ಸಂಸದ ಪ್ರತಾಪ್ ಸಿಂಹ, ನಗರ ಪೊಲೀಸ್ ಕಮೀಷ್ನರ್ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್, ಎಸ್ಪಿ ಅಮಿತ್ ಸಿಂಗ್ ಉಪಸ್ಥಿತಿ ಮೈಸೂರು: ಮೈಸೂರಿನ ಚಾಮುಂಡಿಬೆಟ್ಟ ತಪ್ಪಲಿನ ಆಲೀವ್ ಗಾರ್ಡನ್‍ನ ಸಮಾವೇಶ ಸಭಾಂಗಣದಲ್ಲಿ ಜೂನ್ 14ರಂದು ಸಂಜೆ 4.30 ಗಂಟೆಗೆ 45ನೇ ವಾರ್ಷಿಕ ‘ನೈಟ್ಸ್ ಇನ್ ಖಾಕಿ’ ಪೊಲೀಸ್ ಪಾರಿತೋಷಕ ಪ್ರಧಾನ-2018 ಕಾರ್ಯಕ್ರಮ ನಡೆಯಲಿದೆ. ಮೈಸೂರು ರೌಂಡ್ ಟೇಬಲ್-21 (ಒಖಖಿ-21) ಮತ್ತು ಮೈಸೂರು ಲೇಡೀಸ್ ಸರ್ಕಲ್-9 (ಒಐಅ-9) ಸಂಯುಕ್ತಾಶ್ರಯ ದಲ್ಲಿ ಏರ್ಪಡಿಸಿರುವ ಸಮಾರಂಭದಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳು…
ಸೋಮವಾರ ಮೈಸೂರಲ್ಲಿ 2.0 ಮಿಮೀ ಮಳೆ
June 13, 2018ಮೈಸೂರು: ಸೋಮವಾರ ಮೈಸೂರಲ್ಲಿ 2.0ಮಿಮೀ ಮಳೆಯಾಗಿದೆ. ನಂಜನಗೂಡು 1.87, ಕೆ.ಆರ್.ನಗರ 4.25, ಹೆಚ್.ಡಿ.ಕೋಟೆ 33.6, ಪಿರಿಯಾಪಟ್ಟಣ 8.42 ಮಿಮೀ ಮಳೆಯಾಗಿದೆ. ಹುಣಸೂರು ತಾಲೂಕು ಆಡಳಿತದಿಂದ ಮಳೆಯಾಗಿರುವ ಬಗ್ಗೆ ಇಲ್ಲಿನ ಸಿಬ್ಬಂದಿ ವರದಿ ನೀಡುತ್ತಿಲ್ಲ ಹಾಗೂ ತಿ.ನರಸೀ ಪುರದಲ್ಲಿ ಮಳೆಯಾಗಿಲ್ಲ ಎಂದು ಜಿಲ್ಲಾಧಿ ಕಾರಿಗಳ ಕಂಟ್ರೋಲ್ ಸಿಬ್ಬಂದಿ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಕೆಆರ್ ಸ್ ಅಣೆಕಟ್ಟಿನಲ್ಲಿ 84.50 ಅಡಿ ನೀರಿದ್ದು, 21,476 ಕ್ಯೂಸೆಕ್ ಒಳ ಹರಿವಿದೆ. 317 ಕ್ಯೂಸೆಕ್ ಹೊರ ಹರಿವಿದೆ. ಕಬಿನಿ ಜಲಾಶಯದಲ್ಲಿ 2271.02 ಅಡಿ ನೀರಿದ್ದು,…
ಮೈಸೂರು ಮೆಡಿಕಲ್ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ. ಎಸ್.ಕೆ. ಶಿವಕುಮಾರ್ ಇನ್ನಿಲ್ಲ
