ಹಳ್ಳಿಗಳಲ್ಲಿ ಮಿನಿ ಸೂಪರ್ ಮಾರ್ಕೆಟ್ ಆರಂಭ
ಮೈಸೂರು

ಹಳ್ಳಿಗಳಲ್ಲಿ ಮಿನಿ ಸೂಪರ್ ಮಾರ್ಕೆಟ್ ಆರಂಭ

June 24, 2018

ಬೆಂಗಳೂರ: ಗ್ರಾಮೀಣ ಪ್ರದೇಶದ ಯುವಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರಾಜ್ಯಾದ್ಯಂತ ಹಳ್ಳಿಗಳಲ್ಲಿ ಮಿನಿ ಸೂಪರ್ ಮಾರ್ಕೆಟ್ ಆರಂಭಿಸಲು ಮುಂದಾಗಿದೆ.

ಹಳ್ಳಿಗಳಲ್ಲಿ ಮಿನಿ ಸೂಪರ್ ಮಾರ್ಕೆಟ್ ಆರಂಭಿಸಲು ಸರ್ಕಾರ ಸದ್ಯ 5 ಸಾವಿರ ಗ್ರಾಮೀಣ ಉದ್ಯಮಿಗಳನ್ನು ಟಾರ್ಗೆಟ್ ಮಾಡುತ್ತಿದ್ದು, ಪ್ರತಿ ಜಿಲ್ಲೆಯಲ್ಲೂ 200 ಮಿನಿ ಸೂಪರ್ ಮಾರ್ಕೆಟ್‍ಗಳನ್ನು ಆರಂಭಿಸುವ ಯೋಚನೆ ಇದೆ. ಈ ಸಂಬಂಧ ಶೀಘ್ರದಲ್ಲೇ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಉತ್ಪನ್ನಗಳ ಖರೀದಿಗೆ ರಾಜ್ಯ ಸರ್ಕಾರ ಯಾವುದೇ ಹಣಕಾಸಿನ ನೆರವು ನೀಡುವುದಿಲ್ಲ. ಆದರೆ ಗ್ರಾಮೀಣ ಯುವಕರ ಮತ್ತು ಕಂಪನಿಗಳ ನಡುವೆ ಸೇತುವೆಯಾಗಿ ಕೆಲಸ ಮಾಡಲಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆ ಪ್ರಮುಖ ಉತ್ಪನ್ನ ತಯಾರಿಕಾ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಿದೆ. ಮಿನಿ ಸೂಪರ್ ಮಾರ್ಕೆಟ್ ಗಳಲ್ಲಿ ಸೋಪ್ಸ್, ಟೂತ್ ಪೇಸ್ಟ್, ಪ್ಯಾಕೇಜಡ್ ಫೂಟ್ಸ್, ಬಿಸ್ಕಿಟ್ಸ್, ಹಾಲು ಉತ್ಪನ್ನ ಮತ್ತು ತರಕಾರಿ ಸೇರಿದಂತೆ ನಿತ್ಯ ಬಳಕೆಯ ಎಲ್ಲಾ ವಸ್ತುಗಳು ಸಿಗಲಿವೆ. ಸಬ್ಸಿಡಿ ದರದಲ್ಲಿ ಉತ್ಪನ್ನಗಳನ್ನು ಸರಬರಾಜು ಮಾಡುವ ಕಂಪನಿಗಳೊಂದಿಗೆ ನಾವು ಮಾತುಕತೆ ನಡೆಸುತ್ತಿದ್ದೇವೆ. ಇದರಿಂದ ಸಣ್ಣ ಉದ್ಯಮಿಗಳಿಗೆ ಮತ್ತು ಹಳ್ಳಿ ಯುವಕರಿಗೆ ಸಹಾಯವಾಗಲಿದೆ ಎಂದು ಖರ್ಗೆ ಹೇಳಿದ್ದಾರೆ.

ಸದ್ಯ ಗ್ರಾಮೀಣ ಪ್ರದೇಶದ ಜನ ಪ್ರತಿಯೊಂದಕ್ಕೂ ಸಮೀಪದ ಪಟ್ಟಣಗಳಿಗೆ ಹೋಗುತ್ತಿದ್ದಾರೆ. ಈ ಮಿನಿ ಸೂಪರ್ ಮಾರ್ಕೆಟ್ ಆರಂಭಿಸುವುದರಿಂದ ಅಗತ್ಯ ವಸ್ತುಗಳು ದೊರೆಯುವಂತಾಗುತ್ತದೆ ಎಂದಿದ್ದಾರೆ.

ಮಿನಿ ಸೂಪರ್ ಮಾರ್ಕೆಟ್ ಆರಂಭಿಸುವ ಕಂಪನಿಗಳಿಗೆ ರಾಜ್ಯ ಸರ್ಕಾರ ಸಹಾಯ ಮಾಡಲಿದೆ. ಇವು ನಗರದ ಪ್ರದೇಶದಲ್ಲಿರುವಷ್ಟು ದೊಡ್ಡದಾಗಿರುವುದಿಲ್ಲ. ಒಂದು ಸಣ್ಣ ಕೋಣೆ ಅಥವಾ ಕಟ್ಟಡಲ್ಲೂ ಮಿನಿ ಸೂಪರ್ ಮಾರ್ಕೆಟ್ ಆರಂಭಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.

Translate »