ಬೆಂಗಳೂರು, ಮಾ.13-ಕೊರೋನಾ ವೈರಸ್ ಪೀಡಿತರ ಚಿಕಿತ್ಸೆಗೆ ಪ್ರತ್ಯೇಕವಾಗಿ ಸುಸಜ್ಜಿತ ಆಸ್ಪತ್ರೆಯನ್ನು ಬೆಂಗಳೂರಿ ನಲ್ಲಿ ಮೀಸಲಿಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ. ಕೊರೋನಾ ಪೀಡಿತರ ಚಿಕಿತ್ಸೆಗೆಂದು ನುರಿತ ತಜ್ಞರನ್ನು ನೇಮಕ ಮಾಡಲಾಗುವುದು. ನಗರದಲ್ಲಿ ಯಾವ ಆಸ್ಪತ್ರೆ ಎಂದು ಇನ್ನೂ ಗುರುತಿಸಿಲ್ಲ. ಅಲ್ಲಿ 300ರಿಂದ 450 ಬೆಡ್‍ಗಳನ್ನು ವ್ಯವಸ್ಥೆ ಮಾಡಲಾಗುವುದು. ಪ್ರತ್ಯೇಕ ಆಸ್ಪತ್ರೆ ಮಾಡುವ ಮೂಲಕ ವೈರಸ್ ಹಬ್ಬುವುದನ್ನು ತಡೆಗಟ್ಟ ಬಹುದು ಎಂದು ಹೇಳಿದರು. ಬೆಂಗಳೂರಿನಲ್ಲಿ ಕೊರೋನಾ ಪೀಡಿತರಿಗೆ ಆಶ್ರಯ ಕಲ್ಪಿಸಲು…
ಮಹಾರಾಣಿ ಕೆಂಪನಂಜಮ್ಮಣ್ಣಿ ಜನ್ಮ ದಿನಾಚರಣೆಯಲ್ಲಿ ಸಾಧಕಿಯರಿಗೆ ಸನ್ಮಾನ
March 14, 2020ಮೈಸೂರು,ಮಾ.12(ಆರ್‍ಕೆಬಿ)- ಅಂತಾ ರಾಷ್ಟ್ರೀಯ ಮಹಿಳಾ ದಿನ ಹಾಗೂ ಮಹಾ ರಾಣಿ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಅಮ್ಮ ಜನ್ಮದಿನ ಆಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕಿಯರನ್ನು ಸನ್ಮಾ ನಿಸಿ, ಮಹಾರಾಣಿ ಮಹಿಳಾ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿನಿರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕರ್ನಾಟಕ ಸೇನಾಪಡೆ ಮೈಸೂರು ಜಿಲ್ಲಾ ಘಟಕದ ವತಿಯಿಂದ ಮೈಸೂರಿನ ಜೆಎಲ್‍ಬಿ ರಸ್ತೆ ರೋಟರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ `ಸುಧರ್ಮಾ’ ಸಂಸ್ಕøತ ಪತ್ರಿಕೆಯ ಕೆ.ಎಸ್.ಜಯಲಕ್ಷ್ಮಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕøತ ಹೆಚ್.ಪಿ. ರಾಣಿಪ್ರಭಾ,…
ಪುಟ್ಟ ಮಕ್ಕಳ ವಾಕ್, ಶ್ರವಣ ದೋಷ ನಿರ್ಲಕ್ಷಿಸದಿರಿ
March 14, 2020ಮೈಸೂರು, ಮಾ.13(ಆರ್‍ಕೆಬಿ)-ಶಾಲೆಗೆ ಹೋಗುವ ಪುಟ್ಟ ಮಕ್ಕಳಲ್ಲಿ ಕಿವಿ ಕೇಳಿಸ ದಿರುವುದು, ತೊದಲು ಮಾತು ಮೊದ ಲಾದ ಸಮಸ್ಯೆಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡದೆ ತಕ್ಷಣವೇ ಚಿಕಿತ್ಸೆ ಕೊಡಿಸಿ ಎಂದು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್) ನಿರ್ದೇಶಕಿ ಡಾ. ಎಂ.