ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‍ಪ್ರೆಸ್ ಪ್ರಯೋಗಾರ್ಥ ಸಂಚಾರ ಯಶಸ್ವಿ
ಮೈಸೂರು

ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‍ಪ್ರೆಸ್ ಪ್ರಯೋಗಾರ್ಥ ಸಂಚಾರ ಯಶಸ್ವಿ

November 8, 2022

ಈ ರೈಲು ಎರಡು ಇಂಜಿನ್‍ಗಳನ್ನು ಹೊಂದಿದ್ದು, 16 ಬೋಗಿಗಳಿವೆ. ಆ ಪೈಕಿ ಎರಡು ಎಕ್ಸಿಕ್ಯೂಟಿವ್ ಚೇರ್ ಬೋಗಿಗಳಾಗಿದ್ದು, 180 ಡಿಗ್ರಿ ಕೋನದ ಆಸನಗಳನ್ನು ಹೊಂದಿದೆ. ಪ್ರತೀ ಬೋಗಿಯಲ್ಲಿ 80 ಆಸನಗಳಿದ್ದು, ಪೂರ್ಣ ಹವಾನಿಯಂತ್ರಿತವಾಗಿದೆ.

ಮೈಸೂರು, ನ. 7(ಆರ್‍ಕೆ)- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನ.11ರಂದು ಚಾಲನೆ ನೀಡಲಿರುವ ಚೆನ್ನೈ-ಬೆಂಗಳೂರು-ಮೈಸೂರು ನಡುವಿನ ವಂದೇ ಭಾರತ್ ಸೂಪರ್ ಫಾಸ್ಟ್ ಎಕ್ಸ್‍ಪ್ರೆಸ್ ರೈಲಿನ ಪ್ರಯೋಗಾರ್ಥ ಸಂಚಾರ ಯಶಸ್ವಿಯಾಗಿದೆ.

