ಮಾಸ್ಕ್‍ಧರಿಸದವರಿಗೆ 250 ರೂ. ದಂಡ
News

ಮಾಸ್ಕ್‍ಧರಿಸದವರಿಗೆ 250 ರೂ. ದಂಡ

August 14, 2022

ಬೆಂಗಳೂರು: ಕೋವಿಡ್ ಪ್ರಕರಣಗಳು ಹೆಚ್ಚಾಗು ತ್ತಿರುವ ಹಿನ್ನೆಲೆಯಲ್ಲಿಕಡ್ಡಾಯವಾಗಿ ಮಾಸ್ಕ್‍ಧರಿಸುವ ನಿಯಮಉಲ್ಲಂಘಿ ಸುವವರಿಗೆದಂಡ ವಿಧಿಸುವ ಮೊದಲ ಹೆಜ್ಜೆಯಾಗಿ, ಆರೋಗ್ಯ ಸೌಧ ಮತ್ತುಅದರ ಆವ ರಣದಲ್ಲಿ ಮಾಸ್ಕ್‍ಧರಿಸದವರಿಗೆ 250 ರೂ. ದಂಡ ವಿಧಿಸಲುಆರೋಗ್ಯಆಯುಕ್ತ ಡಿ. ರಂದೀಪ್‍ಆದೇಶ ಹೊರಡಿಸಿದ್ದಾರೆ. ಆರೋಗ್ಯ ಸೌಧದ ಹೌಸ್‍ಕೀಪಿಂಗ್ ಸಿಬ್ಬಂದಿ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗೆ ಮತ್ತು ಸೌಧಕ್ಕೆ ಭೇಟಿ ನೀಡುವಇತರರಿಗೆ ಈ ನಿಯಮಅನ್ವಯಿಸುತ್ತದೆ.

‘ರಾಜ್ಯದಾದ್ಯಂತಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಕಾಲೇಜುಗಳ ಇತರಎಲ್ಲಾ ಕಚೇರಿಗಳಲ್ಲಿ ನಿಯಮಉಲ್ಲಂಘಿಸುವವರಿಗೆದಂಡ ವಿಧಿಸಲು ನಾವು ನಿರ್ದೇಶನ ನೀಡಿದ್ದೇವೆ. ಪ್ರಕರಣಗಳ ಸಂಖ್ಯೆ ಹೆಚ್ಚಳದ ಆಧಾರದ ಮೇಲೆ ಸಾರ್ವಜನಿಕರಿಗೂದಂಡ ವಿಧಿಸುತ್ತೇವೆ’ ಎಂದರು. ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ, ಜೂನ್‍ನಲ್ಲಿಆರೋಗ್ಯಆಯುಕ್ತರು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ) ಅವರಿಗೆ ಪ್ರಸ್ತಾವನೆ ಕಳುಹಿಸಿದ್ದು, ಬಿಬಿಎಂಪಿ ವ್ಯಾಪ್ತಿ ಮತ್ತು ಬೆಂಗಳೂರು ಜಿಲ್ಲೆಯಲ್ಲಿ ಮಾತ್ರಕಡ್ಡಾಯ ಮಾಸ್ಕ್ ನಿಯಮಉಲ್ಲಂಘಿಸುವವರಿಗೆದಂಡ ವಿಧಿಸಲು ಶಿಫಾರಸು ಮಾಡಿದ್ದಾರೆಎಂದು ತಿಳಿಸಿದ್ದಾರೆ.

Translate »