ಸುತ್ತೂರು ಮಠದಲ್ಲಿ ಜೂ.28ಕ್ಕೆ ವಿದುಷಿ ಸುಕನ್ಯಾ ರಾಮಗೋಪಾಲ್ ತಂಡದಿಂದ ಲಯವಾದ್ಯಗೋಷ್ಠಿ
ಮೈಸೂರು

ಸುತ್ತೂರು ಮಠದಲ್ಲಿ ಜೂ.28ಕ್ಕೆ ವಿದುಷಿ ಸುಕನ್ಯಾ ರಾಮಗೋಪಾಲ್ ತಂಡದಿಂದ ಲಯವಾದ್ಯಗೋಷ್ಠಿ

June 24, 2018

ಮೈಸೂರು:  ಮೈಸೂರಿನ ಸುತ್ತೂರು ಮಠದಲ್ಲಿ ಜೂನ್ 28ರ (ಗುರುವಾರ) ಸಂಜೆ 6 ಗಂಟೆಗೆ ಬೆಳದಿಂಗಳ ಸಂಗೀತದ ಅಂಗವಾಗಿ ವಿದುಷಿ ಸುಕನ್ಯಾ ರಾಮಗೋಪಾಲ್ ತಂಡದಿಂದ ಲಯವಾದ್ಯಗೋಷ್ಠಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದ ಸಾನಿದ್ಯವನ್ನು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ.

ಶ್ರೀಮತಿ ಸುಕನ್ಯಾ ರಾಮಗೋಪಾಲ್‍ರವರು ದೇಶದ ಏಕೈಕ ಮಹಿಳಾ ಘಟಂ ಕಲಾವಿದರು. 12ನೇ ವರ್ಷದಲ್ಲಿ ಚೆನ್ನೈನ ಶ್ರೀಜಯಗಣೇಶ ತಾಳವಾದ್ಯ ವಿದ್ಯಾಶಾಲೆಯಲ್ಲಿ ವಿದ್ವಾನ್ ಟಿ.ಆರ್.ಹರಿಹರ ಶರ್ಮರ ಬಳಿ ಮೃದಂಗವನ್ನು ವಿದ್ವಾನ್ ಗುರುಮೂರ್ತಿಯವರ ಬಳಿ ವಯೊಲಿನ್ ಮತ್ತು ವಿದ್ವಾನ್ ವಿಕ್ಕು ವಿನಾಯಕರಾಮ್‍ರವರ ಬಳಿ ಘಟಂ ವಾದನವನ್ನು ಅಭ್ಯಸಿಸಿದ್ದಾರೆ. ಭಿನ್ನ ಭಿನ್ನ ಶ್ರುತಿಗಳು ಘಟವಾದನವನ್ನು ಮೇಳೈಸಿಕೊಂಡು ಪ್ರಸ್ತುತಿಯಲ್ಲಿ ಮಾಧುರ್ಯವನ್ನು ಹೊರತರುವ ನವೀನ ಪರಿಕಲ್ಪನೆ ಇವರ ‘ಘಟತರಂಗ’ ಪ್ರಯೋಗ ಭಾರತದಲ್ಲಷ್ಟೇ ಅಲ್ಲದೆ ದುಬೈ, ಸಿಂಗಪುರ, ಸ್ವಿಡ್ಜರ್ಲೆಂಡ್, ಕೊರಿಯ ಮೊದಲಾದ ದೇಶಗಳಲ್ಲಿ ರಸಿಕರನ್ನು ಆಕರ್ಷಿಸಿದೆ. ಶ್ರೀಮತಿ ಸುಕನ್ಯಾರವರು ಆಕಾಶವಾಣಿಯ ಎ-ಟಾಪ್ ಶ್ರೇಣಿಯ ಕಲಾವಿದರು. ಅಖಿಲ ಭಾರತ ಸಾಂಸ್ಕøತಿಕ ಸಂಬಂಧಗಳ ಮಂಡಳಿಯ ಕಲಾವಿದರಲ್ಲಿ ಇವರೂ ಒಬ್ಬರು. ಚೆನ್ನೈನ ಮ್ಯೂಸಿಕ್ ಅಕಾಡೆಮಿಯ ಟಿ.ಟಿ.ಕೆ ಪ್ರಶ್ರಸ್ತಿಗೂ ಭಾಜನರಾಗಿದ್ದಾರೆ.

ತಂಡದ ವಿದುಷಿ ಜೆ.ಯೋಗವಂದನಾ, ಆಂಧ್ರಪ್ರದೇಶದ ವಿದ್ವಾನ್ ಎ.ಎಸ್.ಅನಂತರಾವ್ ಶಿಷ್ಯರು, ಇವರೂ ಆಕಾಶವಾಣಿಯ ಎ-ಟಾಪ್ ಕಲಾವಿದರು. ಐಸಿಸಿಆರ್ ಕಲಾವಿದರೂ ಕೂಡ. ಇವರು ಸಂಗೀತದಲ್ಲಿ ಡಿಪ್ಲೊಮಾ ಪಡೆದಿದ್ದು, ಸಂಗೀತ ಅಲಂಕಾರದಲ್ಲಿ ಪದವೀಧರರಾಗಿದ್ದಾರೆ. ಹಲವಾರು ಪ್ರತಿಷ್ಠಿತ ಕಚೇರಿಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಇವರಿಗೆ ಇತ್ತೀಚೆಗೆ ‘ಶಾಮಶಾಸ್ತ್ರಿ ಸಂಗೀತ ರತ್ನ’ ಪ್ರಶಸ್ತಿ ಲಭಿಸಿದೆ.

