ಇಡಿಯಿಂದ ಸತತ ಐದು ಗಂಟೆಗಳ ಕಾಲ ಐಶ್ವರ್ಯಾ ರೈ ವಿಚಾರಣೆ
News

ಇಡಿಯಿಂದ ಸತತ ಐದು ಗಂಟೆಗಳ ಕಾಲ ಐಶ್ವರ್ಯಾ ರೈ ವಿಚಾರಣೆ

December 21, 2021

ದೆಹಲಿ, ಡಿ. 20- ಪನಾಮಾ ಪೇಪರ್ಸ್ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರನ್ನು ಸತತ ಐದು ಗಂಟೆಗಳ ಕಾಲ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇಂದು ವಿಚಾರಣೆ ನಡೆಸಿದರು. ಸೋಮವಾರ ಸಂಜೆ ಅವರು ಇಂಡಿಯಾ ಗೇಟ್ ಬಳಿಯಿರುವ ಇಡಿ ಕಚೇರಿಯಿಂದ ನಿರ್ಗಮಿಸಿದರು. ಆದಾಗ್ಯೂ, ಮತ್ತೆ ಐಶ್ವರ್ಯಾ ರೈ ಅವರಿಗೆ ಸಮನ್ಸ್ ನೀಡಲಾಗುತ್ತದೆಯೇ ಎಂಬುದರ ಬಗ್ಗೆ ಅಧಿಕಾರಿಗಳು ಯಾವುದೇ ಸ್ಪಷ್ಟ ಹೇಳಿಕೆ ನೀಡಿಲ್ಲ. ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್ ಮೂಲದ ಕಂಪನಿ ಯೊಂದರಲ್ಲಿ ಇರುವ ತನ್ನ ಹಣದ ಬಗ್ಗೆ ಅವರು ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಬ್ಬರು ಮಹಿಳಾ ಅಧಿಕಾರಿ ಸೇರಿದಂತೆ ಆರು ಅಧಿಕಾರಿಗಳ ತಂಡ ಐಶ್ವರ್ಯ ರೈ ನೀಡಿದ ಹೇಳಿಕೆ ಯನ್ನು ದಾಖಲಿಸಿಕೊಂಡಿದೆ. ಅವರ ಮಾವ ಅಮಿತಾಭ್ ಬಚ್ಚನ್ ಅವರ ಸಂಸ್ಥೆಗೆ ಸಂಬಂಧಿಸಿದಂತೆ 50 ಪ್ರಶ್ನೆಗಳನ್ನು ಐಶ್ವರ್ಯ ಅವರಿಗೆ ಕೇಳಿರುವುದಾಗಿ ಮೂಲಗಳು ತಿಳಿಸಿವೆ. ಅವರು ಆ ಸಂಸ್ಥೆಯ ಮೊದಲ ನಿರ್ದೇಶಕ ರಾಗಿದ್ದರು. ತದನಂತರ ಷೇರು ಪಾಲುದಾರರಾಗಿದ್ದಾರೆ.

ಇದು ಮೂರನೇ ಬಾರಿಗೆ ಐಶ್ವರ್ಯಾ ರೈಗೆ ನೀಡಿದ ಸಮನ್ಸ್ ಆಗಿದೆ. ಆದಾಗ್ಯೂ, ಈ ಹಿಂದೆ ನಡೆದ ತನಿಖೆಗೆ ಆಕೆ ಸೇರಿರಲಿಲ್ಲ. ಡಿಸೆಂಬರ್ 20ರಂದು ಆಕೆಗೆ ಸಮನ್ಸ್ ನೀಡಲಾಗಿತ್ತು. ಮೂರನೇ ಸಮನ್ಸ್‍ನಿಂದ ಆಕೆ ತನಿಖೆಗೆ ಹಾಜರಾಗಿದ್ದಾಗಿ ಇಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫೆಮಾ ಕಾಯ್ದೆಯ ವಿನಾಯಿತಿ ಅಡಿಯಲ್ಲಿ 48 ವರ್ಷದ ನಟಿಯ ವಿಚಾರಣೆ ನಡೆಸಲಾಗಿದ್ದು, ಆಕೆಯ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗಿದೆ.

Translate »