ಪೊಲೀಸ್, ಆಹಾರ ಇಲಾಖೆ ಅಧಿಕಾರಿಗಳಿಂದ ಪ್ರತ್ಯೇಕ ತನಿಖೆ
News, ಮೈಸೂರು

ಪೊಲೀಸ್, ಆಹಾರ ಇಲಾಖೆ ಅಧಿಕಾರಿಗಳಿಂದ ಪ್ರತ್ಯೇಕ ತನಿಖೆ

December 18, 2021

ಮೈಸೂರು, ಡಿ. ೧೭(ಆರ್‌ಕೆ)-ಕರ್ನಾಟಕ ಹಾಲು ಒಕ್ಕೂಟದ ‘ನಂದಿನಿ’ ಹೆಸರಲ್ಲಿ ನಕಲಿ ತುಪ್ಪ ತಯಾರಿ ಸುತ್ತಿದ್ದ ಪ್ರಕರಣ ಸಂಬAಧ ಪೊಲೀಸ್ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ.

ಮೈಮುಲ್ ಅಧಿಕಾರಿಗಳು ನೀಡಿರುವ ದೂರಿನನ್ವಯ ಪ್ರಮುಖ ಆರೋಪಿಗಳೆನ್ನಲಾದ ತಮಿಳುನಾಡು ಮೂಲದ ಮುರುಗೇಶ, ಆತನ ಪತ್ನಿ ಅಶ್ವಿನಿ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಶಶಿಕುಮಾರ್ ನೇತೃತ್ವದ ತನಿಖಾ ತಂಡವು ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಗುರುವಾರ ಬೆಳಗ್ಗೆ ಸಂಘಟನೆಯೊAದರ ಸದಸ್ಯರು ಹೊಸಹುಂಡಿ ಗ್ರಾಮದ ಬಳಿಯ ನಕಲಿ ತುಪ್ಪ ತಯಾರಿಕಾ ಗೋಡೌನ್ ಮೇಲೆ ದಾಳಿ ಮಾಡಿದಾಗ ಪ್ರಮುಖ ಆರೋಪಿ ಮುರು ಗೇಶ ಮತ್ತು ಪತ್ನಿ ಅಶ್ವಿನಿ ಸ್ಥಳದಲ್ಲೇ ಇದ್ದರೂ, ಅವರೇ ಅದರ ರೂವಾರಿಗಳೆಂದು ತಿಳಿಯದ ಕಾರಣ, ಅವರನ್ನು ಬಂಧಿಸಲು ಸಾಧ್ಯವಾಗಿಲ್ಲ ಎಂಬುದು ತಡವಾಗಿ ತಿಳಿ ಯಿತು ಎಂದು ಪ್ರಕರಣದ ತನಿಖಾಧಿಕಾರಿ ಶಶಿಕುಮಾರ್ ತಿಳಿಸಿದ್ದಾರೆ. ಸಂಘಟನೆಯವರನ್ನು ನೋಡುತ್ತಿದ್ದಂತೆಯೇ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ನಾವು ಗುರುವಾರ ರಾತ್ರಿಯಿಡೀ ಅವರು ವಾಸ ಮಾಡುತ್ತಿದ್ದರೆನ್ನಲಾದ ಮೈಸೂರಿನ ಶ್ರೀರಾಂಪುರದ ಭ್ರಮರಾಂಭ ಕಲ್ಯಾಣ ಮಂಟಪದ ಬಳಿಯ ಮನೆ ಹಾಗೂ ಮಹದೇವಪುರ ಬಳಿಯ ಮನೆಯ ಶೋಧ ಕಾರ್ಯ ನಡೆಸಿದೆವು. ಆದರೆ ಮುರುಗೇಶ ಕುಟುಂಬ ವಾಸಕ್ಕೆಂದು ತೆಗೆದು ಕೊಂಡಿರುವ ಬಾಡಿಗೆ ಮನೆಗಳಲ್ಲಿ ಇರಲಿಲ್ಲ. ವಾರಕ್ಕೊಮ್ಮೆ ಬಂದು ಹೋಗುತ್ತಿದ್ದರಷ್ಟೆ ಎಂದು ನೆರೆಹೊರೆಯವರು ಹೇಳಿದರು ಎಂದು ಇನ್ಸ್ಪೆಕ್ಟರ್ ತಿಳಿಸಿದರು. ಈಗಾಗಲೇ ಕಲೆ ಹಾಕಿರುವ ಪ್ರಾಥಮಿಕ ಮಾಹಿತಿ ಆಧರಿಸಿ ಶೋಧ ಕಾರ್ಯ ಚುರುಕುಗೊಳಿಸಿದ್ದೇವೆ. ಅವರು ಸಿಕ್ಕಿದ ನಂತರವಷ್ಟೇ ನಕಲಿ ತುಪ್ಪ ತಯಾರಿಸುವುದರ ಹಿಂದೆ ಯರ‍್ಯಾರ ಕೈವಾಡವಿತ್ತು? ತುಪ್ಪವನ್ನು ಯರ‍್ಯಾರಿಗೆ ಮಾರಾಟ ಮಾಡುತ್ತಿದ್ದರು? ಇನ್ನೂ ಎಲ್ಲೆಲ್ಲಿ ಇದೇ ರೀತಿಯ ಗೋದಾಮನ್ನು ಮಾಡಿದ್ದಾರೆ ಎಂಬಿತ್ಯಾದಿ ಮಾಹಿತಿ ತಿಳಿಯುತ್ತದೆ ಎಂದು ಅವರು ತಿಳಿಸಿದರು. ಮತ್ತೊಂದೆಡೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರ ಮಾರ್ಗದರ್ಶನದಲ್ಲಿ ನಾಲ್ವರು ಅಸಿಸ್ಟೆಂಟ್ ಡೈರೆಕ್ಟರ್‌ಗಳ ನ್ನೊಳಗೊಂಡ ಅಧಿಕಾರಿಗಳು ಪ್ರತ್ಯೇಕ ತನಿಖೆ ನಡೆಸುತ್ತಿದ್ದು, ತುಪ್ಪ ತಯಾರಿಕೆಗೆ ಬೇಕಾದ ಪದಾರ್ಥಗಳು, ಉಪಕರಣಗಳು, ಪರಿಕರಗಳನ್ನು ಎಲ್ಲಿಂದ ಖರೀದಿಸಲಾಗಿದೆ, ತಯಾರಿಸಿದ ನಕಲಿ ತುಪ್ಪ ಎಲ್ಲಿಗೆ ಸಪ್ಲೆöÊ ಆಗುತ್ತಿತ್ತು, ಅದು ಬಳಸಲು ಯೋಗ್ಯವಾಗಿ ದೆಯೇ ಎಂಬುದರ ಬಗ್ಗೆ ಅವರು ತನಿಖೆ ನಡೆಸುತ್ತಿದ್ದಾರೆ. ಒಟ್ಟಾರೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಮುನ್ನವೇ ನಕಲಿ ತುಪ್ಪ ತಯಾರಿಕಾ ಘಟಕದ ಹಿಂದೆ ಯರ‍್ಯಾರಿದ್ದಾರೆ, ಅದನ್ನು ಎಲ್ಲೆಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂಬಿತ್ಯಾದಿ ವಿಷಯಗಳು ಬೆಳಕಿಗೆ ಬರಲಿದೆ.

Translate »