News

ಬಿಜೆಪಿಯಿಂದ ಬೀದಿ ಪುಂಡರ  ‘ಆಪರೇಷನ್ ಕಮಲ’!
News

ಬಿಜೆಪಿಯಿಂದ ಬೀದಿ ಪುಂಡರ ‘ಆಪರೇಷನ್ ಕಮಲ’!

August 21, 2022

ಬೆಂಗಳೂರು: ತಮ್ಮ ಕಾರಿನ ಮೇಲೆ ಮೊಟ್ಟೆ ಎಸೆದ ಆರೋಪಿ ಕಾಂಗ್ರೆಸ್ ಕಾರ್ಯಕರ್ತ ಎಂಬ ಸುದ್ದಿ ಪ್ರಸಾರವಾಗುತ್ತಲೇ ಈ ಕುರಿತು ಸರಣಿ ಟ್ವೀಟ್ ಮೂಲಕ ಬಿಜೆಪಿಗೆ ಕುಟುಕಿರುವ ಸಿದ್ದ ರಾಮಯ್ಯ, ಆಪರೇಷನ್ ಕಮಲ’ ಎಂದರೆ ಶಾಸಕರಿಗೆ ಮಾತ್ರ ಅಲ್ಲ.. ಈಗ ಬೀದಿ ಪುಂಡರ ಆಪರೇಷನ್ ಕಮಲ ಕೂಡ ಬಿಜೆಪಿ ನಡೆಸು ತ್ತದೆ ಎಂದು ಮಡಿಕೇರಿಯಲ್ಲಿ ಸಾಬೀತಾಗಿದೆ ಎಂದು ಕಿಡಿಕಾರಿದ್ದಾರೆ. ಬಿಜೆಪಿ ವಿರುದ್ಧ ಕಿಡಿಕಾರಿರುವ ಸಿದ್ದ ರಾಮಯ್ಯ, ‘ಮೊಟ್ಟೆ ಎಸೆದ ವ್ಯಕ್ತಿ ಕಾಂಗ್ರೆಸ್ ಕಾರ್ಯ ಕರ್ತನಾಗಿದ್ದರೆ ಬಿಜೆಪಿ ಶಾಸಕ ಅಪ್ಪಚ್ಚು…

ದಸರಾ ವೇಳೆಗೆ ಮೈಸೂರು-ಬೇಲೂರು-ಹಳೇಬೀಡು  ಪ್ರವಾಸೋದ್ಯಮ ಸಕ್ರ್ಯೂಟ್ ಉದ್ಘಾಟನೆಗೆ ಸಿಎಂ ಸೂಚನೆ
News

ದಸರಾ ವೇಳೆಗೆ ಮೈಸೂರು-ಬೇಲೂರು-ಹಳೇಬೀಡು ಪ್ರವಾಸೋದ್ಯಮ ಸಕ್ರ್ಯೂಟ್ ಉದ್ಘಾಟನೆಗೆ ಸಿಎಂ ಸೂಚನೆ

August 20, 2022

ಬೆಂಗಳೂರು, ಆ.19(ಕೆಎಂಶಿ)- ರಾಜ್ಯ ದಲ್ಲಿ ಮುಂದಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಬೇಕು. ಈ ದೃಷ್ಟಿಯಿಂದ ಪರಿಣಾಮಕಾರಿ ಪ್ರಚಾರ ಹಾಗೂ ಪ್ರವಾಸಿ ತಾಣಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಬೇಕು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅಧಿ ಕಾರಿಗಳಿಗೆ ಸೂಚಿಸಿದರು. ಪ್ರವಾಸೋದ್ಯಮ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಮಾತ ನಾಡಿದ ಅವರು, ರಾಜ್ಯದ ಆರ್ಥಿಕ ಪ್ರಗತಿ ಹಾಗೂ ಸಾಂಸ್ಕೃತಿಕವಾಗಿಯೂ ಪ್ರವಾಸೋ ದ್ಯಮ ಮಹತ್ವದ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಅಭಿ ವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ…

