ಇಂದು ವರ್ಷದ ಕೊನೇ ಚಂದ್ರಗ್ರಹಣ
News

ಇಂದು ವರ್ಷದ ಕೊನೇ ಚಂದ್ರಗ್ರಹಣ

November 8, 2022

ಬೆಂಗಳೂರು: ಈ ವರ್ಷದ ಕೊನೆಯ ಚಂದ್ರಗ್ರಹಣವೂ ನವೆಂಬರ್ 8ರಂದು ಸಂಭವಿ ಸಲಿದೆ. ದೀಪಾವಳಿಯ ಮರುದಿನ ಕೊನೆಯ ಸೂರ್ಯಗ್ರಹಣ ಸಂಭವಿಸಿದೆ. ಈಗ ಕೊನೆಯ ಚಂದ್ರಗ್ರಹಣವು ನ.8ರಂದು ಅಂದರೆ ಸೂರ್ಯ ಗ್ರಹಣ ನಡೆದು ನಿಖರವಾಗಿ 15 ದಿನಗಳ ನಂತರ ಸಂಭವಿಸಲಿದೆ. ವರ್ಷದ ಮೊದಲ ಚಂದ್ರಗ್ರಹ ಣವು 16 ಮೇ 2022ರಂದು ಸಂಭವಿಸಿತು.

ಕೊನೆಯ ಚಂದ್ರಗ್ರಹಣವು ಭಾರತೀಯ ಕಾಲಮಾನದ ಪ್ರಕಾರ ನವೆಂಬರ್ 8 ರಂದು ಸಂಜೆ 5:32ಕ್ಕೆ ಪ್ರಾರಂಭವಾಗುತ್ತದೆ ಮತ್ತು ರಾತ್ರಿ 7.27ರವರೆಗೆ ಇರುತ್ತದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಚಂದ್ರಗ್ರಹಣದ ಸಮಯದಲ್ಲಿ, ಸೂತಕ ಅವಧಿಯು ಗ್ರಹಣ ಪ್ರಾರಂಭವಾಗುವ 9 ಗಂಟೆಗಳ ಮೊದಲು ಇರ ಲಿದೆ. ಈ ಚಂದ್ರಗ್ರಹಣವು ಭಾರತದ ಕೆಲವು ಭಾಗಗಳಲ್ಲಿ ಗೋಚರಿಸುತ್ತದೆ. ಆದ್ದರಿಂದ, ಚಂದ್ರ ಗ್ರಹಣದ ಸೂತಕ ಅವಧಿಯು ಮಾನ್ಯವಾಗಿರು ತ್ತದೆ. ಈ ಚಂದ್ರಗ್ರಹಣ ಭಾರತದಲ್ಲಿ ಕೋಲ್ಕತ್ತಾ, ಸಿಲಿಗುರಿ, ಪಾಟ್ನಾ, ರಾಂಚಿ, ಗುವಾಹಟಿಯಲ್ಲಿ ಗೋಚರಿಸುತ್ತದೆ ಮತ್ತು ಜಗತ್ತಿನಲ್ಲಿ ಉತ್ತರ ಮತ್ತು ಪೂರ್ವ ಯುರೋಪ್, ಏಷ್ಯಾ, ಆಸ್ಟ್ರೇ ಲಿಯಾ, ಪೆಸಿಫಿಕ್ ಮಹಾಸಾಗರ, ಹಿಂದೂ ಮಹಾ ಸಾಗರ, ಉತ್ತರ ಅಮೇರಿಕಾ ಮತ್ತು ದಕ್ಷಿಣ ಅಮೇರಿಕಾದಲ್ಲಿ ಕಾಣಿಸುತ್ತದೆ. ನವೆಂಬರ್ 8, 2022 ರಂದು ಚಂದ್ರನು ಭೂಮಿಯ ನೆರಳಿನಲ್ಲಿ ಹಾದುಹೋಗುತ್ತಾನೆ. ಈ ವೇಳೆ ಚಂದ್ರ ಕೆಂಪು ಬಣ್ಣಕ್ಕೆ ತಿರುಗುತ್ತಾನೆ. ಇದು ಸುಮಾರು ಮೂರು ವರ್ಷಗಳ ಕೊನೆಯ ಸಂಪೂರ್ಣ ಚಂದ್ರಗ್ರಹಣವಾಗಿದೆ ಎಂದು ಬಾಹ್ಯಾಕಾಶ ಸಂಸ್ಥೆ ನಾಸಾ ಟ್ವೀಟ್ ಮಾಡಿದೆ. ರಕ್ತ ಚಂದ್ರ ಎಂದೂ ಕರೆಯಲ್ಪಡುವ ಸಂಪೂರ್ಣ ಚಂದ್ರಗ್ರಹಣವು ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಸಂಭವಿಸುತ್ತದೆ. ಈ ವೇಳೆ ಚಂದ್ರನು ಕೆಂಪು ಬಣ್ಣಕ್ಕೆ ತಿರುಗುತ್ತಾನೆ. ಹೀಗಾಗಿ ಇದನ್ನು ‘ಬ್ಲಡ್ ಮೂನ್’ ಎಂತಲೂ ಕರೆಯಲಾಗುತ್ತದೆ.

Translate »