ಮತಾಂತರ ನಿಷೇಧಕ್ಕೆ ಸಂಪುಟ ನಿರ್ಧಾರ
News

ಮತಾಂತರ ನಿಷೇಧಕ್ಕೆ ಸಂಪುಟ ನಿರ್ಧಾರ

December 21, 2021

ಬೆಂಗಳೂರು, ಡಿ. 20(ಕೆಎಂಶಿ)-ಮತಾಂತರ ನಿಷೇಧಿಸಿ ಕಾನೂನು ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟ ಮಹ ತ್ವದ ತೀರ್ಮಾನ ಕೈಗೊಂಡಿದೆ.
ಕಾಯ್ದೆ ಅನುಷ್ಠಾನ ಹಾಗೂ 2011ನೇ ಸಾಲಿನಲ್ಲಿ ಕೆಪಿಎಸ್‍ಸಿ ಯಿಂದ ಆಯ್ಕೆಗೊಂಡ 350ಕ್ಕೂ ಹೆಚ್ಚು ಕೆಎಎಸ್ ಹುದ್ದೆಗಳನ್ನು ಖಾಯಂಗೊಳಿಸಲು ಅಗತ್ಯ ಮಸೂದೆಯನ್ನು ವಿಧಾನಮಂಡಲದಲ್ಲಿ ಮಂಡಿಸುವ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ತುರ್ತು ಸಚಿವ ಸಂಪುಟ ಸಭೆ ನಡೆಸಿ, ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಮತಾಂತರ ನಿಷೇಧಕ್ಕೆ ಪ್ರತಿಪಕ್ಷಗಳು ಹಾಗೂ ಕ್ರಿಶ್ಚಿಯನ್ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿದರೂ, ಅದನ್ನು ಗಣನೆಗೆ ತೆಗೆದು ಕೊಳ್ಳದೇ ಉತ್ತರಪ್ರದೇಶ ಸೇರಿದಂತೆ ಬಿಜೆಪಿ ಆಡಳಿತ ವಿರುವ ರಾಜ್ಯದಲ್ಲಿ ತಂದಿರುವ ಕಾನೂನನ್ನು ಕರ್ನಾಟಕ ದಲ್ಲೂ ಜಾರಿಗೊಳಿಸಲು ಮುಂದಾಗಿದೆ.

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಯನ್ನು ವಿಧಾನಮಂಡ ಲದಲ್ಲಿ ಮಂಡನೆ ಮಾಡಿ,ಕಾನೂನು ತರಲು ಸಭೆ ಸಮ್ಮತಿಸಿದೆ. ಕಾಯ್ದೆಯಲ್ಲಿ ಕೆಲವು ತಿದ್ದುಪಡಿ ಮಾಡಿ, ನಾಳೆಯೇ ವಿಧಾನಸಭೆ ಯಲ್ಲಿ ಮಂಡನೆ ಮಾಡಲು
ತೀರ್ಮಾನ ಕೈಗೊಂಡಿದೆ.

ಕಾನೂನು ಜಾರಿಗೊಂಡ ನಂತರ ಬಲವಂತ ವಾಗಿ ಯಾರಾದರೂ ಮತಾಂತರ ಮಾಡಿಸಿದರೆ, ಅಂತಹವ ರಿಗೆ ಜೈಲು ಶಿಕ್ಷೆ ಸೇರಿದಂತೆ ಕೆಲವು ಕಠಿಣ ಕ್ರಮ ಕೈಗೊಳ್ಳಲು ಕಾಯ್ದೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಬೆಂಗಳೂರಿ ನಲ್ಲಿ ನಡೆದ ವಿಧಾನಮಂಡಲದ ಅಧಿವೇಶನ ಸಂದರ್ಭದಲ್ಲೇ ಮತಾಂತರ ನಿಷೇಧ ಕಾಯ್ದೆಯನ್ನು ಮಂಡಿಸಿ, ಕಾನೂನು ತರಲು ಸರ್ಕಾರ ಸಿದ್ಧತೆ ನಡೆಸಿತ್ತು.

