ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಅವಶ್ಯ
ಮೈಸೂರು

ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಅವಶ್ಯ

June 13, 2018

ಮೈಸೂರು: ಪದವಿ ಮತ್ತು ಸ್ನಾತಕೋತ್ತರ ಪದವಿ ಪೂರೈಸಿರುವ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸುವಂ ತಾಗಬೇಕು. ಇದಕ್ಕೆ ಎಲ್ಲಾ ರೀತಿಯ ತರಬೇತಿ ಪಡೆಯು ವುದು ಅಗತ್ಯ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪ್ರೊ.ದಯಾನಂದ ತಿಳಿಸಿದರು.

ಜೆಎಲ್‍ಬಿ ರಸ್ತೆಯ ಲಕ್ಷ್ಮೀಪುರಂ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಜ್ಞಾನ ಬುತ್ತಿ ಸಂಸ್ಥೆ ವತಿಯಿಂದ ಯುಜಿಸಿ-ನೆಟ್ ಪರೀಕ್ಷೆ ಉಚಿತ ತರಬೇತಿ ಶಿಬಿರಾರ್ಥಿಗಳಿಗೆ ಶುಭ ಹಾರೈಸುವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶಾದ್ಯಂತ ಎಲ್ಲಾ ಯುವಕರಿಗೂ ಉನ್ನತ ಶಿಕ್ಷಣ ದೊರಕಿಸಿಕೊಡುವ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಉನ್ನತ ಶಿಕ್ಷಣ ನೀತಿಯಲ್ಲಿ ಸಾಕಷ್ಟು ಬದಲಾವಣೆ ತಂದಿವೆ. ಇದರಿಂದಾಗಿ ನಗರ ಪ್ರದೇಶದಂತೆ, ಗ್ರಾಮೀಣ ಪ್ರದೇಶದಲ್ಲೂ ಪದವಿ ಕಾಲೇಜುಗಳನ್ನು ತೆರೆದಿರುವುದರಿಂದ ಸಾವಿರಾರು ಮಂದಿ ಯುವಕ-ಯುವತಿಯರು ಪದವಿ, ಸ್ನಾತಕೋತ್ತರ ಪದವಿ ಗಳನ್ನು ಪಡೆಯುತ್ತಿದ್ದಾರೆ ಎಂದರು.

ಉನ್ನತ ಶಿಕ್ಷಣ ಮುಗಿಸುವ ಪ್ರತಿಯೊಬ್ಬರಿಗೂ ಉದ್ಯೋಗ ನೀಡುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕರ್ತವ್ಯವಾಗಿದ್ದು, ಇದಕ್ಕೆ ಪೂರಕವಾಗಿ ಪ್ರತಿ ವರ್ಷ ಐಎಎಸ್, ಐಪಿಎಸ್ ಹಾಗೂ ಇತರೆ ಇಲಾಖೆಗಳ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಖಾಲಿ ಇರುವ ಹುದ್ದೆಗಳನ್ನು ತುಂಬುತ್ತಾರೆ. ಇಂತಹ ಪರೀಕ್ಷೆ ಗಳನ್ನು ಎದುರಿಸಬೇಕಾದರೆ, ಯುವಕರಿಗೆ ಜ್ಞಾನಬುತ್ತಿ ಯಂತಹ ಸಂಸ್ಥೆಗಳ ಮಾರ್ಗದರ್ಶನ ಅತ್ಯಗತ್ಯ ಎಂದರು.

2_Page

ಕಳೆದ ಬಾರಿ ಮೈಸೂರಲ್ಲಿ ನಡೆದ ಐಎಎಸ್, ಐಪಿಎಸ್ ಸೇರಿದಂತೆ ಇತರೆ ಇಲಾಖೆಗಳ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಶೇ.50ರಷ್ಟು ಪರೀಕ್ಷೆ ಬರೆಯಲು ಶುಲ್ಕ ಕಟ್ಟಿದ್ದ ಅಭ್ಯರ್ಥಿಗಳು ಗೈರಾಗಿದ್ದರು. ಇಂತಹವರಿಗೆ ಮಾರ್ಗ ದರ್ಶನ ಕೊರತೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗೈರಾಗುತ್ತಿರುವುದು ಬೇಸರದ ಸಂಗತಿ ಎಂದರು.

ಇದೇ ಸಂದರ್ಭದಲ್ಲಿ ಇತ್ತೀಚೆಗೆ ಧಾರವಾಡ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದಿರುವ ರವೀಂದ್ರ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ನಂತರ ಸ್ಪರ್ಧಾತ್ಮಕ ಪರೀಕ್ಷೆಗಳ ಕೈಪಿಡಿ `ಜ್ಞಾನಭಂಡಾರ’ ಬಿಡುಗಡೆಗೊಳಿಸಲಾಯಿತು. ವೇದಿಕೆಯಲ್ಲಿ ರಾಣಿಚೆನ್ನಮ್ಮ ವಿವಿ ವಿಶ್ರಾಂತ ಕುಲಪತಿ ಪ್ರೊ.ಬಿ.ಆರ್. ಅನಂತನ್, ಹಿರಿಯ ಸಾಹಿತಿ ಪ್ರೊ.ಎಂಕೃಷ್ಣೇಗೌಡ, ಪ್ರೊ.ಎನ್.ಎನ್.ಪ್ರಹ್ಲಾದ್, ಪ್ರೊ.ಎಚ್.ಎಸ್. ಮಲ್ಲಿಕಾರ್ಜುನ ಶಾಸ್ತ್ರಿ, ಪ್ರೊ.ಆರ್.ಎನ್.ಪದ್ಮನಾಭ, ಡಾ.ಜಿ.ವಿ.ನರಸಿಂಹನ್, ಪ್ರೊ.ಬಿ.ಜಯಪ್ರಕಾಶ್, ಕೆ.ಸುಮತಿ ಜಯಚಂದ್ರ, ಸಂಯೋಜಕ ಸಿ.ಕೆ.ಕಿರಣ್ ಕೌಶಿಕ್, ಕಾರ್ಯದರ್ಶಿ ಹೆಚ್.ಬಾಲಕೃಷ್ಣ, ಜೈನಹಳ್ಳಿ ಸತ್ಯನಾರಾಯಣಗೌಡ, ಸಮಾಜ ಸೇವಕಿ ಮಂಜುಳಾ ಉಪಸ್ಥಿತರಿದ್ದರು. ಸುರಭಿ ರಾಮಾನುಜಂ ಪ್ರಾರ್ಥಿಸಿದರೆ, ರಾ.ರಾಮಕೃಷ್ಣ ನಿರೂಪಿಸಿದರು.

Translate »