ಮೈಸೂರು ರಸ್ತೆಗಳ ಗುಂಡಿ ಮುಚ್ಚಲು
ಮೈಸೂರು

ಮೈಸೂರು ರಸ್ತೆಗಳ ಗುಂಡಿ ಮುಚ್ಚಲು

December 21, 2021

ಮೈಸೂರು, ಡಿ. 20(ಆರ್‍ಕೆ)- ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಮೈಸೂರಿನ ರಸ್ತೆಗಳಲ್ಲಿ ಉಂಟಾಗಿರುವ ಗುಂಡಿ ಮುಚ್ಚಲು ಮಹಾನಗರ ಪಾಲಿಕೆಯು ಮುಂದಾಗಿದೆ.

ಗುಂಡಿ ಮುಚ್ಚುವ ಯೋಜನೆಗೆ ಎಲ್ಲಾ 65 ವಾರ್ಡ್‍ಗಳಿಗೆ ತಲಾ 10 ಲಕ್ಷ ರೂ. ಅನುದಾನ ಮಂಜೂರು ಮಾಡಿರುವ ಮೈಸೂರು ಮಹಾನಗರ ಪಾಲಿಕೆಯು, ಇ-ಪ್ರ್ರಕ್ಯೂರ್‍ಮೆಂಟ್ ಪೋರ್ಟಲ್ ಮೂಲಕ ಸುಮಾರು 7 ಕೋಟಿ ರೂ.ಗಳ ಕಾಮಗಾರಿ ಕೈಗೊಳ್ಳಲು ಡಿಸೆಂಬರ್ 15ರಂದು ಟೆಂಡರ್ ಕರೆದಿದೆ. 2022ರ ಜನವರಿ 5 ರಂದು ಸಂಜೆ 5.30 ಗಂಟೆಗೆ ಟೆಂಡರ್ ಸಲ್ಲಿಸಲು ಕಡೇ ದಿನವಾಗಿದ್ದು, ಜನವರಿ 6 ರಂದು ಸಂಜೆ 5.31 ಗಂಟೆ ನಂತರ ಟೆಂಡರ್ ತೆರೆಯಲಾಗುವುದು ಎಂದು ಸೂಪರಿಂಟೆಂಡಿಂಗ್ ಇಂಜಿನಿ ಯರ್ ಮಹೇಶ್ ಅವರು ತಿಳಿಸಿದ್ದಾರೆ.

ಲೋಕೋಪಯೋಗಿ ಇಲಾಖೆಯಲ್ಲಿ ನೋಂದಾಯಿಸಿರುವ ಅರ್ಹ ಸಿವಿಲ್ ಗುತ್ತಿಗೆದಾರರು ಇ-ಪ್ರಕ್ಯೂರ್‍ಮೆಂಟ್ ಪೋರ್ಟಲ್ hಣಣಠಿs://eಠಿಡಿoಛಿ. ಞಚಿಡಿಟಿಚಿಣಚಿಞಚಿ. gov.iಟಿ ಮೂಲಕ ಟೆಂಡರ್ ನಲ್ಲಿ ಭಾಗವಹಿಸಬಹುದು. ಒಂದು ವಾರ್ಡ್‍ಗೆ 10 ಲಕ್ಷ ರೂ.ನಂತೆ ಮೈಸೂರು ನಗರದ ಎಲ್ಲಾ 65 ವಾರ್ಡ್‍ಗಳಿಗೂ 6.5 ಕೋಟಿ ರೂ.ಗಳನ್ನು ರಸ್ತೆಗಳ ಗುಂಡಿ ಮುಚ್ಚಲು ಹಣ ಮಂಜೂರು ಮಾಡಲಾಗಿದೆ.

