ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪರಿಗೆ     ಬೆಂಬಲ; ಮೈಸೂರು ರಕ್ಷಣಾ ವೇದಿಕೆ ನಿರ್ಣಯ
ಮೈಸೂರು

ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪರಿಗೆ ಬೆಂಬಲ; ಮೈಸೂರು ರಕ್ಷಣಾ ವೇದಿಕೆ ನಿರ್ಣಯ

December 19, 2021

ಮೈಸೂರು,ಡಿ.18(ಪಿಎಂ)- ಮೈಸೂರು ರಕ್ಷಣಾ ವೇದಿಕೆ, ಕರ್ನಾಟಕ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರನ್ನು ಬೆಂಬ ಲಿಸುವ ನಿರ್ಣಯ ಕೈಗೊಂಡಿದೆ.

ಬಹುರೂಪಿ ರಾಷ್ಟ್ರೀಯ ನಾಟ ಕೋತ್ಸವದ ಅತಿಥಿಗಳ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿ, ಪ್ರತಿಭಟನೆ ಮೂಲಕ ಸದರಿ ನಾಟಕೋತ್ಸವಕ್ಕೆ ತಡೆಯೊಡ್ಡುವ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಕಲಾವಿದರು, ರಂಗಾಯಣಕ್ಕೆ ರಕ್ಷಣೆ ನೀಡುವಂತೆ ಅಡ್ಡಂಡ ಕಾರ್ಯಪ್ಪ, ಪೊಲೀಸರಿಗೆ ದೂರು ಸಹ ನೀಡಿದ್ದರು. ಈ ಸಂಬಂಧ ಮೈಸೂರಿನ ಜಲ ದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ವೇದಿಕೆ ವತಿಯಿಂದ ಏರ್ಪಡಿಸಿದ್ದ `ರಂಗಾಯಣ ಕೇವಲ ಎಡಪಂಥೀ ಯರಿಗೆ ಸೀಮಿತವೇ? ಕುರಿತ ಚರ್ಚಾ ಕಾರ್ಯಕ್ರಮದಲ್ಲಿ ಅಂತಿಮವಾಗಿ ಅಡ್ಡಂಡ ಕಾರ್ಯಪ್ಪ ನವರಿಗೆ ಸಂಪೂರ್ಣ ಬೆಂಬಲ ನೀಡಲು ನಿರ್ಣಯಿಸಲಾಯಿತು.

ಇದಲ್ಲದೆ, ಪತ್ರಿಕಾ ಧರ್ಮ ಮರೆತು ವಿಕಾರ ವಿಚಾರಗಳನ್ನು ಪ್ರಚುರಪಡಿಸಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಪತ್ರಿಕೆಗಳನ್ನು ಬಹಿಷ್ಕರಿಸುವ ಅಭಿ ಯಾನ ಕೈಗೊಳ್ಳುವುದು, ರಂಗಾಯಣದ ಈ ಹಿಂದಿನ ನಿರ್ದೇಶಕರ ಎಲ್ಲ ಖರ್ಚು-ವೆಚ್ಚ ಹಾಗೂ ಅನುದಾನ ದುರ್ಬಳಕೆ ಆರೋಪದ ಬಗ್ಗೆ ತನಿಖೆಗೆ ಸರ್ಕಾರವನ್ನು ಒತ್ತಾಯಿಸುವುದು ಮತ್ತು ರಂಗಾಯಣದಲ್ಲಿ ಎಡಪಂಥೀ ಯರ ದುರ್ನಡತೆ ವಿರುದ್ಧ ಹೋರಾಟ ನಡೆಸುವ ನಿರ್ಣಯಗಳನ್ನು ಕೈಗೊಳ್ಳ ಲಾಯಿತು. ಮೊದಲಿಗೆ ಮಾತನಾಡಿದ ಪಾಲಿಕೆ ಮಾಜಿ ಸದಸ್ಯರೂ ಆದ ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್, ನಮ್ಮ ದೇಶದ ಮೌಲ್ಯಗಳನ್ನು ಅಲ್ಲ ಗಳೆಯುವ ಕೆಲಸ ಮೊದಲ ಪ್ರಧಾನಿ ನೆಹರು ಕಾಲದಿಂದಲೇ ಆರಂಭ ವಾಯಿತು. ನೆಹರು ಎಡಪಂಥೀಯ ಚಿಂತಕ ರನ್ನೇ ತಮ್ಮ ಸಲಹೆಗಾರರಾಗಿ ನೇಮಕ ಮಾಡಿಕೊಳ್ಳುತ್ತಿದ್ದರು. ನಂತರದಲ್ಲಿ ಪ್ರಧಾನಿಯಾದ ಇಂದಿರಾ ಗಾಂಧಿಯೂ ಅದನ್ನೇ ಮುಂದುವರೆಸಿದರು. ಇದರಿಂದ ವಿಶ್ವವಿದ್ಯಾನಿಲಯಗಳೂ ಸೇರಿದಂತೆ ಬೇರೆ ಬೇರೇ ಕ್ಷೇತ್ರಗಳಲ್ಲಿ ಎಡಪಂಥೀಯರು ಎನ್ನಿಸಿಕೊಂಡವರಿಗೆ ಸಕಲ ಸೌಲಭ್ಯ ಲಭ್ಯವಾಯಿತು ಎಂದು ತಿಳಿಸಿದರು.