ಪುಷ್ಪಾವತಿ ಅವರು ಪೋಷಕ ರಿಗೆ ಕಿವಿಮಾತು ಹೇಳಿದರು. ಮೈಸೂರಿನ ಮಾಧವಕೃಪಾದಲ್ಲಿ `ಸಕ್ಷಮ’ ದಿಂದ ಶುಕ್ರವಾರ ಏರ್ಪಡಿಸಿದ್ದ ಮೈಸೂರು ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜನಿಸಿದ ಮಗುವಿಗೆ ಕಿವಿ ಕೇಳಿಸುತ್ತದೆಯೇ ಎಂದು ಬಹಳಷ್ಟು ಪೋಷಕರು ಪರೀಕ್ಷಿ…
ಒಡನಾಡಿಯಿಂದ ನಾಳೆ `ಯೋಗ ಸ್ಟಾಪ್ ಟ್ರಾಫಿಕಿಂಗ್’
March 14, 2020ಮೈಸೂರು, ಮಾ.13 (ಆರ್‍ಕೆಬಿ)- ಮಾನವ ಅಕ್ರಮ ಸಾಗಣೆ ತಡೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮಾ.15ರಂದು ಮೈಸೂರಿನ ಅರಮನೆ ಕೋಟೆ ಆಂಜ ನೇಯಸ್ವಾಮಿ ದೇವಸ್ಥಾನದ ಬಳಿ `ಯೋಗ ಸ್ಟಾಪ್ ಟ್ರಾಫಿಕಿಂಗ್’ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಒಡನಾಡಿ ಸೇವಾ ಸಂಸ್ಥೆ ನಿರ್ದೇಶಕರಾದ ಸ್ಟ್ಯಾನ್ಲಿ-ಪರಶು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಯೋಗವನ್ನೇ ಸಾಧನವನ್ನಾಗಿಸಿಕೊಂಡು ಮಾನವ ಅಕ್ರಮ ಸಾಗಣೆ ಹಾಗೂ ಲೈಂಗಿಕ ಶೋಷಣೆ ವಿರುದ್ಧ ಎಲ್ಲಾ ದೇಶಗಳ ಸಂಸ್ಕøತಿ ಹಾಗೂ ಗಡಿಗಳನ್ನು ದಾಟಿ ಒಂದು ಅಭಿಯಾನವಾಗಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇಂಗ್ಲೆಂಡ್, ಅಮೆರಿಕ,…
ರಾಜ್ಯಪಾಲರ ಭೇಟಿ ಬಳಿಕ ವಿಶ್ವಾಸಮತ ಯಾಚಿಸಲು ಸಿದ್ಧ ಎಂದ ಕಮಲ್‍ನಾಥ್
March 14, 2020ಭೋಪಾಲ್, ಮಾ.13- ಮೂರು ದಿನಗಳ ಹಿಂದೆ 22 ಕಾಂಗ್ರೆಸ್ ಬಂಡಾಯ ಶಾಸಕರು ರಾಜೀನಾಮೆ ನೀಡಿರು ವುದರಿಂದ ಮಧ್ಯ ಪ್ರದೇಶ ರಾಜಕೀಯದಲ್ಲಿ ಬಿಕ್ಕಟ್ಟು ತಲೆದೋರಿರುವಂತೆ ಮುಖ್ಯಮಂತ್ರಿ ಕಮಲ್‍ನಾಥ್ ಅವರು ಶುಕ್ರವಾರ ರಾಜ್ಯಪಾಲ ಲಾಲ್ ಜಿ ಟಂಡನ್ ಅವರನ್ನು ಭೇಟಿ ಮಾಡಿದರು. ಶುಕ್ರವಾರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿದ ಕಮಲ್ ನಾಥ್ ಅವರು, 3 ಪುಟಗಳ ಪತ್ರವೊಂದನ್ನು ಸಲ್ಲಿಸಿದ್ದಾರೆ. ಅಲ್ಲದೆ ಬಿಜೆಪಿ ತನ್ನ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ. ರಾಜ್ಯಪಾಲರಿಗೆ…
ನಮ್ಮ ಶಾಸಕರನ್ನು ದಿಗ್ಬಂಧನದಲ್ಲಿಟ್ಟಿದ್ದಾರೆ: ಡಿಕೆಶಿಯಿಂದ ಡಿಜಿಪಿಗೆ ದೂರು