ಆದರೆ ಕಾಯ್ದೆ ಪೂರ್ಣ ಪ್ರಮಾಣದಲ್ಲಿ ಸಿದ್ಧಪಡಿ ಸದ ಕಾರಣ ಇದೀಗ ಬೆಳಗಾವಿ ಅಧಿವೇಶನ ದಲ್ಲಿ ಮಂಡನೆ ಮಾಡಿ ಅನುಮೋದನೆ ಪಡೆಯಲು
ನಿರ್ಧರಿಸಿದೆ. ಹಿಂದೂಗಳನ್ನು ರಾಜ್ಯಾದ್ಯಂತ ಕ್ರಿಶ್ಚಿಯನ್ ಸಮುದಾಯಕ್ಕೆ ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ ಎಂದು ವಿಧಾನಸಭೆ
ಒಳಗೆ ಮತ್ತು ಹೊರಗೆ ವ್ಯಾಪಕವಾಗಿ ಚರ್ಚೆಗೊಂಡಿತ್ತು. ಅಷ್ಟೇ ಅಲ್ಲ ಹಿಂದೂಪರ ಸಂಘಟನೆಗಳು ಕಾಯ್ದೆಯನ್ನು ಅನುಷ್ಠಾನಗೊಳಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ತಂದಿದ್ದವು. ಕಾರಣಾಂತರಗಳಿಂದ ಬಲಹೀನಗೊಂಡವರನ್ನು ಮನವೊಲಿಸಿ, ಕ್ರಿಶ್ಚಿಯನ್ ಕೆಲವು ಪಾದ್ರಿಗಳು ಮತ್ತು ಮುಖಂಡರುಗಳು, ಹಿಂದೂಗಳನ್ನು ತಮ್ಮ ಸಮಾಜಕ್ಕೆ ಮತಾಂತರ ಮಾಡಿಸುತ್ತಿದ್ದಾರೆ. ಉಡುಗೊರೆ ನೀಡುವ ಮೂಲಕವೂ, ಶಿಕ್ಷಣ ಕೊಡಿಸುವ ನೆಪದಲ್ಲೂ, ವೈದ್ಯಕೀಯ ವೆಚ್ಚ ಭರಿಸುವುದರಲ್ಲೂ, ಇಲ್ಲವೆ ಬಲವಂತವಾಗಿ ಕ್ರಿಶ್ಚಿಯನ್ ಸಮುದಾಯದವರು ಹಿಂದೂಗಳನ್ನು ಮತಾಂತರ ಮಾಡಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಬಗ್ಗೆ ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ತನ್ನ ತಾಯಿಯನ್ನೇ ಕ್ರಿಶ್ಚಿಯನ್ ಸಮುದಾಯಕ್ಕೆ ನನ್ನ ಕ್ಷೇತ್ರ ಚರ್ಚ್‍ನ ಪಾದ್ರಿಗಳು ಮತಾಂತರ ಮಾಡಿಸಿದ್ದಾರೆ. ನನ್ನ ಜಿಲ್ಲೆಯಲ್ಲಿ ವ್ಯಾಪಕವಾಗಿ ಈ ಮತಾಂತರ ನಡೆಯುತ್ತಿದೆ ಎಂದು ವಿಧಾನಸಭೆಯಲ್ಲೇ ತಿಳಿಸಿದ್ದರು.

ಇತ್ತೀಚೆಗೆ ಮತಾಂತರ ವ್ಯಾಪಕವಾಗಿ ಆಗುತ್ತಿದೆ ಎಂದು ಹಿಂದೂ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ತಂದಿದ್ದವು. ಅಷ್ಟೇ ಅಲ್ಲದೆ, ಇಂದು ಬೆಳಗಾವಿಯಲ್ಲಿ ವಿಶ್ವ ಹಿಂದೂ ಏರ್ಪಡಿಸಿದ್ದ ಮಠಾಧೀಶರ ಸಭೆಯಲ್ಲೂ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಮುಖ್ಯಮಂತ್ರಿಯವರ ಮೇಲೆ ಒತ್ತಡ ಹೇರಿದ್ದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಭಾಗವಹಿಸಿದ್ದ ಈ ಸಭೆಯಲ್ಲಿ ಹಿಂದೂಗಳನ್ನು ವ್ಯಾಪಕವಾಗಿ ಮತಾಂತರ ಮಾಡಲಾಗುತ್ತಿದೆ. ಇದನ್ನು ತಡೆಯ ಬೇಕೆಂದು ಸಭೆಯಲ್ಲಿ ಭಾಗವಹಿಸಿದ ಮಠಾಧೀಶರು, ಸರ್ಕಾರಕ್ಕೆ ಸಲಹೆ ಮಾಡಿದ್ದರು.