ತಂಡದ ಮತ್ತೊರ್ವ ಸದಸ್ಯ ವಿದುಷಿ ಸೌಮ್ಯ ರಾಮಚಂದ್ರನ್‍ರವರು ತಮ್ಮ ತಾಯಿ ಶ್ರೀಮತಿ ರಾಜಿ ಸುಬ್ಬರಾಮನ್ ಮತ್ತು ಶ್ರೀಮತಿ ಬಾಲಾಮಣಿಯವರಲ್ಲಿ ಸಂಗೀತಾಧ್ಯಯನ ನಡೆಸಿದ್ದಾರೆ. ಬೆಂಗಳೂರು ಆಕಾಶವಾಣಿ ಬಿ-ಹೈ ಶ್ರೇಣಿ ಕಲಾವಿದರಾಗಿರುವ ಇವರು ವಯೊಲಿನ್ ಉನ್ನತಾಭ್ಯಾಸಕ್ಕಾಗಿ ಭಾರತ ಸರ್ಕಾರವು ಕೊಡ ಮಾಡುವ ಜೂನಿಯರ್ ಮತ್ತು ಸೀನಿಯರ್ ಶ್ರೇಣಿ ಯ ಪ್ರತಿಷ್ಠಿತ ವಿದ್ಯಾರ್ಥಿ ವೇತನಕ್ಕೆ ಭಾಜನರಾಗಿದ್ದಾರೆ. ಇವರಿಗೆ ‘ಸೂರ್‍ಮಣ ’ ಪುರಸ್ಕಾರವೂ ಲಭಿಸಿದೆ. ಚೆನ್ನೈನ ಮ್ಯೂಸಿಕ್ ಅಕಾಡೆಮಿ ಮತ್ತು ಶ್ರೀಕೃಷ್ಣ ಗಾನಸಭಾ ಸಂಸ್ಥೆಗಳಿಂದ ‘ಅತ್ಯುತ್ತಮ ವಯೊಲಿನ್ ಕಲಾವಿದೆ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ‘ಸಂಪ್ರದಾಯ’ ಸಂಗೀತ ಶಾಲೆಯ ಮುಖಾಂತರ ನೂರಾರು ಜನ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ನೀಡುತ್ತಿದ್ದಾರೆ.

ವಿದುಷಿ ಜಿ.ಲಕ್ಷ್ಮಿ ಪಿಳ್ಳೈಯವರು ಪದ್ಮಭೂಷಣ ಡಾ.ಟಿ.ವಿ.ಗೋಪಾಲಕೃಷ್ಣರವರ ಶಿಷ್ಯರು. ಹಲವಾರು ಅಂತಾರಾಷ್ಟ್ರೀಯ ಕಚೇರಿಗಳಲ್ಲಿ ಮೃದಂಗವನ್ನು ನುಡಿಸಿರುವ ಕಲಾವಿದರು. ನೆಹರೂ ಯುವ ಕೇಂದ್ರದಿಂದ ರಾಷ್ಟ್ರೀಯ ಸ್ವರ್ಣ ಪುರಸ್ಕಾರವನ್ನು ಪಡೆದಿದ್ದಾರೆ. ಬೆಂಗಳೂರು ಆಕಾಶವಾಣಿಯ ‘ಬಿ-ಹೈ’ ಶ್ರೇಣಿಯ ಸಂಗೀತಗಾರರು. ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾದ ಸಿಸಿಆರ್‍ಟಿ ಘಟಕದಿಂದ ವಿದ್ಯಾರ್ಥಿ ವೇತನ ಪಡೆದಿದ್ದಾರೆ.

ವಿದುಷಿ ಭಾಗ್ಯಲಕ್ಷ್ಮಿ ಎಂ.ಕೃಷ್ಣರವರು ಪ್ರಶಸ್ತಿ ಪುರಸ್ಕøತ ವಿದ್ವಾನ್ ಡಾ.ಎಲ್.ಭೀಮಾಚಾರ್‍ರವರ ಸುಪುತ್ರಿ ಮತ್ತು ಶಿಷ್ಯರು. ಬೆಂಗಳೂರು ಆಕಾಶವಾಣಿಯ ‘ಎ’ ಶ್ರೇಣಿ ಕಲಾವಿದರಾಗಿರುವ ಇವರು ಹಲವಾರು ರೇಡಿಯೋ ಮತ್ತು ಟೆಲಿವಿಷನ್ ಕಾರ್ಯಕ್ರಮಗಳನ್ನು ನೀಡಿದ್ದಾರೆ. ದೇಶ-ವಿದೇಶಗಳ ಪ್ರತಿಷ್ಠಿತ ಸಂಗೀತ ಸಭೆಗಳಲ್ಲಿ ಇದುವರೆಗೆ ಸುಮಾರು 1,500 ಕಚೇರಿಗಳನ್ನು ನೀಡಿದ್ದಾರೆ. ಇವರಿಗೆ ಬೆಂಗಳೂರಿನ ‘ಅನನ್ಯ ಯುವ ಪರುಸ್ಕಾರ’ (2014) ಮತ್ತು ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ‘ಅತ್ಯುತ್ತಮ ಉಪ ಪಕ್ಕವಾದ್ಯಂ ಪ್ರಶಸ್ತಿ’ಗಳು (2017) ದೊರೆತಿವೆ.

Translate »