March 14, 2020ಬೆಂಗಳೂರು, ಮಾ.13- ಮಧ್ಯ ಪ್ರದೇಶದ ಕಾಂಗ್ರೆಸ್ ಶಾಸಕರನ್ನು ಅಕ್ರಮವಾಗಿ ದಿಗ್ಬಂಧನದಲ್ಲಿಟ್ಟಿದ್ದಾರೆ ಎಂದು ಆರೋಪಿಸಿ ನಿಯೋಜಿತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಡಿಜಿಪಿಗೆ ದೂರು ನೀಡಿದ್ದಾರೆ. ಮಧ್ಯಪ್ರದೇಶದ ಬಿಜೆಪಿ ಮುಖಂಡ ಜೀತು ಪಟ್ವಾರಿ ಹಾಗೂ ಮಧ್ಯಪ್ರದೇಶದ ಕಾಂಗ್ರೆಸ್ ಎಂಎಲ್‍ಎ ಮನೋಜ್ ಚೌಧರಿಯನ್ನು ಬೆಂಗಳೂರಿಗೆ ಕರೆತಂದು ಅಕ್ರಮವಾಗಿ ಇರಿಸಿಕೊಂಡಿದ್ದಾರೆ. ಮನೋಜ್ ಚೌಧರಿ ತಂದೆ ನಾರಾಯಣ ಚೌಧರಿ ಮಗನನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದಾರೆ. ನನ್ನ ಮಗ ಮನೋಜ್ ಚೌಧರಿ ನನಗೆ ಕರೆ ಮಾಡಿ, ನನ್ನನ್ನು ದಿಗ್ಬಂಧನ ದಲ್ಲಿಟ್ಟಿದ್ದಾರೆ, ಬಂದು ನನ್ನನ್ನು…
ಕೊರೊನಾ: ಭಯ ಅನಗತ್ಯ, ಮುನ್ನೆಚ್ಚರಿಕೆ ಅತ್ಯಗತ್ಯ
March 14, 2020ಮೈಸೂರು, ಮಾ.13(ಆರ್‍ಕೆಬಿ)- ವಿಶ್ವಾ ದ್ಯಂತ ಜನರನ್ನು ತಲ್ಲಣಗೊಳಿಸಿರುವ ಕೋವಿದ್-19 (ಕೊರೊನಾ ವೈರಸ್) ಬಗ್ಗೆ ಭಯ ಪಡಬೇಕಾಗಿಲ್ಲ. ಆದರೆ ಮುನ್ನೆಚ್ಚ ರಿಕೆ ಅಗತ್ಯ ಎಂದು ಮೈಸೂರು ಮೆಡಿಕಲ್ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ (ಮಾ) ಮತ್ತು ಮೈಸೂರು ಆಸ್ಪತ್ರೆಗಳು, ನರ್ಸಿಂಗ್ ಹೋಂ, ಡಯಾಗ್ನಸ್ಟಿಕ್ ಮತ್ತು ಕ್ಲಿನಿಕ್‍ಗಳ ಸಂಘ (ಮಹಾನ್) ತಿಳಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ವೈದ್ಯರು ಕೊರೊನಾ ವೈರಸ್ ಕುರಿತು ಮಾಹಿತಿ ನೀಡಿದರು. ಮಹಾನ್ ಅಧ್ಯಕ್ಷ ಡಾ.ಕೆ. ಜಾವಿದ್ ನಯೀಮ್ ಮಾತನಾಡಿ,…
ಚಾಮರಾಜನಗರ ಜಿಲ್ಲೆಯಲ್ಲಿ ಹದಗೆಟ್ಟಿರುವ ನೀರು ಶುದ್ಧೀಕರಣ ಘಟಕಗಳ ಶೀಘ್ರ ದುರಸ್ತಿ ಸಂದೇಶರಿಗೆ ಸಚಿವ ಈಶ್ವರಪ್ಪ ಭರವಸೆ
March 14, 2020ಚಾಮರಾಜನಗರ, ಮಾ.13-ಚಾಮರಾಜನಗರ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶ ಗಳಲ್ಲಿ ಅಳವಡಿಸಿರುವ 24 ನೀರು ಶುದ್ಧೀಕರಣ ಘಟಕಗಳು ತಾತ್ಕಾಲಿಕ ದುರಸ್ತಿಯಲ್ಲಿದ್ದು, ಎನ್. ಆರ್.ಡಬ್ಲ್ಯು.