ಸಿಎಸ್‍ಐಆರ್-ಸಿಎಫ್‍ಟಿಆರ್‍ಐನಲ್ಲಿ ವಿದ್ಯಾರ್ಥಿ ಸಮ್ಮೇಳನಕ್ಕೆ ನೋಂದಣಿ ಆರಂಭ
ಮೈಸೂರು

ಸಿಎಸ್‍ಐಆರ್-ಸಿಎಫ್‍ಟಿಆರ್‍ಐನಲ್ಲಿ ವಿದ್ಯಾರ್ಥಿ ಸಮ್ಮೇಳನಕ್ಕೆ ನೋಂದಣಿ ಆರಂಭ

June 24, 2018

ಮೈಸೂರು: ಮೈಸೂರಿನ ಸಿಎಸ್‍ಐಆರ್-ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯವು ವಿಶಿಷ್ಠ ಸಮ್ಮೇಳನವೊಂದಕ್ಕೆ ಸಾಕ್ಷಿಯಾಗಲಿದೆ, ಭಾರತೀಯ ಆಹಾರ ವಿಜ್ಞಾನಿಗಳು ಹಾಗೂ ತಂತ್ರಜ್ಞರ ಸಂಘದ ನೆರವಿನೊಂದಿಗೆ ವಿಶೇಷವಾಗಿ ವಿದ್ಯಾರ್ಥಿಗಳೇ ಕಲ್ಪಿಸಿ, ಆಯೋಜಿಸಿ, ಸಂಘಟಿಸುತ್ತಿರುವ “ಜೈವಿಕ ವಿಜ್ಞಾನದಲ್ಲಿ ಸಂಶೋಧನೆಗಳ ಮುನ್ನಡೆ” ಕುರಿತ ಸಿಎಸ್‍ಆರ್‍ಐ-ಸಿಎಫ್‍ಟಿಆರ್‍ಐ-ವಿದ್ಯಾರ್ಥಿಗಳ ಸಮ್ಮೇಳನ (ಸಿಸಿಎಸ್‍ಎಸ್2018) ಜುಲೈ 13ರಂದು ಸಿಎಫ್‍ಟಿಆರ್‍ಐನಲ್ಲಿ ಜರುಗಲಿದೆ.

ಸಮ್ಮೇಳನವು ವಿವಿಧ ಜೀವ ವಿಜ್ಞಾನದ ಶಾಖೆಗಳಲ್ಲಿ ಸಂಶೋಧನೆ ನಡೆಸುತ್ತಿರುವ ವಿದ್ಯಾರ್ಥಿಗಳು ಹಾಗೂ ಸಂಶೊಧಕರ ನಡುವೆ ನಿಕಟ ಮಾತುಕತೆಗೆ ರಂಗವಾಗಲಿದೆ. ಸಿಎಸ್‍ಐಆರ್-ಸಿಎಫ್‍ಟಿಆರ್‍ಐ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಜೀವ ವಿಜ್ಞಾನ ವಿಷಯದಲ್ಲಿ ಸಂಶೋಧನೆ ನಡೆಸುತ್ತಿರುವವರೆಲ್ಲರೂ ಇದರಲ್ಲಿ ಪಾಲ್ಗೊಳ್ಳಲು ನೋಂದಾಯಿಸಿಕೊಳ್ಳಬಹುದು. ಸಮ್ಮೇಳನಕ್ಕೆ ನೋಂದಣಿ ಮುಕ್ತವಾಗಿದ್ದು, ಜೂನ್ 25 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಶ್ರೀ ವಿ.ಪಿ.ಮಹೇಂದ್ರ ಸಂಘಟನಾ ಕಾರ್ಯದರ್ಶಿ ಮೊ.7411905072 ಇವರನ್ನು ಸಂಪರ್ಕಿಸಬಹುದು.

Translate »