ಇಂದು ಮುಂಜಾನೆ 5.50 ಗಂಟೆಗೆ ಚೆನ್ನೈನ ಎಂಜಿಆರ್ ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಟ ವಂದೇ ಭಾರತ್ ಎಕ್ಸ್‍ಪ್ರೆಸ್, 497 ಕಿ.ಮೀ. ದೂರವನ್ನು 15 ನಿಮಿಷ ಮುನ್ನವೇ, ಕೇವಲ ಆರೂವರೆ ಗಂಟೆಯೊಳಗೆ ಮೈಸೂರು ರೈಲ್ವೇ ನಿಲ್ದಾಣ ತಲುಪಿತು. ಚೆನ್ನೈ ನಿಂದ ಬೆಂಗಳೂರು ಮಾರ್ಗ ಮೈಸೂರು ತಲುಪಿದ 16 ಬೋಗಿ ಗಳುಳ್ಳ ಈ ವೇಗದ ರೈಲಿನಲ್ಲಿ ನೈರುತ್ಯ ರೈಲ್ವೇ ವಿಭಾಗದ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ್, ದಕ್ಷಿಣ ರೈಲ್ವೇ ಜನರಲ್ ಮ್ಯಾನೇ ಜರ್ ಬಿ.ಜಿ.ಮಲ್ಯ, ಕೆಲ ಹಿರಿಯ ಅಧಿಕಾರಿಗಳು, ಇಂಜಿನಿಯರ್ ಗಳು ಹಾಗೂ ಸಿಬ್ಬಂದಿ ಆಗಮಿಸಿದರು. ಮುಂಜಾನೆ ಚೆನ್ನೈನಿಂದ ಹೊರಟ ಈ ರೈಲು, ಬೆಳಗ್ಗೆ 7.23 ಗಂಟೆಗೆ ಕಟ್ಪಾಡಿ ಜಂಕ್ಷನ್‍ನಲ್ಲಿ 2 ನಿಮಿಷ ನಿಲುಗಡೆ ಅಲ್ಲಿಂದ 7.25 ಗಂಟೆಗೆ ಪ್ರಯಾಣ ಆರಂ ಭಿಸಿ, 8.30ಕ್ಕೆ ಜೋಲಾರ್‍ಪೆಟ್ಟಾಯ್ ಜಂಕ್ಷನ್
ತಲುಪಿದೆ. ನಂತರ ಬೆಳಗ್ಗೆ 10.25 ಗಂಟೆಗೆ ಬೆಂಗಳೂರು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಆಗಮಿಸಿದೆ. ಅಲ್ಲಿ 5 ನಿಮಿಷ ನಿಲುಗಡೆ, ಬಳಿಕ ಪ್ರಯಾಣ ಮುಂದು ವರೆಸಿ ಮಧ್ಯಾಹ್ನ 12.15ಕ್ಕೆ ಸಾಂಸ್ಕøತಿಕ ನಗರಿ ಮೈಸೂರು ರೈಲ್ವೇ ನಿಲ್ದಾಣ ತಲು ಪಿತು. ಈ ರೈಲು ಮಧ್ಯಾಹ್ನ 12.30 ಗಂಟೆಗೆ ಮೈಸೂರಿಗೆ ಆಗಮಿಸುವ ಸಮಯ ನಿಗದಿ ಯಾಗಿತ್ತು. ಆದರೆ 15 ನಿಮಿಷ ಮುಂಚಿತ ವಾಗಿಯೇ ತಲುಪಿತು. ತಾಂತ್ರಿಕವಾಗಿ ಯಾವುದೇ ತೊಂದರೆ, ಇನ್ನಿತರ ಅಡೆ-ತಡೆಗಳಿಲ್ಲದೆ ಪ್ರಯೋಗಾರ್ಥ ಸಂಚಾರ ಯಶಸ್ವಿಯಾಗಿದೆ ಎಂದು ನೈರುತ್ಯ ರೈಲ್ವೇ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಇ.ವಿಜಯ ಮೈಸೂರು ರೈಲು ನಿಲ್ದಾಣ ದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಪ್ರಯೋಗಾರ್ಥ ಮೊದಲ ಬಾರಿ ಮೈಸೂರಿಗೆ ಆಗಮಿಸಿದ ವಂದೇ ಭಾರತ್ ಸೂಪರ್ ಫಾಸ್ಟ್ ಎಕ್ಸ್‍ಪ್ರೆಸ್‍ನಲ್ಲಿ ಆಗ ಮಿಸಿದ ಹಿರಿಯ ರೈಲ್ವೆ ಅಧಿಕಾರಿಗಳಾದ ಸಂಜೀವ ಕಿಶೋರ ಮತ್ತು ಬಿ.ಜಿ.ಮಲ್ಯ ಅವರನ್ನು ಪುಷ್ಪಗುಚ್ಛ ನೀಡಿ, ಸ್ಥಳೀಯ ಅಧಿಕಾರಿ ಇ.ವಿಜಯ ಬರಮಾಡಿಕೊಂಡರು. 50 ನಿಮಿಷಗಳ ನಂತರ ಮಧ್ಯಾಹ್ನ 1.05 ಗಂಟೆಗೆ ಮೈಸೂರು ರೈಲು ನಿಲ್ದಾಣದಿಂದ ಚೆನ್ನೈಗೆ ಪ್ರಯಾಣ ಬೆಳೆಸಿತು.