ಎಸ್. ಟಾಸ್ಕ್‍ಫೋರ್ಸ್ ಹಾಗೂ ಇತರೆ ಏಜೆನ್ಸಿಗಳ ಮೂಲಕ ಅವುಗಳನ್ನು ಶೀಘ್ರವಾಗಿ ದುರಸ್ತಿಗೊಳಿಸಿ ಸುಸ್ಥಿತಿಯಲ್ಲಿಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಇಂದು ವಿಧಾನ ಪರಿಷತ್ತಿಗೆ ತಿಳಿಸಿದರು. ಬೇಸಿಗೆ ಕಾಲಿಟ್ಟಿದ್ದು, ಚಾಮರಾಜನಗರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾಗಿರುವುದರಿಂದ ಗ್ರಾಮಗಳಲ್ಲಿ ಕೆಟ್ಟು ನಿಂತಿರುವ ನೀರು ಶುದ್ಧಿಕರಣ ಘಟಕಗಳನ್ನು ಕೂಡಲೇ ದುರಸ್ತಿಗೊಳಿಸುವ…
ಮತ್ತೆ ನವಿ ಬೆಂಗಳೂರು ನಿರ್ಮಾಣ ಪ್ರಸ್ತಾಪ
March 14, 2020ವಿಧಾನಸಭೆಯಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಇಂಗಿತ ಕೈಗಾರಿಕಾಭಿವೃದ್ಧಿಯ ದೃಷ್ಟಿಯಿಂದ ಅನಿವಾರ್ಯತೆ ಮನವರಿಕೆ ಬೆಂಗಳೂರು, ಮಾ.13(ಕೆಎಂಶಿ)-ನವಿ ಮುಂಬಯಿ ಮಾದರಿಯಲ್ಲಿ ನವ ಬೆಂಗಳೂರು ನಿರ್ಮಾಣ ಪ್ರಸ್ತಾಪ ಮತ್ತೆ ಮುನ್ನ ಲೆಗೆ ಬಂದಿದ್ದು, ಆ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ ಎಂದು ಕೈಗಾರಿಕೆ ಸಚಿವ ಜಗ ದೀಶ್ ಶೆಟ್ಟರ್ ವಿಧಾನ ಸಭೆಯಲ್ಲಿ ತಿಳಿಸಿದ್ದಾರೆ. ಪ್ರಶ್ನೋತ್ತರ ವೇಳೆ ಯಲ್ಲಿ ಕಾಂಗ್ರೆಸ್‍ನ ಎನ್.ಎಸ್. ಹ್ಯಾರೀಸ್ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಬೆಂಗಳೂರಿಗೆ 50 ಕಿ.ಮೀ. ದೂರದಲ್ಲಿ ನವ ಬೆಂಗಳೂರು ನಿರ್ಮಾಣದ ಬಗ್ಗೆ ಚರ್ಚೆಗಳು…
`ಶತಮಾನದ ಸಂತ’ ಚುಟುಕು ಕೃತಿ ಇಂದು ಬಿಡುಗಡೆ
March 14, 2020ಮೈಸೂರು,ಮಾ.13(ಪಿಎಂ)-ಕೌಸ್ತುಭ ಮಾಸಪತ್ರಿಕೆ, ಚುಟುಕು ಸಾಹಿತ್ಯ ಪರಿ ಷತ್ (ಚುಸಾಪ) ಮೈಸೂರು ಜಿಲ್ಲಾ ಘಟಕದ ಜಂಟಿ ಆಶ್ರಯದಲ್ಲಿ ಮಾ.14ರಂದು ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರನ್ನು ಕುರಿತ `ಶತಮಾನದ ಸಂತ’ ಚುಟುಕು ಕೃತಿ ಲೋಕಾ ರ್ಪಣೆ, ಚುಟುಕು ವಾಚನ ಗೋಷ್ಠಿ ಮತ್ತು ಕೌಸ್ತುಭ ಮಾಸ ಪತ್ರಿಕೆ 11ನೇ ವಾರ್ಷಿಕೋತ್ಸವ ನಡೆಯಲಿದೆ. ಚುಸಾಪ ಕೇಂದ್ರ ಸಮಿತಿ ಗೌರವ ಅಧ್ಯಕ್ಷ ತೋಂಟದಾರ್ಯ, ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, ಅಂದು ಬೆಳಿಗ್ಗೆ 10.30ಕ್ಕೆ ಮೈಸೂರಿನ ಶಾರದಾವಿಲಾಸ ಶತ ಮಾನೋತ್ಸವ ಭವನದಲ್ಲಿ ಸಮಾರಂಭ ನಡೆಯಲಿದ್ದು, ಶ್ರೀಸಿದ್ದ…