ಪರಿಶಿಷ್ಟ ಜನಾಂಗದ ಗುತ್ತಿಗೆದಾರರಿಗೆ ಮೀಸಲಿರಿಸಿರುವ 6 ವಾರ್ಡ್‍ಗಳ ಕಾಮಗಾರಿ ಹಾಗೂ ಪರಿಶಿಷ್ಟ ಜಾತಿ ಜನಾಂಗದ ಗುತ್ತಿಗೆದಾರರಿಗೆ ನಿಗದಿಪಡಿಸಿರುವ 12 ವಾರ್ಡ್‍ಗಳ ಕಾಮಗಾರಿಗೆ ತಲಾ 12,500 ರೂ. ಮುಂಗಡ ಠೇವಣಿ(ಇಎಂಡಿ) ಹಣವನ್ನು ಪಾವತಿಸಬೇಕು. ಉಳಿದ ಗುತ್ತಿಗೆದಾರರಿಗೆ ಮೀಸಲಿರಿಸಿರುವ 48 ವಾರ್ಡ್‍ಗಳ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗಳಿಗೆ 25,000 ರೂ. ಇಂಎಂಡಿ ಹಣ ನಿಗದಿಪಡಿಸಲಾಗಿದೆ. 2022ರ ಜನವರಿ 10ರ ನಂತರ ಕೆಲಸ ಆರಂಭಿಸಲು ಕಾರ್ಯಾದೇಶ(Woಡಿಞ ಔಡಿಜeಡಿ) ನೀಡಲಿದ್ದು, 2 ತಿಂಗಳೊಳ ಗಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಟೆಂಡರ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೈಸೂರಿನ ಗಾಂಧಿನಗರ, ಸಾಡೇ ರಸ್ತೆ, ಮಹಮದ್ ಸೇಠ್ ಬ್ಲಾಕ್, ಟಿಪ್ಪು ಸರ್ಕಲ್, ವೀರನಗೆರೆ, ಹೈದರಾಲಿ ರಸ್ತೆ, ಜೈಲು ಕ್ವಾರ್ಟರ್ಸ್ ಮುಖ್ಯ ರಸ್ತೆ, ಹುಡ್ಕೋ ಬಡಾವಣೆ, ಹನುಮಂತನಗರ, ಜೋಡಿ ತೆಂಗಿನಮರ ರಸ್ತೆ, ಸಿದ್ದಿಖಿ ನಗರ ಹಾಗೂ ಸವಿತಾ ಅಂಬೇಡ್ಕರ್ ಕಾಲೋನಿ, ಸೆಂಟರ್ ಮೇರಿಸ್ ರಸ್ತೆ, ಕೆಸರೆ, ಆರ್‍ಎಸ್. ನಾಯ್ಡು ನಗರ, ಸುಭಾಷ್‍ನಗರ, ಉದಯಗಿರಿ ಕೆಇಬಿ ಕಾಲೋನಿ, ಉಮ್ಮರಖಯಾಂ ರಸ್ತೆ, ಆನೆಗುಂದಿ ರಸ್ತೆ, ಗೌಸಿಯಾನಗರ, ಯಾದವಗಿರಿ, ವಿ.ವಿ. ಪುರಂ, ವಿಜಯ ನಗರ, ಕುವೆಂಪುನಗರ, ರಾಮಕೃಷ್ಣನಗರ ರಸ್ತೆಗಳು ಸೇರಿದಂತೆ ಚಾಮರಾಜ, ಕೃಷ್ಣ ರಾಜ, ನರಸಿಂಹರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆಗಳು ಮತ್ತು ಚಾಮುಂಡೇ ಶ್ವರಿ ಕ್ಷೇತ್ರದ ಕೆಲ ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿಗಳನ್ನು
ಜನವರಿ ಮಾಹೆಯಲ್ಲಿ ಆರಂಭಿಸಲಾಗುವುದು ಎಂದು ಸೂಪರಿಂಟೆಂಡಿಂಗ್ ಇಂಜಿನಿಯರ್ ತಿಳಿಸಿದ್ದಾರೆ. ಅಲ್ಲದೆ, ವಾರ್ಡ್ ನಂಬರ್ 40ರ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಮುಂಭಾಗ ಮಳೆ ನೀರು ಚರಂಡಿ ಮತ್ತು ಡೆಕ್ ಸ್ಲ್ಯಾಬ್, 9ನೇ ವಾರ್ಡಿನ ಸುಭಾಷ್Àನಗರ ವಿವಿಧ ರಸ್ತೆಗಳಲ್ಲಿ ಕಲ್ವರ್ಟ್, 27ನೇ ವಾರ್ಡ್‍ನ ಫೋರಂ ಮಾಲ್ ಎದುರಿನ ಓಲ್ಡ್ ಏಜ್ ಹೋಂ ಪಕ್ಕದಲ್ಲಿ ಡೆಕ್ ನಿರ್ಮಾಣ, 47ನೇ ವಾರ್ಡಿನ ಅಪೋಲೋ ಬಿಜಿಎಸ್ ಆಸ್ಪತ್ರೆ ಹಿಂಭಾಗದ ದೊಡ್ಡ ಚರಂಡಿಗೆ ತಡೆಗೋಡೆ ಮತ್ತು 16ನೇ ವಾರ್ಡಿನ ಸುಭಾಷನಗರದಲ್ಲಿನ ಅಂಗವಿಕಲರ ಕಾಲೋನಿ ಯಲ್ಲಿರುವ ಸಮುದಾಯ ಭವನದ ಅಭಿವೃದ್ಧಿಗಾಗಿ ಒಟ್ಟು 93 ಲಕ್ಷ ರೂ. ಅನುದಾನ ಖರ್ಚು ಮಾಡುತ್ತಿದ್ದು, ಕಾಮಗಾರಿ ನಡೆಸಲು ಪಾಲಿಕೆಯು ಟೆಂಡರ್ ಕರೆದಿದೆ. ಈಗಾಗಲೇ ಮೈಸೂರು ನಗರ ಹೃದಯ ಭಾಗದಲ್ಲಿರುವ ಪ್ರಮುಖ ರಸ್ತೆಗಳ ಗುಂಡಿ ಮುಚ್ಚುವ ಕೆಲಸ ಆರಂಭಿಸಲಾಗಿತ್ತಾದರೂ, ಮಳೆ ಸುರಿದ ಕಾರಣ ಸ್ಥಗಿತಗೊಳಿಸಲಾಗಿತ್ತು. ಇದೀಗ ಮಳೆ ನಿಂತು ಚಳಿಗಾಲ ಆರಂಭವಾಗಿರುವುದರಿಂದ ಏಕಕಾಲದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಆರಂಭಿಸಲಾಗುವುದು ಎಂದು ಮಹೇಶ್ ತಿಳಿಸಿದರು.ು

Translate »