ಮಹತ್ತರ ಬದಲಾವಣೆ…!
News

ಮಹತ್ತರ ಬದಲಾವಣೆ…!

August 14, 2022

ಬೆಂಗಳೂರು, ಆ. 13(ಕೆಎಂಶಿ)-ಜನೋತ್ಸವಕ್ಕೂ ಮುನ್ನ ಸರ್ಕಾರದಲ್ಲಿ ಮಹತ್ತರ ಬದಲಾ ವಣೆಯಾಗಲಿದೆಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನಿನ್ನೆ ನಡೆದರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಧಿಕಾರಿಗಳನ್ನು ಹೊರ ಕಳಿಸಿದ ನಂತರ ಮುಖ್ಯಮಂತ್ರಿಯವರುತಮ್ಮ ಸಹೋದ್ಯೋಗಿ ಗಳಿಗೆ ಈ ವಿಚಾರ ತಿಳಿಸಿದ್ದಾರೆ. ಆಡಳಿತದಲ್ಲಿ ಯಾವರೀತಿ ಬದಲಾವಣೆಯಾಗುತ್ತದೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ನೀಡದೇಗೌಪ್ಯತೆಕಾಪಾಡಿಕೊಂಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರ್ಕಾರಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿಜುಲೈ 28 ರಂದುದೊಡ್ಡ ಬಳ್ಳಾಪುರದಲ್ಲಿ ಜನೋತ್ಸವಕಾರ್ಯಕ್ರಮ ನಡೆಸಲು ಬಿಜೆಪಿ ನಿರ್ಧರಿಸಿತ್ತು. ಕಾರಣಾಂತರಗಳಿಂದ ಮುಂದೂಡಲ್ಪಟ್ಟ ಈ ಕಾರ್ಯಕ್ರಮವನ್ನುಅದೇ ಸ್ಥಳದಲ್ಲಿ ಆಗಸ್ಟ್ 28 ರಂದು ನಡೆಸಲು ನಿರ್ಧರಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಯನ್ನುಗಮನದಲ್ಲಿಟ್ಟುಕೊಂಡು ವರಿಷ್ಠರು ಪಕ್ಷ ಮತ್ತು ಸರ್ಕಾರದಲ್ಲಿ ಕೆಲ ಬದಲಾವಣೆಗೆ ಮುಂದಾಗಿದ್ದಾರೆ. ಅದುಯಾವರೀತಿಎಂಬುದರ ಬಗ್ಗೆ ಪೂರ್ಣ ಮಾಹಿತಿಇಲ್ಲವೇ ಸಂದೇಶವಿಲ್ಲ. ಆದರೆಕೇಂದ್ರ ಗೃಹ ಸಚಿವಅಮಿತ್ ಷಾ ಬಂದ ಸಂದರ್ಭದಲ್ಲಿ ಕೆಲ ಬದಲಾವಣೆಯ ಬಗ್ಗೆ ಸೂಚ್ಯವಾಗಿ ತಿಳಿಸಿದ್ದಾರೆ. ಸಂಪುಟ ಪುನಾ ರಚನೆಯಾಗುತ್ತದೆಯೋ, ವಿಸ್ತರಣೆಯಾಗುತ್ತದೆಯೋಇಲ್ಲವೇ ಖಾತೆಗಳ ಬದಲಾ ವಣೆಯಾಗುತ್ತದೆಯೋ ನನಗೆ ಏನೂ ತಿಳಿಯದು. ಆದರೆಚುನಾವಣೆಯನ್ನು ಗಮನ ದಲ್ಲಿಟ್ಟುಕೊಂಡು ಮಾಡುತ್ತಿರುವ ಬದಲಾವಣೆಗೆ ನಾವೆಲ್ಲರೂತಲೆಬಾಗಬೇಕಾಗುತ್ತದೆ. ಇದಕ್ಕೆ ಸಿದ್ಧರಾಗಬೇಕೆಂದು ಸೂಚ್ಯವಾಗಿ ತಿಳಿಸಿದ್ದಾರೆ. ಮುಖ್ಯಮಂತ್ರಿಯವರೇ ಸ್ವಯಂಪ್ರೇರಿತವಾಗಿಇಂತಹ ಹೇಳಿಕೆ ನೀಡಿರುವುದು ಸಚಿವರಲ್ಲಿಗೊಂದಲ ನಿರ್ಮಾಣ ಮಾಡಿದೆ. ಆದರೆಅವರಿಗೂ ಸ್ಪಷ್ಟತೆದೊರೆತಿಲ್ಲ. ಕರ್ನಾಟಕದಲ್ಲಿ ನಾಯಕತ್ವ ಬದಲಾ ವಣೆಯಾಗುತ್ತದೆಎಂದು ಪಕ್ಷದ ಒಳಗೆ ಚರ್ಚೆ ನಡೆಯುವ ಸಂದರ್ಭದಲ್ಲೇ ಮುಖ್ಯ ಮಂತ್ರಿಯವರ ಈ ಹೇಳಿಕೆ ಆಶ್ಚರ್ಯತಂದಿದೆ. ಮುಖ್ಯಮಂತ್ರಿಯವರು ಹೇಳುವಂತೆ ಇಡೀ ಸರ್ಕಾರದಲ್ಲಿ ಬದಲಾವಣೆಯಾಗುತ್ತದೆಯೋಇಲ್ಲವೇ ಮಂತ್ರಿಮಂಡಲದಲ್ಲಿ ಬದಲಾವಣೆಯಾಗುತ್ತದೆಯೋಕಾದು ನೋಡಬೇಕು. ಮುಂದುವರೆದು ಮಾತನಾಡಿದ ಮುಖ್ಯಮಂತ್ರಿಯವರು, ಹೊಸ ಕಾರ್ಯಕ್ರಮದ ಅನುಷ್ಠಾನದ ಬಗ್ಗೆಯು ಪ್ರಸ್ತಾಪ ಮಾಡಿದ್ದಾರೆ. ಬೊಮ್ಮಾಯಿಅವರೇ ಸ್ವಯಂಪ್ರೇರಿತವಾಗಿ ಹೇಳಿಕೆ ನೀಡುವ ಮೂಲಕ ರಾಜಕೀಯ ವಾಗಿದ್ದ ಗೊಂದಲಗಳಿಗೆ ತೆರೆ ಎಳೆದಂತಿದೆ. 28 ರಂದು ನಡೆಯುವಜನೋತ್ಸವಕಾರ್ಯಕ್ರಮಕ್ಕೆ ಪಕ್ಷದರಾಷ್ಟ್ರೀಯಅಧ್ಯಕ್ಷ ನಡ್ಡಾ, ರಾಜ್ಯಉಸ್ತುವಾರಿ ಹೊಣೆ ಹೊತ್ತ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್‍ಸಿಂಗ್ ಸೇರಿದಂತೆ ನಾಯಕರು ಭಾಗವಹಿಸಲಿದ್ದಾರಂತೆ.

Translate »