ಬೆಂಗಳೂರು, ಡಿ.21 (ಕೆಎಂಶಿ)- ಕೋವಿಡ್ ಪ್ರಕರಣ ಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹೊಸ ವರ್ಷಾಚರಣೆಗೆ ಕೆಲವು ನಿರ್ಬಂಧಗಳನ್ನು ರಾಜ್ಯ ಸರ್ಕಾರ ಹೇರಿದೆ. ಕೋವಿಡ್ ರೂಪಾಂತರ ತಳಿ ಒಮಿಕ್ರಾನ್ ವೈರಾಣು ರಾಷ್ಟ್ರ ಮತ್ತು ರಾಜ್ಯದಲ್ಲಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಲು ವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳ ಗಾವಿಯ ಸುವರ್ಣಸೌಧದಲ್ಲಿ ಸಚಿವರು, ಅಧಿಕಾರಿ ಗಳು ಮತ್ತು ತಜ್ಞರೊಟ್ಟಿಗೆ ಸಮಾಲೋಚನೆ ನಡೆಸಿದ ನಂತರ ಈ ತೀರ್ಮಾನ ಕೈಗೊಂಡಿದ್ದಾರೆ. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಯವರು,…
ಮತಾಂತರ ನಿಷೇಧಕ್ಕೆ ಸಂಪುಟ ನಿರ್ಧಾರ
December 21, 2021ಬೆಂಗಳೂರು, ಡಿ. 20(ಕೆಎಂಶಿ)-ಮತಾಂತರ ನಿಷೇಧಿಸಿ ಕಾನೂನು ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟ ಮಹ ತ್ವದ ತೀರ್ಮಾನ ಕೈಗೊಂಡಿದೆ. ಕಾಯ್ದೆ ಅನುಷ್ಠಾನ ಹಾಗೂ 2011ನೇ ಸಾಲಿನಲ್ಲಿ ಕೆಪಿಎಸ್‍ಸಿ ಯಿಂದ ಆಯ್ಕೆಗೊಂಡ 350ಕ್ಕೂ ಹೆಚ್ಚು ಕೆಎಎಸ್ ಹುದ್ದೆಗಳನ್ನು ಖಾಯಂಗೊಳಿಸಲು ಅಗತ್ಯ ಮಸೂದೆಯನ್ನು ವಿಧಾನಮಂಡಲದಲ್ಲಿ ಮಂಡಿಸುವ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ತುರ್ತು ಸಚಿವ ಸಂಪುಟ ಸಭೆ ನಡೆಸಿ, ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಮತಾಂತರ ನಿಷೇಧಕ್ಕೆ ಪ್ರತಿಪಕ್ಷಗಳು ಹಾಗೂ ಕ್ರಿಶ್ಚಿಯನ್ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿದರೂ, ಅದನ್ನು ಗಣನೆಗೆ ತೆಗೆದು…
MES ವಿರುದ್ಧ ಖಂಡನಾ ನಿರ್ಣಯ ಅಂಗೀಕಾರ
December 21, 2021ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನ ಹಾಗೂ ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಪುಂಡಾಟ ನಡೆಸಿದ್ದ ಎಂಇಎಸ್ ಸಂಘಟನೆಯ ವಿರುದ್ಧ ಅಧಿವೇಶನದಲ್ಲಿ ಸರ್ವಾನುಮತದಿಂದ ಖಂಡನಾ ನಿರ್ಣಯ ಅಂಗೀಕರಿಸಲಾಗಿದೆ. ಅಧಿವೇಶನದಲ್ಲಿ ಸಿಎಂ ಬೊಮ್ಮಾಯಿ ಅವರು ಖಂಡನಾ ನಿರ್ಣಯವನ್ನು ಮಂಡಿಸಿದ್ದು ಎಲ್ಲರೂ ಒಕ್ಕೊರಲಿನಿಂದ ಅಂಗೀಕರಿಸಿದ್ದಾರೆ. ನಂತರ ಮಾತನಾಡಿದ ಅವರು ಸಂಗೊಳ್ಳಿ ರಾಯಣ್ಣ, ಬಸವೇಶ್ವರ, ಶಿವಾಜಿ ಪ್ರತಿಮೆಗೆ ಅವಮಾನ ವನ್ನು ಸದನವು ಗಂಭೀರವಾಗಿ ಖಂಡಿಸುತ್ತದೆ. ಇಂಥ ಕೃತ್ಯಗಳನ್ನು ದೇಶದ್ರೋಹ ಎಂದು ಪರಿಗಣಿಸಿ ಗಂಭೀರ ಕ್ರಮ ತೆಗೆದುಕೊಳ್ಳಲಾಗುವುದು. ವಿವರಗಳನ್ನು…
ಎಂಇಎಸ್ ಪುಂಡಾಟಿಕೆ ಸಹಿಸಲು ಸಾಧ್ಯವೇ ಇಲ್ಲ
December 21, 2021ಬೆಂಗಳೂರು, ಡಿ. 20(ಕೆಎಂಶಿ)- ಮಹಾರಾಷ್ಟ್ರ ಏಕೀ ಕರಣ ಸಮಿತಿಯ ಪುಂಡಾಟಿಕೆಯನ್ನು ಕನ್ನಡಿಗರು ಇನ್ನು ಸಹಿಸಲು ಸಾಧ್ಯವಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದ ರಾಮಯ್ಯ ತಿಳಿಸಿದ್ದಾರೆ. ಕನ್ನಡಿಗರ ಉದಾರತೆಯನ್ನು ಪದೇ ಪದೆ ದುರುಪ ಯೋಗಪಡಿಸಿಕೊಳ್ಳುವ ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧಿಸುವ ಕುರಿತು ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ವಿರೂಪಗೊಳಿಸಿದ ಘಟನೆ ಸಂಬಂಧ ಖಂಡನಾ ನಿರ್ಣಯ ಅಂಗೀಕರಿಸುವಂತೆ ಆಗ್ರಹಿಸಿದ್ದಾರೆ. ಸಂಗೊಳ್ಳಿ ರಾಯಣ್ಣ, ಶಿವಾಜಿ…
ಇಡಿಯಿಂದ ಸತತ ಐದು ಗಂಟೆಗಳ ಕಾಲ ಐಶ್ವರ್ಯಾ ರೈ ವಿಚಾರಣೆ
December 21, 2021ದೆಹಲಿ, ಡಿ. 20- ಪನಾಮಾ ಪೇಪರ್ಸ್ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರನ್ನು ಸತತ ಐದು ಗಂಟೆಗಳ ಕಾಲ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇಂದು ವಿಚಾರಣೆ ನಡೆಸಿದರು. ಸೋಮವಾರ ಸಂಜೆ ಅವರು ಇಂಡಿಯಾ ಗೇಟ್ ಬಳಿಯಿರುವ ಇಡಿ ಕಚೇರಿಯಿಂದ ನಿರ್ಗಮಿಸಿದರು. ಆದಾಗ್ಯೂ, ಮತ್ತೆ ಐಶ್ವರ್ಯಾ ರೈ ಅವರಿಗೆ ಸಮನ್ಸ್ ನೀಡಲಾಗುತ್ತದೆಯೇ ಎಂಬುದರ ಬಗ್ಗೆ ಅಧಿಕಾರಿಗಳು ಯಾವುದೇ ಸ್ಪಷ್ಟ ಹೇಳಿಕೆ ನೀಡಿಲ್ಲ. ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್ ಮೂಲದ ಕಂಪನಿ ಯೊಂದರಲ್ಲಿ ಇರುವ ತನ್ನ…
ಅಧಿಕಾರ ಶಾಶ್ವತವಲ್ಲ…
