗಣೇಶ್, ಹಿಂದು ಜಾಗರಣ ವೇದಿಕೆಯ ಸದಸ್ಯರು ಮತ್ತು ಕಾವೇರಿ ಲಘು ವಾಹನ ಚಾಲಕ ಮಾಲೀಕರ ಸಂಘದ ಅಧ್ಯಕ್ಷರು ಮತ್ತು ಸದಸ್ಯರು, ಶ್ರದ್ಧಾಂಜಲಿ ಅರ್ಪಿಸಿದರು.

ಗೋಣಿಕೊಪ್ಪಲು ವರದಿ: ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನಲ್ಲಿ ‘ಕಾರ್ಗಿಲ್ ವಿಜಯ ದಿವಸ್’ ಆಚರಿಸಲಾಯಿತು.
ಈ ಸಂಧರ್ಭ ಕಾವೇರಿ ಕಾಲೇಜು ಆವರಣದ ಸಮೀಪವಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಜೋಡಿ ಪ್ರತಿಮೆ ಬಳಿ ವಿದ್ಯಾರ್ಥಿ ವೃಂದ ಹಾಗೂ ಉಪನ್ಯಾಸಕ ವರ್ಗ ಪಾಲ್ಗೊಂಡು ಸೈನಿಕರ ಪರವಾದ ಘೋಷಣೆಗಳನ್ನು ಕೂಗಿದರು. ಕಾರ್ಗಿಲ್ ವಿಜಯೋತ್ಸವದ ಭಾವಚಿತ್ರಕ್ಕೆ ಪುಷ್ಪಾ ರ್ಚನೆ ಮಾಡಲಾಯಿತು. ಕಾರ್ಗಿಲ್ ಯುದ್ಧದಲ್ಲಿ ವೀರ ಮರಣ ಹೊಂದಿದ ಯೋಧರಿಗೆ ಒಂದು ನಿಮಿಷದ ಮೌನಾಚರಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಂಶು ಪಾಲರಾದ ಪ್ರೊ. ಎಸ್. ಆರ್. ಉಷಾಲತಾ, ಪ್ರೊ. ಎ.ಎಂ. ಕಮ ಲಾಕ್ಷಿ, ಪ್ರೊ. ಎಂ.ಎಸ್. ಭಾರತಿ ಹಾಗೂ ಇನ್ನಿತರ ವಿದ್ಯಾರ್ಥಿ ಗಳು, ಬೋಧಕ ವೃಂದ ಬೋಧಕೇತರ ಪಾಲ್ಗೊಂಡಿದ್ದರು.

Translate »