ಮಾಜಿ ಸಿಎಂ ಬಿಎಸ್‍ವೈಗೆ ಡಬಲ್ ಧಮಾಕಾ
News

ಮಾಜಿ ಸಿಎಂ ಬಿಎಸ್‍ವೈಗೆ ಡಬಲ್ ಧಮಾಕಾ

August 18, 2022

ಬೆಂಗಳೂರು, ಆ.17(ಕೆಎಂಶಿ)-ಮುಂಬರುವ ವಿಧಾನ ಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಕೇಂದ್ರ ಸಂಸದೀಯ ಮಂಡಳಿಯ ಸದಸ್ಯರಾಗಿ ಬಿಜೆಪಿ ನೇಮಕ ಮಾಡಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಅಧ್ಯಕ್ಷತೆಯ ಮಂಡಳಿಯಲ್ಲಿ ಪ್ರಧಾನಿ ನರೇಂದ್ರಮೋದಿ, ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹನ್ನೊಂದು ಮಂದಿ ಇದ್ದಾರೆ. ಕೇಂದ್ರ ಸಂಸದೀಯ ಮಂಡಳಿಯ ಸದಸ್ಯರಾಗಿ ನೇಮಕಗೊಂಡಿರುವ ಯಡಿ ಯೂರಪ್ಪ ಇದೇ ಸಂದರ್ಭದಲ್ಲಿ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ…

ರಾಜ್ಯದಲ್ಲಿ ಮತ್ಸ್ಯ ಕ್ರಾಂತಿಗೆ ನಿರ್ಧಾರ
News

ರಾಜ್ಯದಲ್ಲಿ ಮತ್ಸ್ಯ ಕ್ರಾಂತಿಗೆ ನಿರ್ಧಾರ

August 18, 2022

ಬೆಂಗಳೂರು, ಆ. 17(ಕೆಎಂಶಿ)-ಕೋವಿಡ್-19 ಸೋಂಕಿನ ನಂತರ ಜನರಲ್ಲಿ ಪೌಷ್ಠಿಕ ಆಹಾರ ಕೊರತೆ ನೀಗಿಸಲು ಯಥೇಚ್ಚ ಮೀನು ಸರಬ ರಾಜು ಮಾಡಲು ಸರ್ಕಾರ ನಿರ್ಧರಿಸಿದೆ. ಪ್ರತಿ ಗ್ರಾಮ ಮತ್ತು ನಗರ ಪಟ್ಟಣಗಳಲ್ಲೂ ವಿವಿಧ ಬಗೆಯ ಮೀನುಗಳು ಸುಲಭವಾಗಿ ದಕ್ಕು ವಂತೆ ಮಾಡಲಾಗುವುದು ಎಂದು ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಎಸ್. ಅಂಗಾರ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಮೀನು ಮತ್ತು ಅದರ ಖಾದ್ಯ ಗಳು ಸುಲಭವಾಗಿ ದೊರಕಿಸಬೇಕೆಂಬ ಉದ್ದೇಶ ದಿಂದ ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ…

ಸಕ್ರಮ ಗಣಿಗಾರಿಕೆಗೆ ಮುಂದೆ ಬರುತ್ತಿಲ್ಲ!
News

ಸಕ್ರಮ ಗಣಿಗಾರಿಕೆಗೆ ಮುಂದೆ ಬರುತ್ತಿಲ್ಲ!

