ನಕಲಿ ದಾಖಲೆ ಮೂಲಕ ಭೂ ಒಡೆತನ
News, ಮೈಸೂರು

ನಕಲಿ ದಾಖಲೆ ಮೂಲಕ ಭೂ ಒಡೆತನ

December 18, 2021

ಮಂಡ್ಯದಲ್ಲಿ ಈಗಾಗಲೇ ಒಂದು ಪ್ರಕರಣ ಬಯಲಿಗೆ

ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಪ್ರಕಟ

ರಾಜಕೀಯ ಒತ್ತಡ, ನಕಲಿ ದಾಖಲೆ ಸೃಷ್ಟಿಸಿ ಭೂಮಿ ಉಳ್ಳವರೇ ಭೂಮಿ ಪಡೆದಿದ್ದಾರೆ

ಕ್ರಿಮಿನಲ್ ಕೇಸ್ ದಾಖಲಿಸಲು ಸರ್ಕಾರ ನಿರ್ಧಾರ

೧೯೯೧ರಿಂದ ೫೫ ಸಾವಿರ ಎಕರೆ ಭೂಮಿ ೪೯ ಸಾವಿರ ಫಲಾನುಭವಿಗಳಿಗೆ ಹಂಚಿಕೆ: ಇದರ ಮೌಲ್ಯ ೧೩೬೦ ಕೋಟಿ

ಬೆಂಗಳೂರು, ಡಿ. ೧೭(ಕೆಎಂಶಿ)-ದಲಿತ ಸಮುದಾಯದ ಭೂ ಒಡೆತನ ಯೋಜನೆ ಅಡಿ ನಕಲಿ ದಾಖಲೆ ಸಲ್ಲಿಸಿ ಭೂಮಿ ಪಡೆದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖ ಲಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ.

ಪ್ರಶ್ನೋತ್ತರ ವೇಳೆಯಲ್ಲಿ ವೈ.ಎ.ನಾರಾಯಸ್ವಾಮಿ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಬರುವ ನಿಗಮಗಳಲ್ಲಿ ಭೂ ಒಡೆತನ ಯೋಜನೆಅಡಿ ಕೆಲವರು ರಾಜಕೀಯ ಒತ್ತಡ ಹೇರಿ, ನಕಲಿ ದಾಖಲೆ ಸೃಷ್ಟಿಸಿ ಉಳ್ಳವರೇ ಭೂಮಿ ಪಡೆದಿರುವ ಆರೋಪ ಕೇಳಿಬಂದಿದೆ. ಈ ಸಂಬAಧ ದಾಖಲೆ ಪರಿಶೀಲನೆ ನಡೆಸಿ ಕ್ರಿಮಿನಲ್ ಮೊಕದ್ದಮೆ ಹೂಡಲಾ ಗುವುದು ಎಂದರು. ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ಇಲಾಖೆಯಡಿ ಕಾರ್ಯಾ ಚರಣೆ ನಡೆಸಿ ಒಂದು ಪ್ರಕರಣ ಭೇದಿಸಿದ್ದು, ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದ ಅವರು, ೧೯೯೧ರಿಂದ ಇಪ್ಪತ್ತು ವರ್ಷಗಳಲ್ಲಿ ಬರೋಬ್ಬರಿ ೫೫ ಸಾವಿರಕ್ಕೂ ಅಧಿಕ ಎಕರೆ ಭೂಮಿಯನ್ನು ೪೯ ಸಾವಿರ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದ್ದು, ಇದರ ಮೊತ್ತ ೧,೩೬೦ ಕೋಟಿಯಾಗಿದೆ ಎಂದರು. ಅಲ್ಲದೆ, ಎರಡು ತಿಂಗಳಿ ನಲ್ಲಿ ಸಭೆ ನಡೆಸಿ ಸಮೀಕ್ಷೆ ನಡೆಸಲು ಸೂಚಿಸಿದ್ದೇನೆ. ರಾಯಚೂರು ೫೩, ಮಂಡ್ಯ ಜಿಲ್ಲೆಯ ಎರಡು ಪ್ರಕರಣಗಳಲ್ಲಿ ಭೂ ಮಂಜೂರಾಗಿದ್ದರೂ ಫಲಾನುಭವಿಗಳಿಗೆ ಭೂಮಿ ಸ್ವಾಧೀನ ಸಿಕ್ಕಿಲ್ಲ. ಮಾಲೀಕರ ಕೈನಲ್ಲೇ ಭೂಮಿ ಇತ್ತು ಅಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿಗೋವಿAದರಾಜ ಅವರ ಮತ್ತೊಂದು ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು ರಾಜ್ಯದಲ್ಲಿ ಭಿಕ್ಷಾಟನೆ ದಂಧೆಗೆ ಕಡಿವಾಣ ಹಾಕುವ ಸಲುವಾಗಿ ಪ್ರತಿ ಜಿಲ್ಲೆಯಲ್ಲೂ ಪುನರ್ ವಸತಿ ಕೇಂದ್ರ ಸ್ಥಾಪಿಸಲಾಗುವುದೆಂದರು. ಅಧಿಕಾರಿಗಳೊಟ್ಟಿಗೆ ಚರ್ಚಿಸಿ, ಭಿಕ್ಷಾಟನೆ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ೧೮ ಜಿಲ್ಲೆಗಳಲ್ಲಿ ಪುನರ್‌ವಸತಿ ಕೇಂದ್ರಗಳಿದ್ದು, ಉಳಿದ ಹನ್ನೆರಡು ಜಿಲ್ಲೆಯಲ್ಲೂ ವಸತಿ ಕೇಂದ್ರ ಸ್ಥಾಪಿಸಿ, ಭಿಕ್ಷಾಟನೆ ನಿಯಂತ್ರಣ ಮಾಡಲಾಗುವುದು ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಬಿ.ಕೆ. ಹರಿಪ್ರಸಾದ್ ಅವರ ಮತ್ತೊಂದು ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು ದೇವರಾಜ ಅರಸು ಸಂಶೋಧನಾ ಸಂಸ್ಥೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವ ನಿರ್ಧಾರ ನಮ್ಮ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು. ನಾನು ಊರಿನಲ್ಲಿ ಎರಡು ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದೇನೆ ಎಂದರೆ, ಅದಕ್ಕೆ ದೇವರಾಜು ಅರಸು ಅವರೇ ನೇರ ಕಾರಣ. ಹಾಗಾಗಿ, ಅವರ ಮೇಲೆ ಅಪಾರ ಗೌರವಿದೆ. ಅವರ ಹೆಸರಿನ ಸಂಸ್ಥೆಗಳ ಅಭಿವೃದ್ಧಿ ಜೊತೆಗೆ, ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸಲಾಗುವುದು ಎಂದು ತಿಳಿಸಿದರು. ಇನ್ನೂ, ಹಲವಾರು ಜಾತಿಗಳನ್ನು ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡಬೇಕೆಂದು ಕೆಲವರು ಪ್ರತಿಭಟನೆ ನಡೆಸಿದ್ದಾರೆ. ಆದರೆ, ಸರ್ಕಾರ ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ಸಂಬAಧ ಚರ್ಚೆ ನಡೆಸಲಿದೆ ಎಂದೂ ಸಚಿವರು ಹೇಳಿದರು.

Translate »