ಪರಿಶಿಷ್ಟ 10,600 ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಿದೆ ಸಮೃದ್ಧಿ ಯೋಜನೆ
ಮೈಸೂರು

ಪರಿಶಿಷ್ಟ 10,600 ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಿದೆ ಸಮೃದ್ಧಿ ಯೋಜನೆ

October 31, 2018

ಬೆಂಗಳೂರು: ಪರಿಶಿಷ್ಟ ಜಾತಿ, ಪಂಗಡದ 10,600 ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಸಮೃದ್ಧಿ ಯೋಜನೆ ಜಾರಿಗೊಳ್ಳಲಿದೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ, ರಾಜ್ಯಾದ್ಯಂತ ಪರಿಶಿಷ್ಟ ಜಾತಿ, ಪಂಗಡದ ನಿರುದ್ಯೋಗಿಗಳಿಗೆ 800 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಿ ಉದ್ಯೋ ಗಾವಕಾಶ ಕಲ್ಪಿಸಲಾಗುವುದು ಎಂದರು.

ಇದು ರಾಷ್ಟ್ರದಲ್ಲೇ ಪ್ರಥಮ ಯೋಜನೆಯಾಗಿದೆ. ಖಾಸಗಿ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಯೋಜನೆ ಜಾರಿಗೆ ತರಲಾಗುತ್ತದೆ. ದೇಶೀ ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಗಳಿಸಿರುವ ಪ್ರತಿಷ್ಠಿತ ಸಂಸ್ಥೆ ಗಳಾದ ಬಾಟಾ, ನೀಲಗಿರೀಸ್, ಹಟ್ಟಿ ಕಾಫಿ, ಪ್ಯಾರಾಗಾನ್, ಮೇರು, ವೋಲ ಸೇರಿ 60ಕ್ಕೂ ಹೆಚ್ಚು ಕಂಪನಿ ಗಳ ಜೊತೆ ಚರ್ಚೆ ನಡೆ ಸಿದ್ದು, ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ. 30 ಕಂಪನಿಗಳು ಒಪ್ಪಂ ದಕ್ಕೆ ಸಹಿ ಹಾಕಿವೆ. ಕಂಪನಿಗಳ ಶಾಖೆ ಆರಂಭ ಹಾಗೂ ನಿರ್ವಹಣೆಗೆ ಪರಿಶಿಷ್ಟ ಜಾತಿ, ಪಂಗಡದ ಉದ್ಯೋ ಗಾಕಾಂಕ್ಷಿಗಳಿಗೆ ಅವಕಾಶ ಮಾಡಿಕೊಡ ಲಾಗುವುದು. ಕಂಪನಿಗಳಿಂದ ತರಬೇತಿ ಪಡೆದು, ದೃಢೀಕರಣ ಪತ್ರ ತರುವ ಅಭ್ಯ ರ್ಥಿಗೆ 10 ಲಕ್ಷ ರೂ.ವರೆಗೆ ಅನುದಾನ ನೀಡಲಾಗುವುದು. ಇದರಿಂದ ಪರಿಶಿಷ್ಟ ಜಾತಿ, ಪಂಗಡದ ನಿರುದ್ಯೋಗಿಗಳು ಉದ್ಯೋ ಗಸ್ಥರಾಗಲು ಹಾಗೂ

ಖಾಸಗಿ ಕಂಪನಿಗಳ ವಹಿವಾಟು ವಿಸ್ತರಣೆಗೆ ಇದು ಉತ್ತಮ ಯೋಜನೆಯಾಗಿದ್ದು, ಅಭ್ಯರ್ಥಿಗಳ ತರಬೇತಿ ವೆಚ್ಚವನ್ನು ಖಾಸಗಿ ಕಂಪನಿಗಳೇ ಭರಿಸಬೇಕೆಂಬ ಷರತ್ತು ವಿಧಿಸಲಾಗಿದೆ ಎಂದರು. ಸರ್ಕಾರದ ಅನುದಾನ ದುರ್ಬಳಕೆ ತಡೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಗ್ರಾಮೀಣ ಅಭ್ಯರ್ಥಿಗಳ ಆಯ್ಕೆಗೆ ಆದ್ಯತೆ ನೀಡಲಾಗುವುದು. ಗ್ರಾಮೀಣ ಮಾರುಕಟ್ಟೆಯಲ್ಲಿ ಸಮೃದ್ಧಿ ಯೋಜನೆ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ, ನವೆಂಬರ್ 7ರಿಂದ ಕಲ್ಯಾಣ ಕೇಂದ್ರ ವೆಬ್‍ಸೈಟ್‍ನಲ್ಲಿ ಅರ್ಜಿಗಳು ಲಭ್ಯವಿರಲಿವೆ. ವಿವರಗಳೊಂದಿಗೆ ಅರ್ಜಿ ಭರ್ತಿ ಮಾಡಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ಇದೆ. ಯೋಜನೆಯ ಮೂಲ ಬಂಡವಾಳ ವೆಚ್ಚ 10 ಲಕ್ಷ ರೂ. ಮೀರಿದರೆ, ಅಂತಹ ಫಲಾನುಭವಿಗಳಿಗೆ ಬ್ಯಾಂಕ್ ಸಾಲ ಸೌಲಭ್ಯ ಕೊಡಿಸಲಾಗುವುದು ಎಂದರು.

Translate »