ಸಭೆಯಲ್ಲೇ ಮುಖ್ಯಮಂತ್ರಿಯವರು ಸಮಾಜದ ಭಾವನೆಗಳಿಗೆ ಹಾಗೂ ಇಚ್ಛೆಗೆ ತಕ್ಕಂತೆ ಸ್ಪಂದಿಸುತ್ತೇವೆ. ಈ ನಿಟ್ಟಿನಲ್ಲಿ ನಾವು ಸಕಾರಾತ್ಮಕವಾಗಿ ಹೆಜ್ಜೆ ಇಡುತ್ತೇವೆ. ನಮ್ಮ ಮೇಲೆ ವಿಶ್ವಾಸವಿರಲಿ ಎನ್ನುವ ಮೂಲಕ ಮಸೂದೆ ಮಂಡನೆ ಸುಳಿವನ್ನು ಮುಖ್ಯಮಂತ್ರಿ ನೀಡಿದ್ದರು. ಅಷ್ಟೇ ಅಲ್ಲ ಹಿಂದೂ ಧರ್ಮವು ಇಡೀ ವಿಶ್ವದಲ್ಲೇ ಎಲ್ಲ ಧರ್ಮಗಳಿಗಿಂತ ಹೃದಯ ವೈಶಾಲ್ಯ ವೈಚಾರಿಕತೆ ಹೊಂದಿದೆ. ಮಾನವೀಯ ಧರ್ಮ ಪರಿಪಾಲನೆ ಮಾಡುವ ಧರ್ಮವಾಗಿದೆ. ನಮ್ಮ ಮೇಲೆ ಭೌಗೋಳಿಕವಾಗಿ ದಾಳಿಯಾಗಿದೆ. ಹಿಂದೆಲ್ಲ ಹಿಂದೂ ಧರ್ಮ ಸಂಕಷ್ಟಕ್ಕೀಡಾಗಿದೆ. ಹಲವು ಸಂದರ್ಭ ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮತಾಂತರ ನಡೆದಿದೆ. ದೇಶದಲ್ಲಿರುವ ಇತರ ಧರ್ಮೀಯರ ಮೂಲ ಹುಡುಕಿದಾಗ ಅವರೆಲ್ಲರೂ ಹಿಂದೂ ಧರ್ಮೀಯರಾಗಿದ್ದರು ಎನ್ನುವ ಮೂಲಕ ಸಭೆಯಲ್ಲೇ ಮತಾಂತರ ನಿಷೇಧ ಕಾಯ್ದೆಯನ್ನು ಮುಖ್ಯಮಂತ್ರಿಯವರು ಸಮರ್ಥಿಸಿಕೊಂಡಿದ್ದರು. ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ ನಾಳೆ ವಿಧಾನಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡನೆ ಮಾಡುವ ಸಾದ್ಯತೆ ಇದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸಿ, ಕಾನೂನು ಅನುಷ್ಠಾನವಾಗದಂತೆ ತಡೆಯುವ ಪ್ರಯತ್ನ ಮಾಡಬಹುದು.
ಆಡಳಿತಾರೂಢ ಬಿಜೆಪಿ ವಿಧಾನಸಭೆಯಲ್ಲಿ ಬಹುಮತ ಹೊಂದಿರುವುದರಿಂದ ಪ್ರತಿಪಕ್ಷಗಳ ಹೋರಾಟ ಸಫಲವಾಗದು. ಇಲ್ಲಿ ಅನುಮೋದನೆ ಪಡೆದು, ವಿಧಾನಪರಿಷತ್ತಿನಲ್ಲಿ ಮಂಡನೆಯಾದಂತಹ ಸಂದರ್ಭದಲ್ಲಿ ಸರ್ಕಾರಕ್ಕೆ ಒಂದು ಮತದ ಕೊರತೆ ಇದೆ.

ಅಲ್ಲಿ ಯಾವ ರೀತಿ ಅನುಮೋದನೆ ಪಡೆದುಕೊಳ್ಳುತ್ತಾರೋ ಕಾದು ನೋಡಬೇಕು. ಬಿಜೆಪಿ ಸರ್ಕಾರ ಕಾಯ್ದೆ ಅನುಷ್ಠಾನಗೊಳಿಸಿದರೂ, ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಈ ಕಾನೂನನ್ನು ರದ್ದು ಮಾಡುವುದಾಗಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಈಗಾಗಲೇ ಘೋಷಣೆ ಮಾಡಿದ್ದಾರೆ. ಒಂದು ಸಮಾಜವನ್ನು ಗುರಿಯಾಗಿಟ್ಟುಕೊಂಡು ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲು ಸರ್ಕಾರ ಹೊರಟಿದೆ ಎಂದು ಕ್ರಿಶ್ಚಿಯನ್ ಪಾದ್ರಿಗಳು ಮತ್ತು ಮುಖಂಡರುಗಳು ಆರೋಪಿಸಿ ದ್ದಲ್ಲದೆ, ಯಾವುದೇ ಕಾರಣಕ್ಕೂ ಕಾನೂನನ್ನು ಜಾರಿಗೊಳಿಸಬಾರದೆಂದು ಮುಖ್ಯ ಮಂತ್ರಿಯವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದ್ದರು. ಈ ಮಧ್ಯೆ ವಿಧಾನ ಮಂಡಲದಲ್ಲಿ ಕಾಯ್ದೆ ವಿರುದ್ಧ ಹೋರಾಟ ಮಾಡಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ಅಲ್ಲದೆ, ತಮ್ಮ ಪಕ್ಷದ ಎಲ್ಲ ಶಾಸಕರು ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕೆಂದು ಸಿಎಲ್‍ಪಿ ನಾಯಕರು ಈಗಾಗಲೇ ವಿಪ್ ನೀಡಿದ್ದಾರೆ.

Translate »