News

ಬೆಂಗಳೂರಲ್ಲಿ ಇಂದು ಮೋದಿಹವಾ
News

ಬೆಂಗಳೂರಲ್ಲಿ ಇಂದು ಮೋದಿಹವಾ

November 11, 2022

ಬೆಂಗಳೂರು, ನ.10(ಕೆಎಂಶಿ)- ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪ್ರತಿಮೆ, ಮೈಸೂರು-ಚೆನ್ನೈ ನಡುವೆ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರುವುದು ಸೇರಿದಂತೆ ರಾಜ್ಯ ಹಾಗೂ ಕೇಂದ್ರದ ಯೋಜನೆಗಳಿಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ನಾಳೆ(ನ.11) ಒಂದು ದಿನದ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ. ನಾಡಪ್ರಭುಗಳ ಹೆಸರಿನಲ್ಲಿರುವ ವಿಮಾನ ನಿಲ್ದಾಣದಲ್ಲಿ 108ಅಡಿ ಎತ್ತರದ ಪ್ರಗತಿ ಪ್ರತಿಮೆಯನ್ನು ಅಭಿವೃದ್ಧಿಗೆ ಪ್ರೇರಣೆಯಾಗುವ ದೃಷ್ಟಿಯಿಂದ ನಿರ್ಮಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಇಂದಿಲ್ಲಿ ತಿಳಿಸಿದ್ದಾರೆ. ಅವರು ಇಂದು ಕೆಂಪೇಗೌಡರ ಕಂಚಿನ…

7ನೇ ವೇತನ ಆಯೋಗ ರಚನೆ
News

7ನೇ ವೇತನ ಆಯೋಗ ರಚನೆ

November 10, 2022

ಬೆಂಗಳೂರು, ನ. 9(ಕೆಎಂಶಿ)- ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮತ್ತು ಇತರೆ ಸೌಲಭ್ಯಗಳ ವಿಸ್ತರಣೆಗೆ ಸಂಬಂಧಿಸಿದಂತೆ ಏಳನೇ ವೇತನ ಆಯೋಗವನ್ನು ಸರ್ಕಾರ ರಚಿಸಿದೆ. ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅವರ ಅಧ್ಯಕ್ಷತೆಯಲ್ಲಿ ಏಳನೇ ವೇತನ ಆಯೋಗ ರಚಿಸಲಾಗಿದೆ. ಇದರಿಂದ ಮಧ್ಯಂತರ ವರದಿ ತರಿಸಿ, ಮುಂದಿನ ಬಜೆಟ್‍ನಲ್ಲಿ ನೌಕರರಿಗೆ ಬಂಪರ್ ಕೊಡುಗೆ ನೀಡಲು ಮುಖ್ಯಮಂತ್ರಿಯವರು ನಿರ್ಧರಿಸಿದ್ದಾರೆ. ಪ್ರತಿ ಐದು ವರ್ಷಕ್ಕೊಮ್ಮೆ ವೇತನ ಆಯೋಗ ರಚಿಸಬೇಕು. ಆದರೆ ಮುಂಬರುವ ವಿಧಾನ ಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ…

ಜಾರಕಿಹೊಳಿ ಸಹೋದರರು ಜೆಡಿಎಸ್ ಸೇರ್ಪಡೆಗೆ ಸಿದ್ಧತೆ
News

ಜಾರಕಿಹೊಳಿ ಸಹೋದರರು ಜೆಡಿಎಸ್ ಸೇರ್ಪಡೆಗೆ ಸಿದ್ಧತೆ

November 9, 2022

ಬೆಂಗಳೂರು, ನ.8(ಕೆಎಂಶಿ)- ಮಾಜಿ ಸಚಿವ ಹಾಗೂ ಹಾಲಿ ಶಾಸಕರಾದ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಅವರ ಕುಟುಂಬದವರು ಹಾಗೂ ಅವರ ಬೆಂಬಲಿಗರು ಬಿಜೆಪಿ ತೊರೆದು ಜೆಡಿಎಸ್ ಸೇರಲು ಮುಂದಾಗಿದ್ದಾರೆ. ಸರ್ಕಾರ ಮತ್ತು ಪಕ್ಷ ತಮ್ಮನ್ನು ಕಡೆಗಾಣಿಸುತ್ತಿದೆ ಎಂದು ಈ ಕುಟುಂಬ ಪಕ್ಷ ತೊರೆದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಸೇರಲು ಸಿದ್ಧತೆ ನಡೆಸಿದ್ದಾರೆ. ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷರೂ ಆಗಿರುವ ಬಾಲಚಂದ್ರ ಜಾರಕಿಹೊಳಿ, ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಜೊತೆ ಎರಡು…

