ಮುಂದಿನ ವರ್ಷಡಿಸೆಂಬರ್ ವೇಳೆಗೆ ರಾಮಮಂದಿರ ನಿರ್ಮಾಣಕಾರ್ಯ ಪೂರ್ಣ
News

ಮುಂದಿನ ವರ್ಷಡಿಸೆಂಬರ್ ವೇಳೆಗೆ ರಾಮಮಂದಿರ ನಿರ್ಮಾಣಕಾರ್ಯ ಪೂರ್ಣ

August 14, 2022

ಸುಲ್ತಾನ್‍ಪುರ: ಅಯೋಧ್ಯೆಯಲ್ಲಿರಾಮಮಂದಿರ ನಿರ್ಮಾಣಕಾರ್ಯ ಮುಂದಿನ ವರ್ಷಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಶ್ರೀರಾಮ ಜನ್ಮ ಭೂಮಿತೀರ್ಥಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್‍ರೈ ಹೇಳಿದ್ದಾರೆ. ಶುಕ್ರವಾರರಕ್ಷಾ ಬಂಧನದ ಅಂಗವಾಗಿ ನಡೆದಕಾರ್ಯಕ್ರಮದಲ್ಲಿ ಮಾತನಾಡಿದರೈಅವರು, ಮುಂದಿನ ವರ್ಷಡಿಸೆಂಬರ್ ವೇಳೆಗೆ ರಾಮಮಂದಿರ ನಿರ್ಮಾಣಕಾರ್ಯ ಪೂರ್ಣಗೊಳ್ಳ ಲಿದೆ. ಆಗ ಭವ್ಯ ಮಂದಿರದಲ್ಲಿಜನರುರಾಮಲಲ್ಲಾನದರ್ಶನ ಪಡೆಯಬಹುದುಎಂದು ತಿಳಿಸಿದರು.

“ಸುಲ್ತಾನ್‍ಪುರಅಯೋಧ್ಯೆಗೆ ಸಮೀಪದಲ್ಲಿರುವುದರಿಂದ, ಮುಂದಿನ ವರ್ಷಡಿಸೆಂಬರ್‍ನಲ್ಲಿ ಶ್ರೀರಾಮ ಲಲ್ಲಾನ ‘ದರ್ಶನ’ ಪಡೆಯಲು ನಾನು ಇಲ್ಲಿನಜನರಿಗೆಆಹ್ವಾನ ನೀಡುತ್ತಿದ್ದೇನೆ” ಎಂದುಅವರು ಹೇಳಿದರು.

ನಿರ್ಮಾಣಕಾರ್ಯ ಭರದಿಂದ ಸಾಗುತ್ತಿದ್ದು, 2023ರ ಡಿಸೆಂಬರ್‍ನಲ್ಲಿ ಭಕ್ತಾದಿಗಳ ದರ್ಶನಕ್ಕೆದೇವಾಲಯ ಸಿದ್ಧವಾಗಲಿದೆ ಎಂದುರೈ ತಿಳಿಸಿದ್ದಾರೆ. ನಿರ್ಮಾಣಕಾರ್ಯದಲ್ಲಿಕಬ್ಬಿಣವನ್ನು ಬಳಸುತ್ತಿಲ್ಲ ಎಂದು ಪ್ರತಿಪಾದಿಸಿದ ರೈ, ದೇವಾಲಯದ ವಿನ್ಯಾಸವುಜನರನ್ನುಆಶ್ಚರ್ಯಚಕಿತರನ್ನಾಗಿಸುವಂತಿದೆಎಂದಿದ್ದಾರೆ.

Translate »