ಶಿಕ್ಷಣ ಸಂಸ್ಥೆಗಳ ಬಳಿ ಗಾಂಜಾ ನಿಷೇಧಕ್ಕೆ ಸೂಚನೆ
ಕೊಡಗು

ಶಿಕ್ಷಣ ಸಂಸ್ಥೆಗಳ ಬಳಿ ಗಾಂಜಾ ನಿಷೇಧಕ್ಕೆ ಸೂಚನೆ

July 31, 2018

ಗೋಣಿಕೊಪ್ಪಲು: ಶಿಕ್ಷಣ ಸಂಸ್ಥೆಗಳ ಸಮೀಪ ಗಾಂಜಾ ಮಾರಾಟ ಯಥೇಚ್ಚವಾಗಿ ನಡೆಯುತ್ತಿರುವುದನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಮುಂದಾಗುವಂತೆ ಶಾಸಕ ಕೆ. ಜಿ. ಬೋಪಯ್ಯ ಸೂಚನೆ ನೀಡಿದರು.

ಪೊನ್ನಂಪೇಟೆ ಸಾಮಥ್ರ್ಯಸೌಧದಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಗಾಂಜಾ ಮಾರಾಟ ತಡೆ ಗಟ್ಟಲು ಪೊಲೀಸ್ ಇಲಾಖೆ ಮುಂದಾಗ ಬೇಕು. ಗಾಂಜಾ ಮಾರಾಟ ಹಾಗೂ ಸೇವನೆ ಬಗೆಗಿನ ಇರುವ ಕಾನೂನು ಕ್ರಮವನ್ನು ಜರುಗಿಸಬೇಕು ಎಂದರು.

ವಿರಾಜಪೇಟೆ ತಹಶೀಲ್ದಾರ್ ಕಚೇರಿಯಲ್ಲಿ ಹಳೆಯ ಅಧಿಕಾರಿಗಳೇ ತಹಸೀಲ್ದಾರ್ ರೀತಿಯಲ್ಲಿ ಸಾರ್ವಜನಿಕರೊಂದಿಗೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನು ನಿಯಂತ್ರಿ ಸಲು ಆಗದಿದ್ದಲ್ಲಿ ತಹಸೀಲ್ದಾರ್ ಅವರೇ ಬಿಟ್ಟು ಹೋಗುವುದು ಒಳಿತು. ಕಚೇರಿಗೆ ಬೀಗ ಜಡಿಯಬಹುದು ಎಂದು ಶಾಸಕ ಬೋಪಯ್ಯ ಕಿಡಿಕಾರಿದರು.

ತಾಲೂಕು ತೋಟಗಾರಿಕಾ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಶಿವರಾಜ್ ಕಾಳುಮೆಣಸು ಹಾನಿ ಬಗ್ಗೆ ಪರಿಹಾರ ಕ್ಕಾಗಿ 10 ಅರ್ಜಿಗಳು ಬಂದಿರುವ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಶಾಸಕ ಬೋಪಯ್ಯ ಆಶ್ಚರ್ಯಗೊಂಡು ಇಡೀ ಬಳ್ಳಿಗಳು ಹಳದಿ ಬಣ್ಣಕ್ಕೆ ಬಂದು ನಾಶವಾಗು ತ್ತಿದೆ. ಇಷ್ಟೇ ಅರ್ಜಿಗಳ ಎಂದು ಪ್ರಶ್ನಿಸಿ, ಇಲಾಖೆ ಅಧಿಕಾರಿಗಳು ಬೆಳೆಗಾರರಿಂದ ಅರ್ಜಿ ಸ್ವೀಕರಿಸಲು ಎಡವಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಮಳೆ ಹಾನಿ ಪರಿಹಾರಕ್ಕೆ ಗ್ರಾಮ ಪಂಚಾಯ್ತಿಗೆ ಮಾಹಿತಿ ನೀಡಿ ಅರ್ಜಿ ಪಡೆದುಕೊಳ್ಳಲು ಸೂಚಿಸಿದರು.