ಕನ್ನಡ ಚಿತ್ರರಂಗದ ಹಿರಿಯ ನಟ ಟಿ.ಎಸ್. ಲೋಹಿತಾಶ್ವವಿಧಿವಶ
News

ಕನ್ನಡ ಚಿತ್ರರಂಗದ ಹಿರಿಯ ನಟ ಟಿ.ಎಸ್. ಲೋಹಿತಾಶ್ವವಿಧಿವಶ

November 9, 2022

ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಟಿ.ಎಸ್.ಲೋಹಿತಾಶ್ವ ಅವರು ಮಂಗಳವಾರ ನಿಧನರಾಗಿದ್ದಾರೆ. 80 ವರ್ಷದ ಲೋಹಿತಾಶ್ವ ಅವರಿಗೆ ಇತ್ತೀ ಚೆಗೆ ತೀವ್ರ ಹೃದಯಾಘಾತವಾಗಿತ್ತು. ತಕ್ಷಣ ಅವ ರನ್ನು ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಅಪೆÇೀಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಜೀವರಕ್ಷಕ ಸಾಧನ (ವೆಂಟಿಲೇಟರ್) ಅಳವಡಿಸಿ ಚಿಕಿತ್ಸೆ ನೀಡ ಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ವಿಧಿವಶರಾಗಿದ್ದಾರೆ. ಲೋಹಿತಾಶ್ವ ಅವರು ಚಿತ್ರ ನಟ, ನಾಟಕಕಾರ ಮತ್ತು ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದು, 500ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ, ರಂಗ…

ಇಂದು ವರ್ಷದ ಕೊನೇ ಚಂದ್ರಗ್ರಹಣ
News

ಇಂದು ವರ್ಷದ ಕೊನೇ ಚಂದ್ರಗ್ರಹಣ

November 8, 2022

ಬೆಂಗಳೂರು: ಈ ವರ್ಷದ ಕೊನೆಯ ಚಂದ್ರಗ್ರಹಣವೂ ನವೆಂಬರ್ 8ರಂದು ಸಂಭವಿ ಸಲಿದೆ. ದೀಪಾವಳಿಯ ಮರುದಿನ ಕೊನೆಯ ಸೂರ್ಯಗ್ರಹಣ ಸಂಭವಿಸಿದೆ. ಈಗ ಕೊನೆಯ ಚಂದ್ರಗ್ರಹಣವು ನ.8ರಂದು ಅಂದರೆ ಸೂರ್ಯ ಗ್ರಹಣ ನಡೆದು ನಿಖರವಾಗಿ 15 ದಿನಗಳ ನಂತರ ಸಂಭವಿಸಲಿದೆ. ವರ್ಷದ ಮೊದಲ ಚಂದ್ರಗ್ರಹ ಣವು 16 ಮೇ 2022ರಂದು ಸಂಭವಿಸಿತು. ಕೊನೆಯ ಚಂದ್ರಗ್ರಹಣವು ಭಾರತೀಯ ಕಾಲಮಾನದ ಪ್ರಕಾರ ನವೆಂಬರ್ 8 ರಂದು ಸಂಜೆ 5:32ಕ್ಕೆ ಪ್ರಾರಂಭವಾಗುತ್ತದೆ ಮತ್ತು ರಾತ್ರಿ 7.27ರವರೆಗೆ ಇರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಚಂದ್ರಗ್ರಹಣದ ಸಮಯದಲ್ಲಿ, ಸೂತಕ…

ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿ ‘ಸುಪ್ರೀಂ’ ಅಸ್ತು
News

ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿ ‘ಸುಪ್ರೀಂ’ ಅಸ್ತು

November 8, 2022

ದೆಹಲಿ: ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿ ಒದಗಿಸುವ ಕೇಂದ್ರ ಸರ್ಕಾರದ ಕಾನೂನನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿ ಹಿಡಿದಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ. 10ರಷ್ಟು ಮೀಸಲಾತಿ ಒದಗಿಸುವುದಕ್ಕೆ ಸಂಬಂಧಿಸುವ ಕಾನೂ ನಿನ ಸಿಂಧುತ್ವಕ್ಕೆ ಸಂಬಂಧಿಸಿದ ಹಲವು ವಿಚಾರ ಗಳನ್ನು ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಪರಿಶೀಲಿಸಿತು. ಐವರು ನ್ಯಾಯ ಮೂರ್ತಿಗಳಿದ್ದ ನ್ಯಾಯಪೀಠದಲ್ಲಿ ನಾಲ್ವರು ಮೀಸಲಾತಿ ಪರವಾಗಿ ಹಾಗೂ ಒಬ್ಬರು ಭಿನ್ನಮತದ ತೀರ್ಪು ನೀಡಿದರು. ನ್ಯಾಯಮೂರ್ತಿ ಗಳಾದ ದಿನೇಶ್ ಮಹೇಶ್ವರಿ, ತ್ರಿವೇದಿ, ಫಾರ್ದಿವಾಲ, ಯು.ಯು. ಲಲಿತ್…

ವಿಪಕ್ಷಗಳ ಪಾದಯಾತ್ರೆ ನಡುವೆ ಬಿಜೆಪಿ ರಥಯಾತ್ರೆಗೆ ಸಿದ್ಧತೆ
News

ವಿಪಕ್ಷಗಳ ಪಾದಯಾತ್ರೆ ನಡುವೆ ಬಿಜೆಪಿ ರಥಯಾತ್ರೆಗೆ ಸಿದ್ಧತೆ

November 8, 2022

ಬೆಂಗಳೂರುನ.7(ಕೆಎಂಶಿ)-ಮುಂಬರುವ ವಿಧಾನಸಭೆ ಚುನಾವಣೆ ಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಹವಣಿಸುತ್ತಿರುವ ಬಿಜೆಪಿ ರಾಜ್ಯಾದ್ಯಂತ ರಥಯಾತ್ರೆ ನಡೆಸಲು ತೀರ್ಮಾನಿಸಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ರಾಜ್ಯ ಉಸ್ತುವಾರಿ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ನೇತೃತ್ವದಲ್ಲಿ ಪ್ರತ್ಯೇಕ ವಾಗಿ ರಥಯಾತ್ರೆನಡೆಸಲು ನಿರ್ಧರಿಸಲಾಗಿದೆ. ಡಿಸೆಂಬರ್ ಮಧ್ಯೆ ಭಾಗದಿಂದ ಆರಂಭಗೊಳ್ಳುವ ಈ ಚುನಾವಣಾ ಯಾತ್ರೆ ಮಾರ್ಚ್ ಅಂತ್ಯದ ವೇಳೆಗೆ ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲೂ ಸಂಚರಿಸಿ…

ಪೆÇೀಕ್ಸೋ ಪ್ರಕರಣ: ಮುರುಘಾಶ್ರೀ ವಿರುದ್ಧ 694 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆ
News

ಪೆÇೀಕ್ಸೋ ಪ್ರಕರಣ: ಮುರುಘಾಶ್ರೀ ವಿರುದ್ಧ 694 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆ

November 8, 2022

ಚಿತ್ರದುರ್ಗ: ಮುರುಘಾ ಮಠ ಶ್ರೀಗಳ ವಿರುದ್ಧ ದಾಖಲಾಗಿರುವ ಪೆÇೀಕ್ಸೋ ಪ್ರಕ ರಣಕ್ಕೆ ಸಂಬಂಧಿಸಿದಂತೆ ಒಟ್ಟು 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಪ್ರಕರಣದ ತನಿಖೆ ನಡೆಸಿರುವ ಡಿವೈಎಸ್ಪಿ ಅನಿಲ್ ನೇತೃತ್ವದ ತಂಡ 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಒಟ್ಟು 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಪೆÇೀಕ್ಸೋ, ಅಟ್ರಾಸಿಟಿ ಮತ್ತು ಧಾರ್ಮಿಕ ಕೇಂದ್ರ ದುರುಪಯೋಗ ಕಾಯ್ದೆ ಅಡಿಯಲ್ಲೂ ಕೇಸ್ ದಾಖಲಾಗಿದ್ದು, 342 ಪುಟಗಳ 2 ಸೆಟ್‍ನಂತೆ ಒಟ್ಟು 694 ಪುಟಗಳ ಚಾರ್ಜ್…