August 17, 2022

ಬೆಂಗಳೂರು, ಆ.16(ಕೆಎಂಶಿ)- ಅದಿರು ಗಣಿಕಾರಿಕೆ ಗುತ್ತಿಗೆ ಪಡೆಯಲು ಉದ್ದಿಮೆದಾರರು ಮುಂದೆ ಬರುತ್ತಿಲ್ಲ. ದಶಕದ ಹಿಂದೆ ರಾಜ್ಯ ಸರ್ಕಾ ರವನ್ನೇ ತಮ್ಮ ದಾಳವಾಗಿ ಮಾಡಿಕೊಂಡಿದ್ದ ಧಣಿಗಳಿಗೆ ಈಗ ಅದಿರು ಬೇಡವಂತೆ. ಅಕ್ರಮ ಗಣಿಗಾರಿಕೆ ಮಾಡಿ ವಿದೇಶಗಳಿಗೆ ಕಳ್ಳದಾರಿಯಲ್ಲಿ ಅದಿರು ರವಾನೆ ಮಾಡಿ ಸಾವಿ ರಾರು ಕೋಟಿ ರೂ. ಲೂಟಿ ಮಾಡಿದವರು ಈಗ ಸಕ್ರಮವಾಗಿ ಗಣಿಗಾರಿಕೆ ನಡೆಸಲು ಮುಂದೆ ಬರುತ್ತಿಲ್ಲ. ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಸಿ ದರ್ಜೆಯ ಅದಿರು ಗಣಿಗಾರಿಕೆ ಮಾಡಿ ರಫ್ತಿಗೆ ಅವಕಾಶ ಮಾಡಿಕೊಟ್ಟಿದೆ. ನ್ಯಾಯಾ ಲಯದ ಆದೇಶದಂತೆ…

ಫ್ಲೆಕ್ಸ್ ವಿವಾದ: ಶಿವಮೊಗ್ಗ ಉದ್ವಿಗ್ನ
News

ಫ್ಲೆಕ್ಸ್ ವಿವಾದ: ಶಿವಮೊಗ್ಗ ಉದ್ವಿಗ್ನ

August 17, 2022

ಶಿವಮೊಗ್ಗ,ಆ.16-ಸ್ವಾತಂತ್ರ್ಯ ಅಮೃತ ಮಹೋತ್ಸವದ ವೇಳೆ ಶಿವಮೊಗ್ಗದ ವೃತ್ತವೊಂದರಲ್ಲಿ ಫ್ಲೆಕ್ಸ್ ಅಳವಡಿಸುವ ಸಂಬಂಧ ಸೋಮವಾರ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಇದರ ನಡುವೆ ಪ್ರತ್ಯೇಕ ಸ್ಥಳದಲ್ಲಿ ಇಬ್ಬರಿಗೆ ಚಾಕುವಿ ನಿಂದ ಇರಿದಿದ್ದರಿಂದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿತ್ತಾದರೂ ಪೊಲೀಸರ ಕಟ್ಟುನಿಟ್ಟಿನ ಕ್ರಮದಿಂದ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಶಿವಮೊಗ್ಗದ ಅಮೀರ್ ಅಹಮದ್ ವೃತ್ತದ ಬಳಿ ಸೋಮವಾರ ಸಂಘ ಟನೆಯೊಂದು ಟಿಪ್ಪುವಿನ ಫೋಟೋ ಇಟ್ಟು ಸ್ವಾತಂತ್ರ್ಯ ದಿನ ಆಚರಿಸು ತ್ತಿತ್ತು. ಅದೇ ವೇಳೆ ಮತ್ತೊಂದು ಗುಂಪು ವೃತ್ತದ ಹೈಮಾಸ್ಟ್ ದೀಪದ ಕಂಬಕ್ಕೆ ವೀರ…

ಭವ್ಯ ಭಾರತಕಟ್ಟಲುಯುವಜನತೆ ಸನ್ನದ್ಧರಾಗಿ
News

ಭವ್ಯ ಭಾರತಕಟ್ಟಲುಯುವಜನತೆ ಸನ್ನದ್ಧರಾಗಿ

August 14, 2022

ಬೆಂಗಳೂರು, ಆ. 13(ಕೆಎಂಶಿ)- ಭವ್ಯ ಭಾರತಕಟ್ಟಲುಯುವಜನತೆ ಸನ್ನದ್ಧರಾಗಬೇಕು. ದೇಶ ಮೊದಲು, ದೇಶದನಂತರ ನಾವೆಲ್ಲರೂಎಂಬುದನ್ನು ಪ್ರತಿ ಪಾದಿಸಬೇಕು. ಸಂಕುಚಿತ, ಸ್ವಾರ್ಥ ಮನೋ ಭಾವನೆಯನ್ನುತೊರೆದು, ದೇಶಕ್ಕಾಗಿ ನಿಲ್ಲುವಕರ್ತವ್ಯ ನಮ್ಮೆಲ್ಲರದ್ದಾಗಿದೆಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯುವಜನತೆಗೆಕರೆ ನೀಡಿದರು. ಅವರುಇಂದುಕನ್ನಡ ಮತ್ತು ಸಂಸ್ಕೃತಿಇಲಾಖೆಯ ವತಿಯಿಂದ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ಸ್ವಾತಂತ್ರ್ಯಅಮೃತ ಮಹೋತ್ಸವದ ಅಂಗವಾಗಿ ಹರ್‍ಘರ್‍ತಿರಂಗಾಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಸ್ವಾತಂತ್ರ್ಯಪೂರ್ವದಲ್ಲಿಜನರುದೇಶಕ್ಕಾಗಿ ಪ್ರಾಣಕೊಡುತ್ತಿದ್ದರು. ಈಗ ದೇಶಕ್ಕಾಗಿ ಬದುಕಿ, ದುಡಿಯಬೇಕು. ಭವ್ಯ ಭಾರತದ ನಿರ್ಮಾಣದಲ್ಲಿಯುವಕರುತಮ್ಮದುಡಿಮೆಯ ಮೂಲಕ ಪಾಲನ್ನು ನೀಡ ಬೇಕು. ಇನ್ನು ಮುಂದಿನ 25 ವರ್ಷಗಳ…

ಮಹತ್ತರ ಬದಲಾವಣೆ…!
News

ಮಹತ್ತರ ಬದಲಾವಣೆ…!

August 14, 2022

ಬೆಂಗಳೂರು, ಆ. 13(ಕೆಎಂಶಿ)-ಜನೋತ್ಸವಕ್ಕೂ ಮುನ್ನ ಸರ್ಕಾರದಲ್ಲಿ ಮಹತ್ತರ ಬದಲಾ ವಣೆಯಾಗಲಿದೆಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ನಿನ್ನೆ ನಡೆದರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಧಿಕಾರಿಗಳನ್ನು ಹೊರ ಕಳಿಸಿದ ನಂತರ ಮುಖ್ಯಮಂತ್ರಿಯವರುತಮ್ಮ ಸಹೋದ್ಯೋಗಿ ಗಳಿಗೆ ಈ ವಿಚಾರ ತಿಳಿಸಿದ್ದಾರೆ. ಆಡಳಿತದಲ್ಲಿ ಯಾವರೀತಿ ಬದಲಾವಣೆಯಾಗುತ್ತದೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ನೀಡದೇಗೌಪ್ಯತೆಕಾಪಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರ್ಕಾರಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿಜುಲೈ 28 ರಂದುದೊಡ್ಡ ಬಳ್ಳಾಪುರದಲ್ಲಿ ಜನೋತ್ಸವಕಾರ್ಯಕ್ರಮ ನಡೆಸಲು ಬಿಜೆಪಿ ನಿರ್ಧರಿಸಿತ್ತು. ಕಾರಣಾಂತರಗಳಿಂದ ಮುಂದೂಡಲ್ಪಟ್ಟ ಈ ಕಾರ್ಯಕ್ರಮವನ್ನುಅದೇ ಸ್ಥಳದಲ್ಲಿ ಆಗಸ್ಟ್…