‘ಮೇಕ್ ಇನ್ ಇಂಡಿಯಾ’ ಪರಿ ಕಲ್ಪನೆಯಡಿ ಚೆನ್ನೈ ಬಳಿಯ ಪೆರಂ ಬೂರಿನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಎಫ್‍ಸಿ) ಈ ಬೋಗಿಗಳನ್ನು ವಿನ್ಯಾಸ ಗೊಳಿಸಿದೆ. ಸುಸಜ್ಜಿತ ಆಸನ, ವಿಶಾಲ ಗಾಜಿನ ಕಿಟಕಿ, ಸೆನ್ಸಾರ್‍ನೊಂದಿಗೆ ಸ್ವಯಂ ಚಾಲಿತ ಬಾಗಿಲುಗಳು, ಹೈಟೆಕ್ ಶೌಚಾ ಲಯ, ಪ್ರತೀ ಬೋಗಿಗಳಲ್ಲಿ ಎರ ಡೆರಡು ಸಿಸಿ ಕ್ಯಾಮರಾಗಳು, ಲಗ್ಗೇಜ್ ಇರಿಸಲು ಸೂಕ್ತ ಸ್ಥಳಾವಕಾಶ, ಮೊಬೈಲ್ ಚಾರ್ಜಿಂಗ್ ಪಾಯಿಂಟ್‍ಗಳು, ಸೀಟ್ ಬಳಿ ನೀರಿನ ಬಾಟಲಿ ಇರಿಸಲು ಸ್ಥಳಾವಕಾಶ, ಊಟ-ತಿಂಡಿ ಸೇವನೆಗೆ ಸೂಕ್ತವಾಗಿ ಪುಟ್ಟ ಡೈನಿಂಗ್ ಟೇಬಲ್ ಸೇರಿದಂತೆ ಸುಖಕರ ಪ್ರಯಾಣಕ್ಕೆ ಈ ಟ್ರೇನ್‍ನಲ್ಲಿ ಹೈಟೆಕ್ ಸೌಲಭ್ಯ ಒದಗಿಸಲಾಗಿದೆ ಎಂದರು.
ಮೈಸೂರು-ಚೆನ್ನೈ ನಡುವೆ ಶತಾಬ್ದಿ ಎಕ್ಸ್‍ಪ್ರೆಸ್ ರೈಲು ಎಂದಿನಂತೆ ಸಂಚರಿಸ ಲಿದ್ದು, ಹೆಚ್ಚುವರಿಯಾಗಿ ವಂದೇ ಭಾರತ್ ಸೂಪರ್ ಫಾಸ್ಟ್ ಎಕ್ಸ್‍ಪ್ರೆಸ್ ಈ ಎರಡೂ ನಗರಗಳ ನಡುವೆ ಸಂಚರಿಸಲಿದೆ. ನವೆಂ ಬರ್ 11ರಂದು ಪ್ರಧಾನಮಂತ್ರಿ ಅವರು ಬೆಂಗಳೂರಿನಲ್ಲಿ ದೇಶದ 5ನೇ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಅದೇ ವೇಳೆ ಬೆಂಗಳೂರಿನ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ದ ಟರ್ಮಿನಲ್-2 ಅನ್ನೂ ಪ್ರಧಾನಮಂತ್ರಿ ಗಳು ಉದ್ಘಾಟಿಸಲಿದ್ದಾರೆ. ನವೆಂಬರ್ 11ರಿಂದ ಅಧಿಕೃತವಾಗಿ ಸಂಚರಿಸಲಿರುವ ವಂದೇ ಭಾರತ್ ಹೈಸ್ಪೀಡ್ ರೈಲಿನ ಪ್ರಯಾಣ ದರ, ಲಗ್ಗೇಜ್ ದರ, ಆನ್‍ಲೈನ್ ಟಿಕೆಟ್ ರಿಸರ್ವೇಷನ್ ವ್ಯವಸ್ಥೆ ಇನ್ನಿತರ ಮಾಹಿತಿ ಯನ್ನೊಳಗೊಂಡಂತೆ ರೈಲ್ವೇ ಇಲಾಖೆ ಸದ್ಯದಲ್ಲೇ ಅಧಿಸೂಚನೆ ಹೊರಡಿಸಲಿದೆ ಎಂದು ವಿಜಯ ತಿಳಿಸಿದರು.

Translate »