ಮೈಸೂರು,ಮಾ.13(ಪಿಎಂ)-ಕೌಸ್ತುಭ ಮಾಸಪತ್ರಿಕೆ, ಚುಟುಕು ಸಾಹಿತ್ಯ ಪರಿ ಷತ್ (ಚುಸಾಪ) ಮೈಸೂರು ಜಿಲ್ಲಾ ಘಟಕದ ಜಂಟಿ ಆಶ್ರಯದಲ್ಲಿ ಮಾ.14ರಂದು ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರನ್ನು ಕುರಿತ `ಶತಮಾನದ ಸಂತ’ ಚುಟುಕು ಕೃತಿ ಲೋಕಾ ರ್ಪಣೆ, ಚುಟುಕು ವಾಚನ ಗೋಷ್ಠಿ ಮತ್ತು ಕೌಸ್ತುಭ ಮಾಸ ಪತ್ರಿಕೆ 11ನೇ ವಾರ್ಷಿಕೋತ್ಸವ ನಡೆಯಲಿದೆ. ಚುಸಾಪ ಕೇಂದ್ರ ಸಮಿತಿ ಗೌರವ ಅಧ್ಯಕ್ಷ ತೋಂಟದಾರ್ಯ, ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, ಅಂದು ಬೆಳಿಗ್ಗೆ 10.30ಕ್ಕೆ ಮೈಸೂರಿನ ಶಾರದಾವಿಲಾಸ ಶತ ಮಾನೋತ್ಸವ ಭವನದಲ್ಲಿ ಸಮಾರಂಭ ನಡೆಯಲಿದ್ದು, ಶ್ರೀಸಿದ್ದ ಗಂಗಾ ಮಠದ ಪೀಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಕಾನೂನು ಸಚಿವ ಜೆ.ಸಿ.ಮಾದುಸ್ವಾಮಿ ಉದ್ಘಾಟಿಸಲಿದ್ದಾರೆ. ಚುಸಾಪ ಕೇಂದ್ರ ಸಮಿತಿ ಪ್ರಧಾನ ಸಂಚಾಲಕ ಡಾ.ಎಂ.ಜಿ.ಆರ್.ಅರಸ್ ಸರ್ವಾಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಡಾ.ಶಿವಕುಮಾರ ಸ್ವಾಮೀಜಿ ಭಾವಚಿತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅನಾವರಣಗೊಳಿಸಲಿದ್ದಾರೆ. ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್ ಜಿ.ಹೊಸಮನಿ `ಶತಮಾನದ ಸಂತ’ ಕೃತಿ ಬಿಡುಗಡೆ ಮಾಡುವರು. ಪರಿ ಸರ ವಿಜ್ಞಾನಿ `ದಿ.ಡಾ.ಟಿ.ಪಿ. ಹಾಲಪ್ಪಗೌಡ ಪ್ರಶಸ್ತಿ’ಯನ್ನು ಹಿರಿಯ ಇಂಜಿನಿಯರ್ ಶಿವಲಿಂಗಪ್ಪ, `ಡಾ.ಎಂ.ಜಿ.ಆರ್. ಅರಸ್ ಪ್ರಶಸ್ತಿ’ಯನ್ನು ಆಯುರ್ವೇದ ವೈದ್ಯ ಡಾ. ಜಯಪ್ರಕಾಶ್ ನಾರಾಯಣ್ ಅವರಿಗೆ, ಹಿರಿಯ ಸಾಹಿತಿಗಳಿಗೆ `ಕೌಸ್ತುಭ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.