December 20, 2021ಹಾವೇರಿ,ಡಿ.19-ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾವಣೆಯಾಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಮಧ್ಯೆ `ಅಧಿಕಾರ ಶಾಶ್ವತ ಅಲ್ಲ’ ಎಂದು ಭಾವನಾತ್ಮಕವಾಗಿ ಸ್ವತಃ ಮುಖ್ಯಮಂತ್ರಿಗಳೇ ಹೇಳಿ ರುವುದು ಈ ಮಾತುಗಳಿಗೆ ಪುಷ್ಟಿ ನೀಡಿದಂತಿದೆ. ಶಿಗ್ಗಾಂವಿ ಪಟ್ಟಣದ ಸಂತೆ ಮೈದಾನದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಪುತ್ಥಳಿ ಲೋಕಾರ್ಪಣೆ ಕಾರ್ಯ ಕ್ರಮದಲ್ಲಿ ಮಾತನಾಡಿದ ಬೊಮ್ಮಾಯಿ, ಅಧಿಕಾರ ಹಾಗೂ ಸ್ಥಾನಮಾನ ಶಾಶ್ವತ ಅಲ್ಲ ಎಂದು ಹೇಳಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿ ಸಿದೆ. ಅಲ್ಲದೇ ಭಾವನಾತ್ಮಕ ಭಾಷಣ ಬೊಮ್ಮಾಯಿ ರಾಜೀ ನಾಮೆಗೆ…
ಸಂಗೊಳ್ಳಿ ರಾಯಣ್ಣ ಪ್ರತಿಮೆ ಪುನರ್ ಪ್ರತಿಷ್ಠಾಪನೆ
December 20, 2021ಬೆಳಗಾವಿ,ಡಿ.19-ಎಂಇಎಸ್ ಪುಂಡರು ಶನಿವಾರ ಮುಂಜಾನೆ ಧ್ವಂಸಗೊಳಿಸಿದ್ದ ಸ್ಥಳದಲ್ಲೇ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಭಾನುವಾರ ಪುನರ್ ಪ್ರತಿ ಷ್ಠಾಪಿಸಲಾಗಿದೆ. ಇಲ್ಲಿನ ಅನಗೋಳದ ಕನಕದಾಸ ಕಾಲೋನಿಯಲ್ಲಿ ನಿರ್ಮಿಸಲಾಗಿದ್ದ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಶನಿವಾರ ಮುಂಜಾನೆ ಎಂಇಎಸ್ ಪುಂಡರು ಭಗ್ನಗೊಳಿಸಿ, ಕತ್ತಿ ಮತ್ತು ಗುರಾಣಿಯನ್ನು ಬೇರೆ ಬೇರೆ ದಿಕ್ಕುಗಳಲ್ಲಿ ಬಿಸಾಡಿದ್ದರು. ಎಂಇಎಸ್ ಪುಂಡರಿಂದ ಹಾನಿಗೊಳಗಾಗಿದ್ದ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಜಿಲ್ಲಾಡಳಿತ ಸರಿಪಡಿಸಿ, ಕತ್ತಿ ಮತ್ತು ಗುರಾಣಿಯನ್ನು ಅಳವಡಿಸಿ ಭಾನುವಾರ ಬೆಳಗಾಗುವಷ್ಟ ರಲ್ಲಿ ಅದೇ ಸ್ಥಳದಲ್ಲಿ ಪುನರ್ ಪ್ರತಿಷ್ಠಾಪನೆ ಮಾಡಿತು. ಸ್ಥಳೀಯರು ಮತ್ತು…
ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಅಟ್ಟಹಾಸ