ಕೆಂಪುಕೋಟೆಗೆ 7,000 ಮಂದಿಗೆ ಆಹ್ವಾನ
News

ಕೆಂಪುಕೋಟೆಗೆ 7,000 ಮಂದಿಗೆ ಆಹ್ವಾನ

August 14, 2022

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡುವಕೆಂಪುಕೋಟೆಗೆ ಈ ಬಾರಿ 7000 ಅತಿಥಿಗಳು ಬರುವ ಸಾಧ್ಯತೆಇರುವುದರಿಂದದೆಹಲಿ ಪೆÇಲೀಸರು ಸರ್ಪಗಾವಲು ಹೆಚ್ಚಿಸಿದ್ದಾರೆ. ಕೆಂಪುಕೋಟೆಆಗಮನದ ಸ್ಥಳದಲ್ಲಿ ವಿವಿಧರೀತಿಯ ಭದ್ರತಾ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಮುಖ ಗುರುತಿ ಸುವಿಕೆ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಸೋಮವಾರ ನಡೆಯಲಿರುವಕಾರ್ಯಕ್ರಮಕ್ಕಾಗಿ ಸುಮಾರು 10 ಸಾವಿರ ಪೆÇಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಯಾವುದೇರೀತಿಯ ಬೆದರಿಕೆಗಳನ್ನು ಸುಲಭವಾಗಿಎದುರಿಸಲು ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು ಗಾಳಿಪಟ ಗಳನ್ನು ಹಿಡಿಯಲು 400 ಮಂದಿಯನ್ನು ನಿಯೋಜಿಸಲಾಗಿದೆ. ಇನ್ನುಕಟ್ಟಡದ ಮೇಲ್ಛಾವಣಿ ಸೇರಿದಂತೆ ಸೂಕ್ಷ್ಮಪ್ರದೇಶಗಳಲ್ಲೂ ಸಿಬ್ಬಂದಿ ಯನ್ನು ನಿಯೋಜಿಸಲಾಗಿದೆ. ಕೆಂಪುಕೋಟೆಯಿಂದಐದು ಕಿ.ಮೀವರೆಗೆ…

ಮಾಸ್ಕ್‍ಧರಿಸದವರಿಗೆ 250 ರೂ. ದಂಡ
News

ಮಾಸ್ಕ್‍ಧರಿಸದವರಿಗೆ 250 ರೂ. ದಂಡ

August 14, 2022

ಬೆಂಗಳೂರು: ಕೋವಿಡ್ ಪ್ರಕರಣಗಳು ಹೆಚ್ಚಾಗು ತ್ತಿರುವ ಹಿನ್ನೆಲೆಯಲ್ಲಿಕಡ್ಡಾಯವಾಗಿ ಮಾಸ್ಕ್‍ಧರಿಸುವ ನಿಯಮಉಲ್ಲಂಘಿ ಸುವವರಿಗೆದಂಡ ವಿಧಿಸುವ ಮೊದಲ ಹೆಜ್ಜೆಯಾಗಿ, ಆರೋಗ್ಯ ಸೌಧ ಮತ್ತುಅದರ ಆವ ರಣದಲ್ಲಿ ಮಾಸ್ಕ್‍ಧರಿಸದವರಿಗೆ 250 ರೂ. ದಂಡ ವಿಧಿಸಲುಆರೋಗ್ಯಆಯುಕ್ತ ಡಿ. ರಂದೀಪ್‍ಆದೇಶ ಹೊರಡಿಸಿದ್ದಾರೆ. ಆರೋಗ್ಯ ಸೌಧದ ಹೌಸ್‍ಕೀಪಿಂಗ್ ಸಿಬ್ಬಂದಿ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗೆ ಮತ್ತು ಸೌಧಕ್ಕೆ ಭೇಟಿ ನೀಡುವಇತರರಿಗೆ ಈ ನಿಯಮಅನ್ವಯಿಸುತ್ತದೆ. ‘ರಾಜ್ಯದಾದ್ಯಂತಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಕಾಲೇಜುಗಳ ಇತರಎಲ್ಲಾ ಕಚೇರಿಗಳಲ್ಲಿ ನಿಯಮಉಲ್ಲಂಘಿಸುವವರಿಗೆದಂಡ ವಿಧಿಸಲು ನಾವು ನಿರ್ದೇಶನ ನೀಡಿದ್ದೇವೆ. ಪ್ರಕರಣಗಳ ಸಂಖ್ಯೆ ಹೆಚ್ಚಳದ ಆಧಾರದ ಮೇಲೆ…

1 21 22 23 24 25 73
Translate »