ರಾಹುಲ್, ಸೋನಿಯಾಗೆ ಮತ್ತೆ ಇಡಿ ಸಮನ್ಸ್
News

ರಾಹುಲ್, ಸೋನಿಯಾಗೆ ಮತ್ತೆ ಇಡಿ ಸಮನ್ಸ್

November 8, 2022

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಿಂದ ಗಾಂಧಿ ಕುಟುಂಬಕ್ಕೆ ಸದ್ಯಕ್ಕೆ ಮುಕ್ತಿ ದೊರೆತಂತೆ ಕಾಣುತ್ತಿಲ್ಲ. ಕಾಂಗ್ರೆಸ್ ಒಡೆತನದ ಯಂಗ್ ಇಂಡಿ ಯನ್‍ನಲ್ಲಿ ಸಂಶಯಾಸ್ಪದ ವಹಿ ವಾಟುಗಳು ನಡೆದಿದ್ದು, ಜಾರಿ ನಿರ್ದೇಶನಾಲಯ ಮತ್ತೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಯವರಿಗೆ ಸಮನ್ಸ್ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಶೆಲ್ ಕಂಪನಿಗಳ ಮೂಲಕ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸುಮಾರು 4ರಿಂದ 5 ಕೋಟಿ ರೂ.ಗಳ ವಹಿವಾಟು ನಡೆದಿದೆ. ಈ ಹೇಳಿಕೆಯನ್ನು ಇ.ಡಿ ದಾಖಲಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ….

ನನಗೆ ಕ್ಷೇತ್ರದ ಸಮಸ್ಯೆ ಇಲ್ಲ; ಆದರೆ ಎಲ್ಲಿಂದ ಸ್ಪರ್ಧಿಸಬೇಕೆಂದು ನಿರ್ಧರಿಸಬೇಕಷ್ಟೇ…
News

ನನಗೆ ಕ್ಷೇತ್ರದ ಸಮಸ್ಯೆ ಇಲ್ಲ; ಆದರೆ ಎಲ್ಲಿಂದ ಸ್ಪರ್ಧಿಸಬೇಕೆಂದು ನಿರ್ಧರಿಸಬೇಕಷ್ಟೇ…

November 8, 2022

ನಾನು ಎಲ್ಲಿಂದ ಚುನಾವಣೆಗೆ ನಿಲ್ಲಬೇಕು ಎಂದು ನಮ್ಮ ಪಕ್ಷ ತೀರ್ಮಾನ ಮಾಡುತ್ತದೆ. ಜೆಡಿಎಸ್ ಪಕ್ಷ ಅಲ್ಲ. ಆತ್ಮೀಯನಾಗಿ ಬೇಕಾದರೆ ವೈಯಕ್ತಿಕವಾಗಿ ಭೇಟಿ ಮಾಡಿ ಸಲಹೆ ನೀಡಲಿ. ಹಾಲಿ ಶಾಸಕರ ಟಿಕೆಟ್ ತಪ್ಪಿಸಿ ಇಬ್ರಾಹಿಂ ಅವರಿಗೆ ಭದ್ರಾವತಿಯಲ್ಲಿ ಟಿಕೆಟ್ ನೀಡಿದ್ದೆವು. ಆದರೆ ಭದ್ರಾವತಿಯಲ್ಲಿ ಡೆಪಾಸಿಟ್ ಕಳೆದುಕೊಂಡಿದ್ದರು ಅಂದರೆ ಅವರ ಲೆಕ್ಕಾಚಾರ ಸರಿಯಿಲ್ಲ ಎಂದರ್ಥವಲ್ಲವೇ? ನನ್ನ ಜೊತೆ ಇಷ್ಟೊಂದು ಜನ ಶಾಸಕರು, ಪಕ್ಷದ ಹಿರಿಯ ನಾಯಕರು, ಎಲ್ಲಾ ಜಾತಿ ಧರ್ಮಗಳ ನಾಯಕರು ಇದ್ದಾರೆ. ಒಬ್ಬಂಟಿಯಾಗಿದ್ದರೆ ಇವರೆಲ್ಲ ನನ್ನ ಜೊತೆ ಇಲ್ಲಿ…

1 11 12 13 14 15 73
Translate »