ರಾಷ್ಟ್ರೀಯ ಪಂಚಕರ್ಮ ಕಾರ್ಯಾಗಾರಕ್ಕೆ ಚಾಲನೆ
ಮೈಸೂರು

ರಾಷ್ಟ್ರೀಯ ಪಂಚಕರ್ಮ ಕಾರ್ಯಾಗಾರಕ್ಕೆ ಚಾಲನೆ

June 24, 2018

ಮೈಸೂರು: ಜೆಎಸ್‍ಎಸ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾ ಲಯ ಮತ್ತು ಆಸ್ಪತ್ರೆ, ಪಂಚಕರ್ಮ ಸ್ನಾತಕೋತ್ತರ ವಿಭಾಗದವರು ಹಮ್ಮಿಕೊಂಡಿದ್ದ 6 ದಿನಗಳ ರಾಷ್ಟ್ರೀಯ ಪಂಚಕರ್ಮ ಕಾರ್ಯಾಗಾರ (ಎಲ್‍ಎಂಇ)ವನ್ನು ಕಾಲೇಜಿನ ಸಭಾಂಗಣದಲ್ಲಿ ಉದ್ಘಾಟಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ ಮೈಸೂರಿನ ಉಪನಿರ್ದೇಶಕ ಡಾ. ಲಕ್ಷ್ಮೀ ನಾರಾಯಣ ಶೆಣೈ ನಂತರ ಮಾತನಾಡುತ್ತಾ, ಆಯುರ್ವೇದದಲ್ಲಿ ಜಾಗತಿಕ ಮಟ್ಟದ ಸಂಶೋಧನೆ ಹಾಗೂ ಅಂಕಿ-ಅಂಶಗಳ ಸಂಶೋಧನಾತ್ಮಕ ಪುರಾವೆಗಳ ಅಗತ್ಯಗಳ ಕುರಿತು ವಿವರಿಸಿದರು.

ಮುಂಬರುವ ದಿನಗಳಲ್ಲಿ ಆಶಾ ಕಾರ್ಯಕರ್ತರಿಗೆ ಆಯುರ್ವೇದದ ಮೂಲಭೂತ ಚಿಕಿತ್ಸೆಗಳ ಅರಿವು ಮೂಡಿಸಲು ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ ಅವರು, ಗ್ರಾಮೀಣ ಜನತೆಗಾಗಿ ಆಯು ರ್ವೇದದ ದೈನಂದಿನ ಪ್ರತಿಬಂಧಕ ಜೀವನ ಶೈಲಿಯ ಅಗತ್ಯಗಳ ಕುರಿತು ಕಾರ್ಯ ಕ್ರಮಗಳನ್ನು ರೂಪಿಸುವುದಾಗಿ ಹೇಳಿದರು. ಕಾರ್ಯಕ್ರಮದ ಅತಿಥಿಗಳಾಗಿ ಜೆಎಸ್‍ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್ ಮಾತನಾಡಿ, ಆಯುರ್ವೇದ ವೈದ್ಯಕೀಯ ಶಿಕ್ಷಣವು ಇಂದಿನ ಗುಣಮಟ್ಟ ಹಾಗೂ ಪ್ರಸ್ತುತತೆಯನ್ನು ವಿವರಿಸಿದರಲ್ಲದೆ, ಗುಣಮಟ್ಟದ ಸಂಶೋಧನಾ ಪ್ರಬಂಧಗಳ ಅಗತ್ಯತೆ ಹಾಗೂ ಅನಿವಾರ್ಯತೆಗಳ ಕುರಿತು ತಿಳಿಸಿದರು. ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಶ್ ಅ.ಉದಪುಡಿ ಅವರು ಉಪಸ್ಥಿತರಿದ್ದರು.

 

Translate »