December 19, 2021ಬೆಳಗಾವಿ, ಡಿ.18- ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಪದೇ ಪದೆ ತಗಾದೆ ತೆಗೆಯುತ್ತಿದ್ದ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಪುಂಡರು ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನಮಂಡಲ ಅಧಿವೇಶನ ನಡೆಯುವ ವೇಳೆಯೇ ಪುಂಡಾಟ ನಡೆಸುತ್ತಿದ್ದು ಕೆಲ ದಿನಗಳ ಹಿಂದೆ ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿ ಉದ್ವಿಗ್ನ ವಾತಾವರಣ ಸೃಷ್ಟಿಸಿದ್ದರು. ಅದು ಸಾಲದೆಂಬಂತೆ ಕಳೆದ ರಾತ್ರಿ (ಶುಕ್ರವಾರ) ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಭಗ್ನಗೊಳಿಸಿದ್ದಲ್ಲದೇ ವಾಹನಗಳು ಹಾಗೂ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿ ಪುಂಡಾಟ ಮೆರೆದಿದ್ದಾರೆ. ಶುಕ್ರವಾರ ರಾತ್ರಿ ಬೆಂಗಳೂರಿನ ಸದಾಶಿವನಗರದಲ್ಲಿ…
ನಕಲಿ ದಾಖಲೆ ಮೂಲಕ ಭೂ ಒಡೆತನ
December 18, 2021ಮಂಡ್ಯದಲ್ಲಿ ಈಗಾಗಲೇ ಒಂದು ಪ್ರಕರಣ ಬಯಲಿಗೆ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಪ್ರಕಟ ರಾಜಕೀಯ ಒತ್ತಡ, ನಕಲಿ ದಾಖಲೆ ಸೃಷ್ಟಿಸಿ ಭೂಮಿ ಉಳ್ಳವರೇ ಭೂಮಿ ಪಡೆದಿದ್ದಾರೆ ಕ್ರಿಮಿನಲ್ ಕೇಸ್ ದಾಖಲಿಸಲು ಸರ್ಕಾರ ನಿರ್ಧಾರ ೧೯೯೧ರಿಂದ ೫೫ ಸಾವಿರ ಎಕರೆ ಭೂಮಿ ೪೯ ಸಾವಿರ ಫಲಾನುಭವಿಗಳಿಗೆ ಹಂಚಿಕೆ: ಇದರ ಮೌಲ್ಯ ೧೩೬೦ ಕೋಟಿ ಬೆಂಗಳೂರು, ಡಿ. ೧೭(ಕೆಎಂಶಿ)-ದಲಿತ ಸಮುದಾಯದ ಭೂ ಒಡೆತನ ಯೋಜನೆ ಅಡಿ ನಕಲಿ ದಾಖಲೆ ಸಲ್ಲಿಸಿ ಭೂಮಿ ಪಡೆದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ…
ಪೊಲೀಸ್, ಆಹಾರ ಇಲಾಖೆ ಅಧಿಕಾರಿಗಳಿಂದ ಪ್ರತ್ಯೇಕ ತನಿಖೆ
December 18, 2021ಮೈಸೂರು, ಡಿ. ೧೭(ಆರ್‌ಕೆ)-ಕರ್ನಾಟಕ ಹಾಲು ಒಕ್ಕೂಟದ ‘ನಂದಿನಿ’ ಹೆಸರಲ್ಲಿ ನಕಲಿ ತುಪ್ಪ ತಯಾರಿ ಸುತ್ತಿದ್ದ ಪ್ರಕರಣ ಸಂಬAಧ ಪೊಲೀಸ್ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ. ಮೈಮುಲ್ ಅಧಿಕಾರಿಗಳು ನೀಡಿರುವ ದೂರಿನನ್ವಯ ಪ್ರಮುಖ ಆರೋಪಿಗಳೆನ್ನಲಾದ ತಮಿಳುನಾಡು ಮೂಲದ ಮುರುಗೇಶ, ಆತನ ಪತ್ನಿ ಅಶ್ವಿನಿ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಶಶಿಕುಮಾರ್ ನೇತೃತ್ವದ ತನಿಖಾ ತಂಡವು ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ…