ಎಲ್ಲರೊಳಗೊಂದಾಗು ಮಂಕುತಿಮ್ಮಮದುಮಲೈನಲ್ಲಿ ಸೆರೆಸಿಕ್ಕ ಟಿ-23 ಹುಲಿ ಚೇತರಿಕೆ
ಮೈಸೂರು

ಎಲ್ಲರೊಳಗೊಂದಾಗು ಮಂಕುತಿಮ್ಮಮದುಮಲೈನಲ್ಲಿ ಸೆರೆಸಿಕ್ಕ ಟಿ-23 ಹುಲಿ ಚೇತರಿಕೆ

December 21, 2021

ಮೈಸೂರು,ಡಿ.20(ಎಂಟಿವೈ)- ತಮಿಳುನಾಡಿನ ಮದುಮಲೈ ಹುಲಿ ಸಂರಕ್ಷಿತ ಪ್ರದೇಶದ ಮಸಣಗುಡಿ ಕಾಡಂಚಿನ ಗ್ರಾಮದಲ್ಲಿ ನಾಲ್ವರನ್ನು ಬಲಿ ಪಡೆದು, 40ಕ್ಕೂ ಹೆಚ್ಚು ಜಾನುವಾರುಗಳನ್ನು ಕೊಂದು ಹಾಕಿದ್ದ ಟಿ-23 ಹುಲಿ ಮೈಸೂರು ಮೃಗಾಲಯದ ಪಶುವೈದ್ಯರ ತಂಡದ ಶುಶ್ರೂಷೆಯಿಂದ ಚೇತರಿಸಿಕೊಳ್ಳುತ್ತಿದೆ.

ಮದುಮಲೈ ಹುಲಿ ಸಂರಕ್ಷಿತ ಪ್ರದೇಶದ ಮಸಣಗುಡಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸೆಪ್ಟಂಬರ್ ಮತ್ತು ಅಕ್ಟೋಬರ್ ಮೊದಲ ವಾರದಲ್ಲಿ 40 ಜಾನುವಾರು ಗಳನ್ನು ಕೊಂದು, ನಾಲ್ವರನ್ನು ಬಲಿ ಪಡೆದಿತ್ತು. ಸ್ಥಳೀಯರ ಆಕ್ರೋಶದ ಹಿನ್ನೆಲೆಯಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಆತಂಕವುಂಟು ಮಾಡಿದ್ದ ಟಿ-23 ಹುಲಿಗೆ ಗುಂಡಿಕ್ಕಿ ಹತ್ಯೆ ಮಾಡಲು ನಿಧರ್Àರಿಸಿತ್ತು. ಆದರೆ ವನ್ಯಪ್ರೇಮಿಗಳು ಚೆನ್ನೈನ ಹೈಕೋರ್ಟ್ ಮೊರೆ ಹೋಗಿ ಕೊಲ್ಲುವ ಆದೇಶಕ್ಕೆ ತಡೆ ತಂದಿದ್ದರು. ಸತತ 30 ದಿನಗಳ ಕಾರ್ಯಾಚರಣೆಯ ಫಲವಾಗಿ ಅ.14ರಂದು ಮಧ್ಯಾಹ್ನ ಟಿ-23 ಹುಲಿಯನ್ನು ಅರವಳಿಕೆ ಮದ್ದು ನೀಡಿ, ಜೀವಂತವಾಗಿ ಸೆರೆ ಹಿಡಿಯಲಾಗಿತ್ತು.

ಗಂಭೀರವಾಗಿ ಗಾಯಗೊಂಡಿತ್ತು: ಸರಹದ್ದು ಕಾದಾಟ ದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸುಮಾರು 10 ವರ್ಷದ ಗಂಡು ಹುಲಿ ಬೇಟೆಯಾಡಲು ಸಾಧ್ಯವಾಗದ ಕಾರಣ ಬೈಕ್ ಸವಾರರು ಹಾಗೂ ದನಗಾಹಿಗಳ ಮೇಲೆ ಎರಗುತ್ತಿತ್ತು. ಅದನ್ನು ಸೆರೆಹಿಡಿಯಲು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಪತ್ತೆದಾರಿ ಶ್ವಾನ ರಾಣಾ ಹಾಗೂ ಪಾಲಕ ಸುರೇಶ್ ಕಲ್ಕಕರ್ ಮಗೆ ಅವರನ್ನು ಹುಲಿ ಪತ್ತೆ ಕಾರ್ಯಾ ಚರಣೆಗೆ ಬಳಸಿಕೊಳ್ಳಲಾಗಿತ್ತು. ಅ.14ರಂದು ಸಂಜೆ ಹುಲಿಗೆ ಅರವಳಿಕೆ ಮದ್ದು ನೀಡಿ ಸೆರೆ ಹಿಡಿಯಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಹುಲಿಗೆ ತುರ್ತಾಗಿ ಚಿಕಿತ್ಸೆ ಕೊಡಿಸುವ ಅಗತ್ಯವಿತ್ತು. ಚೆನ್ನೈನ ವಂಡಲೂರು ಮೃಗಾಲಯಕ್ಕೆ ಕೊಂಡೊಯ್ಯಲು 7 ಗಂಟೆ ಅವಧಿ ಬೇಕಾ ಗುವುದನ್ನು ಮನಗಂಡು ಹಿರಿಯ ಅಧಿಕಾರಿಗಳು ಮೈಸೂರು ಮೃಗಾಲಯಕ್ಕೆ ಕರೆದೊಯ್ಯಲು ನಿರ್ಧರಿಸಿದ್ದರು. ಕಳೆದ ರಾತ್ರಿ 11.30ಕ್ಕೆ ಕೂರ್ಗಳ್ಳಿಯಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ತಮಿಳುನಾಡಿದ 10 ಅಧಿಕಾರಿಗಳ ತಂಡ ಗಾಯಗೊಂಡಿದ್ದ ಹುಲಿಯನ್ನು ತಂದು ಬಿಟ್ಟಿದ್ದರು.

ಸುಧಾರಿಸಿದ ಆರೋಗ್ಯ: ಕೂರ್ಗಳ್ಳಿಯಲ್ಲಿರುವ ಮೃಗಾ ಲಯದ ಪುನರ್ವಸತಿ ಕೇಂದ್ರದಲ್ಲಿ ತಮಿಳುನಾಡಿನಲ್ಲಿ ಸೆರೆ ಹಿಡಿದ ಹುಲಿಯನ್ನಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ 36 ದಿನದಿಂದ ಚಿಕಿತ್ಸೆ ನೀಡಲಾಗುತ್ತಿರುವುದರಿಂದ ಟಿ-23 ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ಇದೀಗ ಅದು ಕೊಠಡಿಯಲ್ಲಿ ಓಡಾಡುವಷ್ಟು ಸುಧಾರಿಸಿದೆ. ಮಂಗಳ ವಾರ ಹೊರತುಪಡಿಸಿ ಈ ಹುಲಿಗೆ ಪ್ರತಿದಿನ 16 ಕೆ.ಜಿ ಮಾಂಸ ನೀಡಲಾಗುತ್ತಿದೆ. ಆದರೂ ಕಾದಾಟದಲ್ಲಿ ಆಗಿರುವ ಗಾಯ ಪೂರ್ಣ ಪ್ರಮಾಣದಲ್ಲಿ ಗುಣವಾಗಿಲ್ಲ. ಈ ಹಿನ್ನೆಲೆಯಲ್ಲಿ ಚಿಕಿತ್ಸೆ ಹಾಗೂ ಆರೈಕೆ ಮಾಡಲಾಗುತ್ತಿದೆ.

ತಮಿಳುನಾಡಲ್ಲಿ ವಿಡಿಯೋ ರಿಲೀಸ್: ಮಸಣಗುಡಿಯಲ್ಲಿ ಸೆರೆ ಹಿಡಿದ ಹುಲಿ ಟಿ-23ಯನ್ನು ಮೈಸೂರು ಮೃಗಾಲಯಕ್ಕೆ ತಂದಿದ್ದಕ್ಕೆ ತಮಿಳುನಾಡಿನ ವನ್ಯಪ್ರಿಯರು ಆಕ್ಷೇಪ ವ್ಯಕ್ತ ಪಡಿಸಿದ್ದರು. ಅಲ್ಲದೆ, ಮೈಸೂರು ಮೃಗಾಲಯದಿಂದ ಹುಲಿಯನ್ನು ಹಿಂಪಡೆದು ಚೆನ್ನೈ ಮೃಗಾಲಯಕ್ಕೆ ತರುವಂತೆ ಅಭಿಯಾನ ನಡೆಸಿದ್ದರು. ಆದರೆ, ಅ.14ರ ಮಧ್ಯರಾತ್ರಿಯಲ್ಲಿ ಮೈಸೂರಿಗೆ ಹುಲಿ ತಂದಿದ್ದ ಬೋನ್ ಅನ್ನು ವಾಪಸ್ಸು ಪಡೆದುಕೊಳ್ಳಲು ಮದುಮಲೈ ಅರಣ್ಯ ಸಿಬ್ಬಂದಿಗಳ ತಂಡ ಭಾನುವಾರ(ಡಿ.19) ಮೈಸೂರಿಗೆ ಬಂದಿತ್ತು. ಈ ವೇಳೆ ಪುನರ್ವಸತಿ ಕೇಂದ್ರದಲ್ಲಿದ್ದ ಟಿ-23 ಹುಲಿಯ ಆರೋಗ್ಯ ಸ್ಥಿತಿ, ಮೃಗಾಲಯದ ಪಶು ವೈದ್ಯರು ನೀಡುವ ಚಿಕಿತ್ಸೆ, ಸಿಬ್ಬಂದಿ ಗಳ ಆರೈಕೆಯನ್ನು ಕಂಡು ನಿಬ್ಬೆರಗಾಗಿದ್ದಾರೆ. ಕೊಠಡಿ ಯೊಳಗೆ ಇದ್ದ ಹುಲಿ ಮಾಂಸವನ್ನು ತಿನ್ನುವ, ಹಾಗೂ ಓಡಾಡುವುದನ್ನು ಮರೆಯಲ್ಲಿ ನಿಂತು ಸೂಕ್ಷ್ಮವಾಗಿ ಗಮನಿಸಿ ದ್ದಾರೆ. ಸಿಬ್ಬಂದಿಗಳು ಮರೆಯಲ್ಲಿ ನಿಂತಿರುವುದನ್ನು ಗಮನಿ ಸಿದ ಹುಲಿ ದೊಡ್ಡ ಪ್ರಮಾಣದಲ್ಲಿ ಘರ್ಜಿಸಿ ಹೆದರಿಸುವ ಪ್ರಯತ್ನವನ್ನೂ ಮಾಡಿದೆ. ಹುಲಿಗೆ ಇನ್ನಷ್ಟು ದಿನ ಚಿಕಿತ್ಸೆ ಹಾಗೂ ಆರೈಕೆ ಅಗತ್ಯವಾಗಿರುವುದರಿಂದ ಮದುಮಲೈ ಅರಣ್ಯ ಸಿಬ್ಬಂದಿ ಹುಲಿಯ ವಿಡಿಯೋ ಚಿತ್ರೀಕರಣದ ತುಣು ಕೊಂದನ್ನು ತಮಿಳುನಾಡಲ್ಲಿ ಬಿಡುಗಡೆ ಮಾಡಿ, ಹುಲಿಯನ್ನು ವಾಪಸ್ಸು ಕರೆತರುವಂತೆ ಅಭಿಯಾನ ಮಾಡುತ್ತಿರುವವರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ಯಾವುದೇ ಕಾರಣಕ್ಕೂ ಹುಲಿಯನ್ನು ಮೈಸೂರು ಮೃಗಾಲಯದಿಂದ ವಾಪಸ್ಸು ತರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Translate »