June 13, 2018ಮೈಸೂರು: ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋ ಧನಾ ಸಂಸ್ಥೆ ಫೋರೆನ್ಸಿಕ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಸ್.ಕೆ. ಶಿವಕುಮಾರ್ ಅವರು ತೀವ್ರ ಹೃದಯಾಘಾತದಿಂದ ಸೋಮವಾರ ರಾತ್ರಿ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿ, ಅಪಾರ ವೈದ್ಯಕೀಯ ಶಿಷ್ಯವೃಂದ ಹಾಗೂ ಬಂಧು-ಬಳಗವನ್ನು ಅಗಲಿದ್ದಾರೆ. ಅವರ ಅಂತ್ಯ ಕ್ರಿಯೆ ಮೈಸೂರಿನ ವಿಜಯನಗರ ನಾಲ್ಕನೇ ಹಂತದಲ್ಲಿರುವ ಮುಕ್ತಿಧಾಮದಲ್ಲಿ ಇಂದು ಮಧ್ಯಾಹ್ನ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೈಸೂರಿನ ವಿಜಯನಗರ 4ನೇ ಹಂತದ ಮರಿಮಲ್ಲಪ್ಪ ವಿದ್ಯಾಸಂಸ್ಥೆ ಬಳಿ ವಾಸವಾಗಿದ್ದ ಡಾ….
ಮುಸ್ಲಿಂ ಬಾಂಧವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಫ್ತಿಯಾರ್ ಕೂಟ
June 13, 2018ಮೈಸೂರು: ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು-ಬೆಂಗಳೂರು ರಸ್ತೆಯ ಪ್ರೆಸ್ಟೀಜ್ ಕನ್ವೆನ್‍ಷನ್‍ಹಾಲ್‍ನಲ್ಲಿ ಇಫ್ತಿ ಯಾರ್ ಕೂಟವನ್ನು ಆಯೋಜಿಸಿದ್ದರು. ಬನ್ನಿಮಂಟಪದ ಪ್ರೆಸ್ಟಿಜ್ ಕನ್ವೆನ್‍ಷನ್ ಹಾಲ್‍ನಲ್ಲಿ ಮಂಗಳವಾರ ಸಂಜೆ ಏರ್ಪಡಿ ಸಿದ್ದ ಕೂಟದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ನಾಡಿನ ಜನತೆಗೆ ರಂಜಾನ್ ಹಬ್ಬದ ಶುಭಾಶಯ ಕೋರಿ ದರು. ನಂತರ ತಾವೇ ಖುದ್ದು ನಿಂತು ಊಟಬಡಿಸಿ, ಅವರೊಂದಿಗೆ ಊಟ ಮಾಡಿದರು. ಈ ಕೂಟದಲ್ಲಿ ಸಾವಿರಾರು ಮಂದಿ ಮುಸ್ಲಿಂ ಬಾಂಧವರು ಭಾಗವ ಹಿಸಿ ಬಗೆಬಗೆಯ ಖಾದ್ಯ ಸವಿದರು….
ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕೇವಲ ಅಧಿಕಾರಿಗಳ ಜವಾಬ್ದಾರಿ ಮಾತ್ರವಲ್ಲ, ಸಾರ್ವಜನಿಕರ ಸಹಭಾಗಿತ್ವವೂ ಹೌದು: ಮೈಸೂರು ಜಿಲ್ಲಾ ನ್ಯಾಯಾಧೀಶ ಎಸ್.ಕೆ. ವಂಟಿಗೊಡಿ ಅಭಿಮತ
June 13, 2018ಮೈಸೂರು: ಮಕ್ಕಳ ಬಾಲ್ಯವನ್ನು ಬಲಿ ತೆಗೆದುಕೊಳ್ಳುವ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕೇವಲ ಇಲಾಖಾಧಿಕಾರಿಗಳ ಜವಾಬ್ದಾರಿ ಮಾತ್ರ ವಲ್ಲ. ಇದಕ್ಕೆ ಸಾರ್ವಜನಿಕರ ಸಹಭಾಗಿತ್ವವೂ ಅಷ್ಟೇ ಮುಖ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ.ವಂಟಿ ಗೊಡಿ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ರಾಶ್ರಯದಲ್ಲಿ ಮೈಸೂರಿನ ಜೆಎಲ್‍ಬಿ ರಸ್ತೆಯ ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಮಂಗಳ ವಾರ ಹಮ್ಮಿಕೊಂಡಿದ್ದ…
ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಅವಶ್ಯ
June 13, 2018ಮೈಸೂರು: ಪದವಿ ಮತ್ತು ಸ್ನಾತಕೋತ್ತರ ಪದವಿ ಪೂರೈಸಿರುವ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸುವಂ ತಾಗಬೇಕು. ಇದಕ್ಕೆ ಎಲ್ಲಾ ರೀತಿಯ ತರಬೇತಿ ಪಡೆಯು ವುದು ಅಗತ್ಯ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪ್ರೊ.ದಯಾನಂದ ತಿಳಿಸಿದರು. ಜೆಎಲ್‍ಬಿ ರಸ್ತೆಯ ಲಕ್ಷ್ಮೀಪುರಂ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಜ್ಞಾನ ಬುತ್ತಿ ಸಂಸ್ಥೆ ವತಿಯಿಂದ ಯುಜಿಸಿ-ನೆಟ್ ಪರೀಕ್ಷೆ ಉಚಿತ ತರಬೇತಿ ಶಿಬಿರಾರ್ಥಿಗಳಿಗೆ ಶುಭ ಹಾರೈಸುವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೇಶಾದ್ಯಂತ ಎಲ್ಲಾ ಯುವಕರಿಗೂ ಉನ್ನತ…
ಪೇಟಿಎಂ ಮೂಲಕ ವ್ಯಕ್ತಿಗೆ 11 ಸಾವಿರ ವಂಚನೆ
June 13, 2018ಮೈಸೂರು: ಹೆಚ್‍ಡಿಎಫ್‍ಸಿ ಬ್ಯಾಂಕ್ ಗ್ರಾಹಕರೊಬ್ಬರ ಫೋರೆಕ್ಸ್ ಕಾರ್ಡ್ ಬಳಸಿ ಸಾವಿರಾರು ರೂ.ಗಳನ್ನು ಪೇಟಿಎಂ ಮೂಲಕ ಅಪರಿಚಿತರು ಡ್ರಾ ಮಾಡಿಕೊಂಡಿ ರುವ ಬಗ್ಗೆ ವರದಿಯಾಗಿದೆ. ಜಯಲಕ್ಷ್ಮೀಪುರಂ ನಿವಾಸಿ ರಾಜಗೋಪಾಲ್ ನಟರಾಜನ್ ಫೋರೆಕ್ಸ್ ಕಾರ್ಡ್ ಮೂಲಕ ಹಣ ಕಳೆದುಕೊಂಡವರು. ಅಪರಿಚಿತರು 2018ರ ಮೇ 31 ರಂದು 148 ಮತ್ತು 5 ಸಾವಿರ ರೂ., ಜೂ.2 ರಂದು 23 ರೂ., ಜೂ.3 ರಂದು ಸಾವಿರ ರೂ., ಜೂ. 4ರಂದು 30 ರೂ. ಸೇರಿದಂತೆ ಒಟ್ಟು 11,201 ರೂ.ಗಳನ್ನು ಪೇಟಿಎಂ ಮೂಲಕ ಡ್ರಾ…
