ಕನ್ನಡ ವಿರೋಧಿ ಕೃತ್ಯಕ್ಕೆ ಆಕ್ರೋಶ; ವಿವಿಧ  ಸಂಘಟನೆಗಳಿಂದ ಮೈಸೂರಲ್ಲಿ ಪ್ರತ್ಯೇಕ ಪ್ರತಿಭಟನೆ  ಎಂಇಎಸ್, ಶಿವಸೇನೆ ಸಂಘಟನೆಗಳ ನಿಷೇಧಕ್ಕೆ ಒತ್ತಾಯ
ಮೈಸೂರು

ಕನ್ನಡ ವಿರೋಧಿ ಕೃತ್ಯಕ್ಕೆ ಆಕ್ರೋಶ; ವಿವಿಧ ಸಂಘಟನೆಗಳಿಂದ ಮೈಸೂರಲ್ಲಿ ಪ್ರತ್ಯೇಕ ಪ್ರತಿಭಟನೆ ಎಂಇಎಸ್, ಶಿವಸೇನೆ ಸಂಘಟನೆಗಳ ನಿಷೇಧಕ್ಕೆ ಒತ್ತಾಯ

December 21, 2021

ಮೈಸೂರು,ಡಿ.20(ಪಿಎಂ)-ಕನ್ನಡದ ನೆಲದಲ್ಲೇ ಕನ್ನಡ ವಿರೋಧಿ ಕೃತ್ಯದಲ್ಲಿ ತೊಡ ಗಿರುವ ಎಂಇಎಸ್ ಮತ್ತು ಶಿವಸೇನೆ ಸಂಘ ಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ, ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟ ಹಾಗೂ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಭಗ್ನಗೊಳಿಸಿದ ಎಲ್ಲಾ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ವಿವಿಧ ಸಂಘಟನೆಗಳು ನಗರದಲ್ಲಿ ಸೋಮ ವಾರ ಪ್ರತ್ಯೇಕ ಪ್ರತಿಭಟನೆ ನಡೆಸಿದವು.
ಬೆಳಗಾವಿಯಲ್ಲಿ ನಡೆಯುತ್ತಿರುವ ಕನ್ನಡ ವಿರೋಧಿ ಕೃತ್ಯಗಳಿಗೆ ನಾಡಿನಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದು, ಮೈಸೂರಲ್ಲೂ ಕನ್ನಡಪರ ಸಂಘಟನೆಗಳು ಸೇರಿದಂತೆ ನಾನಾ ಸಂಘ ಟನೆಗಳು ಪ್ರತಿಭಟನೆ ನಡೆಸಿ, ಕಿಡಿಕಾರಿದವು.

ಸಮಾನ ಮನಸ್ಕ ಬಳಗ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಧ್ವಂಸ ಹಾಗೂ ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟಿರು ವುದನ್ನು ಖಂಡಿಸಿ ಸಮಾನಮನಸ್ಕ ಬಳಗದ ವತಿಯಿಂದ ಗಾಂಧಿಚೌಕದಲ್ಲಿ ಪ್ರತಿಭಟನೆ ನಡೆಸಲಾಯಿತು.

ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಪಡುವಾರಹಳ್ಳಿ ಎಂ.ರಾಮ ಕೃಷ್ಣ ಮಾತನಾಡಿ, ಕನ್ನಡ ತಾಯಿಯ ತಿಲಕ ನಮ್ಮ ಬೆಳಗಾವಿ. ಅದು ಎಂದೆಂದಿಗೂ ಕನ್ನಡಿಗರದ್ದೇ ಆಗಿರಬೇಕು. ಕನ್ನಡ ಬಾವುಟ ಸುಟ್ಟಿರುವ ಎಂಇಎಸ್ ಸಂಘಟನೆಯನ್ನು ರಾಜ್ಯ ಸರ್ಕಾರ ನಿಷೇಧಿಸಬೇಕು. ಜೊತೆಗೆ ಮಹಾರಾಷ್ಟ್ರದ ಕನ್ನಡಿಗರ ರಕ್ಷಣೆಗೆ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಮುಖಂಡರಾದ ರವಿ ಕುಮಾರ್, ಜೆ.ಯೋಗೇಶ್, ಹೆಚ್.ಹರೀಶ್ ಕುಮಾರ್, ಎಸ್.ಆರ್.ರವಿಕುಮಾರ್, ಕುಮಾರ್ ಗೌಡ, ಪ್ರಶಾಂತ್ (ಶಾಂತಿ), ಗಂಗಣ್ಣ, ಸುರೇಂದ್ರ, ಸಿ.ರೇವಣ್ಣ, ರವಿನಾಯಕ ಮತ್ತಿ ತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮೈಸೂರು ಕನ್ನಡ ವೇದಿಕೆ: ಜಿಲ್ಲಾಧಿ ಕಾರಿಗಳ ಕಚೇರಿಯ ಎದುರು ವೇದಿಕೆಯ ಅಧ್ಯಕ್ಷ ಬಾಲಕೃಷ್ಣ ನೇತೃತ್ವದಲ್ಲಿ ಜಮಾ ಯಿಸಿದ ಪ್ರತಿಭಟನಾಕಾರರು, ದೇಶಪ್ರೇಮಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿ ಸಿದ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದರು. ಅಲ್ಲದೆ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಭವ್ ಠಾಕ್ರೆ ಪ್ರತಿಕೃತಿ ತುಳಿದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ನಾಡಿನಲ್ಲೇ ಆಶ್ರಯ ಪಡೆದು ಕನ್ನಡ ವಿರೋಧಿ ಕೃತ್ಯದಲ್ಲಿ ತೊಡಗಿರುವ ಪುಂಡ ಮರಾಠಿಗರನ್ನು ರಾಜ್ಯದಿಂದ ಗಡಿ ಪಾರು ಮಾಡಬೇಕು. ಇಲ್ಲವಾದರೆ ಇವರಿಂದ ಕನ್ನಡಿಗರು ಮತ್ತು ಮರಾಠಿಗರ ನಡುವಿನ ಸಾಮರಸ್ಯಕ್ಕೆ ಧಕ್ಕೆ ಉಂಟಾಗಲಿದೆ ಎಂದು ಕಿಡಿಕಾರಿದರು. ಮುಖಂಡರಾದ ನಾಲ ಬೀದಿ ರವಿ, ಬೋಗಾದಿ ಸಿದ್ದೇಗೌಡ, ಗುರು ಬಸಪ್ಪ, ಪ್ಯಾಲೆಸ್ ಬಾಬು, ಗೋಪಿ, ರಾಧಾ ಕೃಷ್ಣ, ಸಿದ್ದಪ್ಪ ಮದನ್, ಗೋವಿಂದ ರಾಜು, ಸ್ವಾಮಿ, ಅರವಿಂದ, ಸುನಿಲ್, ನಾಗರಾಜು, ಬೀಡ ಬಾಬು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ: ಜಿಲ್ಲಾಧಿಕಾರಿ ಕಚೇರಿ ಎದುರು ಜಮಾ ಯಿಸಿದ ಸಂಘಟನೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಎಂಇಎಸ್ ಕಾರ್ಯಕರ್ತರು ಕನ್ನಡ ನಾಡಿಗೆ ಅಪ ಮಾನ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಎಂಇಎಸ್ ಸಂಘಟನೆ ನಿಷೇಧಿಸ ಬೇಕು. ಇಲ್ಲವಾದರೆ ರಾಜ್ಯವ್ಯಾಪಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಪ್ರಸನ್ನಕುಮಾರ್, ಮುಖಂಡರಾದ ಜಗದೀಶ್, ಶಿವಪ್ಪ, ಗಂಗಾಧರ್, ರವಿ, ಸಚ್ಚಿನ್, ಮಲ್ಲಿಕಾರ್ಜುನ, ನಜೀರ್, ಸಂತೋಷ್ ಮತ್ತಿತರರು ಪಾಲ್ಗೊಂಡಿದ್ದರು.
ಭೀಮ ಜನಜಾಗೃತಿ ಮಹಾಸಭಾ: ಜಿಲ್ಲಾ ಧಿಕಾರಿ ಕಚೇರಿ ಎದುರು ಜಮಾಯಿಸಿದ ಭೀಮ ಜನಜಾಗೃತಿ ಮಹಾಸಭಾದ ಮೈಸೂರು ಜಿಲ್ಲಾ ಸಮಿತಿ ಪದಾಧಿಕಾರಿಗಳು, ಕಾರ್ಯ ಕರ್ತರು, ಎಂಇಎಸ್ ಮತ್ತು ಶಿವಸೇನೆ ಸಂಘಟನೆ ನಿಷೇಧಕ್ಕೆ ಒತ್ತಾಯಿಸಿದರು. ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿ ಸಿದ ಹಾಗೂ ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟ ದುಷ್ಕಿರ್ಮಿಗಳನ್ನು ಬಂಧಿಸಿ, ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ದರು. ಜಿಲ್ಲಾಧ್ಯಕ್ಷ ಶಂಕರ್, ಕಾರ್ಯಾಧ್ಯಕ್ಷ ವಿನೋದ್ ಪ್ರಸಾದ್, ಮುಖಂಡರಾದ ಸಿದ್ದರಾಜು, ಸ್ವಾಮಿ, ಮಣಿಕಂಠ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ು

Translate »