ಜವಬ್ದಾರಿಯಿಂದ ಕಾರ್ಯನಿರ್ವಹಿ ಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕ, ಮುಂಗಾರಿನಲ್ಲಿ ತಾಲೂಕಿಗೆ ಸುರಿದಿ ರುವ ಮಳೆಯ ಅಂಕಿ ಅಂಶ ಬಗ್ಗೆ ಪ್ರಶ್ನಿಸಿದರು. ಇಲ್ಲಿವರೆಗೆ 200ಎಂಎಂ ಮಳೆಯಾಗಿದೆ ಎಂದು ಬೇಜವಾಬ್ದಾರಿ ಮಾಹಿತಿ ನೀಡಿದಕ್ಕೆ ಕಿಡಿಕಾರಿದರು. ತಾಲೂಕಿನಲ್ಲಿ ಇಲ್ಲಿವರೆಗೆ 2028 ಮಿ.ಮೀ. ಮಳೆಯಾಗಿದೆ ಎಂದು ಈಗಷ್ಟೆ ಕೃಷಿ ಅಧಿಕಾರಿ ಸಭೆಗೆ ಮಾಹಿತಿ ನೀಡಿದ್ದಾರೆ. ಅದನ್ನು ಕೇಳಿಯಾದರೂ ಉತ್ತರಿಸುವಷ್ಟು ಆಗುವುದಿಲ್ಲವೇ ಎಂದು ತರಾಟೆ ತೆಗೆದುಕೊಂಡರು.

ಕೃಷಿ ಇಲಾಖೆಯಿಂದ ನಾಟಿ ಮಾಡಿದ ಬೆಳೆಗೆ ಮಾತ್ರ ಪರಿಹಾರ ನೀಡುವ ನಿಯಮ ವಿರುವುದರಿಂದ ನಾಟಿಗೂ ಮುನ್ನ ಸಸಿಮಡಿ ಸಂದರ್ಭ ನಷ್ಟ ಅನುಭವಿಸಿದವರಿಗೆ ಮಾನ ವೀಯತೆ ದೃಷ್ಠಿಯಿಂದ ಪರಿಹಾರ ವಿತರಿಸ ಬೇಕು. ಸಸಿಮಡಿ ನಷ್ಟಕ್ಕೆ ಶೇ. 100 ರಿಯಾಯಿತಿಯಲ್ಲಿ ಬಿತ್ತನೆ ಬೀಜ ನೀಡುವ ನಿಯಮದೊಂದಿಗೆ ಮಾನವೀಯತೆ ಮೂಲಕ ಪರಿಹಾರ ಕಲ್ಪಿಸಬೇಕು ಎಂದರು.
ಮಳೆ ಹಾನಿಯಿಂದ ತಾಲೂಕಿನಲ್ಲಿ 8.8 ಕೋಟಿಯಷ್ಟು ರಸ್ತೆ ನಷ್ಟ ಉಂಟಾಗಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು. ಪಂಚಾಯತ್ ರಾಜ್ ಇಲಾಖೆಯಲ್ಲಿನ ರಸ್ತೆಗಳಲ್ಲಿ 33 ಕಿ. ಮೀ. ರಸ್ತೆ ಹಾನಿಯಾಗಿದೆ ಎಂದು ಅಧಿಕಾರಿ ನೀಡಿದ ಮಾಹಿತಿ ಸಭೆಯನ್ನು ನಗೆಗಡಲಲ್ಲಿ ತೇಲಿಸಿತು. ರಸ್ತೆಗಳು ಸಂಪೂರ್ಣ ವಾಗಿ ಕಿತ್ತು ಹೋಗಿದೆ. ಕೇವಲ 33 ಕಿ. ಮೀ. ರಸ್ತೆ ಹಾನಿಯಾಗಿದೆ ಎಂಬ ಜವಬ್ದಾರಿ ಇಲ್ಲದ ಅಂಕಿ ಅಂಶವನ್ನು ಸರ್ಕಾರಕ್ಕೆ ಕಳುಹಿಸಿರುವುದರಿಂದ ತಾಲೂಕಿಗೆ ನಷ್ಟ ವಾಗುತ್ತಿದೆ ಎಂದು ಶಾಸಕ ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ತಾಪಂ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಉಪಾಧ್ಯಕ್ಷ ನೆಲ್ಲೀರ ಚಲನ್, ಸಾಮಾ ಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಜೆನ್ನೀಸ್, ಜಿಪಂ ಸದಸ್ಯ ಸಿ. ಕೆ. ಬೋಪಣ್ಣ, ಇಒ ರಾಜಣ್ಣ, ತಹಸೀಲ್ದಾರ್ ಗೋವಿಂದರಾಜು ಇತರರು ಉಪಸ್ಥಿತರಿದ್ದರು.

Translate »