ಜೂ. 18ರಿಂದ ದೇಶಾದ್ಯಂತ ಅನಿರ್ದಿಷ್ಟಾವಧಿ ಲಾರಿ ಮುಷ್ಕರ ಡೀಸೆಲ್ ದರ ಏರಿಕೆ, ವಿಮಾ ಪ್ರೀಮಿಯಂ ದರ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಮಂಡನೆ
June 13, 2018ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಲ್ ಇಂಡಿಯಾ ಕಾನ್‍ಫೆಡರೇಷನ್ ಆಫ್ ಗೂಡ್ಸ್ ವೇಕಲ್ ಓನರ್ಸ್ ಅಸೋಷಿಯೇನ್ ಜೂ.18 ರಿಂದ ದೇಶಾದ್ಯಂತ ಎಲ್ಲಾ ಸರಕು ಸಾಗಾಣೆ ವಾಹನಗಳ ಸೇವೆಗಳನ್ನು ಸ್ಥಗಿತಗೊಳಿಸಿ, ಅನಿರ್ಧಿಷ್ಟವಾಧಿ ಮುಷ್ಕರಕ್ಕೆ ಕರೆ ನೀಡಿದೆ. ಪೆಟ್ರೋಲ್-ಡೀಸೆಲ್ ದರ ಏರಿಕೆ, ವಾಹನ ಗಳ ಥರ್ಡ್ ಪಾರ್ಟಿ ವಿಮಾ ಪ್ರೀಮಿಯಂ ದರ ಹೆಚ್ಚಳ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರೆ ನೀಡಿ ರುವ ಮುಷ್ಕರಕ್ಕೆ ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ ಬೆಂಬಲ ನೀಡಿದ್ದು,…
ಸೋದರ ಮಾವನೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ
June 13, 2018ಮೈಸೂರು: ಸೋದರ ಮಾವನೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿರುವ ಘಟನೆ ಮೈಸೂರಿನ ಲಕ್ಷ್ಮೀಪುರಂ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ. ಮೈಸೂರಿನ ಸರಸ್ವತಿಪುರಂ ನಿವಾಸಿ ರಮೇಶ(23) ಎಂಬುವನೇ ತನ್ನ ಅಕ್ಕನ ಮಗಳು, ಹದಿನೇಳು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ತಲೆಮರೆಸಿಕೊಂಡಿರುವ ಯುವಕ. ಕಾಲೇಜಿಗೆ ಡ್ರಾಪ್ ಮಾಡುವುದಾಗಿ ಕರೆತಂದು ಲಕ್ಷ್ಮೀಪುರಂ ಠಾಣಾ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ ಅತ್ಯಾಚಾರ ವೆಸಗಿ ಆತ ಪರಾರಿಯಾಗಿದ್ದಾನೆ ಎಂದು ಬಾಲಕಿ ಪೋಷಕರು ದೂರು ನೀಡಿದ್ದಾರೆ. ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕೊಂಡಿರುವ…
ಮಸ್ಜದೇ ಆಜಮ್ ವತಿಯಿಂದ ಶಭೆ ಕಾದಾರ್ ಆಚರಣೆ
June 13, 2018ಮೈಸೂರು: ಮೈಸೂರಿನ ಅಶೋಕ ರಸ್ತೆಯಲ್ಲಿರುವ ಮಸ್ಜಿದ್ ಆಜಮ್ ಮರ್ಕಜ್ ಅಹಲೆ ಸುನ್ನತೋ ಜಮಾತ್‍ನಲ್ಲಿ ಶಭೆ ಕಾದಾರ್ ಆಚರಿಸಲಾಯಿತು. ಕಾರ್ಯ ಕ್ರಮದಲ್ಲಿ ಮೌಲನಾ ನಮಾಜ್ ಇ-ತರವೆ ಅವರು ಖುರಾನ್ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯದರ್ಶಿ ಎಸ್.ಎಂ. ಸೈಯದ್, ಮಾಜಿ ಸಚಿವ ತನ್ವೀರ್ ಸೇಠ್, ಪಾಲಿಕೆ ಸದಸ್ಯ ಸುಹೇಲ್ ಬೇಗ್ ಮತ್ತಿತರರು ಭಾಗವಹಿಸಿದ್ದರು.