ಶೇ.70ಕ್ಕೂ ಹೆಚ್ಚು ಎಡಪಂಥೀಯರಿಗೆ ಪ್ರತಿಷ್ಠಿತ ಪ್ರಶಸ್ತಿ-ಪುರಸ್ಕಾರ ಲಭ್ಯವಾ ಗುತ್ತಿದ್ದವು. ಆದರೆ ಈಗ ಎಡಪಂಥೀಯ ರಿಗೆ ಅಭದ್ರತೆ ಕಾಡುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಮೈಸೂರು ಮಾತ್ರವಲ್ಲದೆ, ದೇಶಾದ್ಯಂತ ಸಣ್ಣಪುಟ್ಟ ವಿಚಾರಕ್ಕೆ ಎಡಪಂಥೀಯರ ವಿರೋಧ ಶುರುವಾಗಿದೆ ಎಂದರು.

ಸಾಮಾಜಿಕ ಚಿಂತಕರೂ ಆದ ಬಿಜೆಪಿ ಮುಖಂಡ ಎಂ.ಎ.ಮೋಹನ್ ಮಾತ ನಾಡಿ, ಕನ್ನಡ ಶ್ರೀಮಂತಗೊಳಿಸುವ ಕೆಲಸ ರಂಗಾಯಣದಲ್ಲಿ ಆಗಬೇಕಿದೆ. ಕೇವಲ 40 ವರ್ಷ ಆಡಳಿತ ನಡೆಸಿದ ಟಿಪ್ಪುವಿ ನಿಂದ ಕನ್ನಡದಲ್ಲಿ ಸೇರಿದ ಅನ್ಯ ಭಾಷೆ ಪದಗಳನ್ನು ತೆಗೆಯುವಲ್ಲಿ ನಾವು ಇಂದಿಗೂ ವಿಫಲವಾಗಿದ್ದೇವೆ. ಕೇಂದ್ರ ದಲ್ಲಿ ಅಧಿಕಾರ ನಡೆಸುತ್ತಿರುವ ನಮಗೆ ರಂಗಾಯಣ ಸರಿದಾರಿಗೆ ತರುವುದು ಕಷ್ಟವಲ್ಲ ಎಂದು ಹೇಳಿದರು.
ರಂಗಭೂಮಿ ಕಲಾವಿದ ಅಜಿತ್ ಮಾತನಾಡಿ, ಬಹುಜನರು ಪ್ರೀತಿಸು ವುದನ್ನು ವಿರೋಧಿಸುವುದೇ ಎಡಪಂಥೀ ಯರ ನಿಜವಾದ ಸಿದ್ಧಾಂತ. ಮುಂದಿನ ಸಭೆಯನ್ನು ಅಲ್ಲಿಯೇ ಮಾಡಬೇಕು. ಈ ಹಿಂದೆ ರಂಗಾಯಣದಲ್ಲಿ ನಕ್ಸಲ್ ಸಭೆ ಸಹ ನಡೆದಿತ್ತು. ಇದೀಗ ಕಾರ್ಯಪ್ಪನ ವರು ಬಂದ ಮೇಲೆ ಇಂತಹ ಚಟುವಟಿಕೆ ಗಳಿಗೆ ತಡೆಯೊಡ್ಡಿದ್ದಾರೆ ಎಂದರು.

ಮುಖಂಡ ಜಯಸಿಂಹ ಮಾತನಾಡಿ, ಗಾಂಧಿಯನ್ನು ದ್ವೇಷಿಸಿ ಎಂದು ಆರ್‍ಎಸ್‍ಎಸ್‍ನಲ್ಲಿಯಾಗಲಿ, ನಮ್ಮ ಮನೆಯಲ್ಲಿಯಾಗಲೀ ಹೇಳಿಕೊಟ್ಟಿಲ್ಲ. ಎಡಪಂಥೀಯರು ಗಾಂಧಿ ವರ್ಸಸ್ ಗಾಂಧಿ ನಾಟಕದ ಮೂಲಕ ಗಾಂಧಿ ವಿರೋಧಿಸುವ ಮನೋಭಾವ ಮೂಡಿ ಸಿದ್ದಾರೆ. ಅಲ್ಲದೆ, ಅಂಬೇಡ್ಕರ್ ಮತ್ತು ಗಾಂಧಿ ನಡುವೆ ಗೋಡೆ ಕಟ್ಟಿದ್ದಾರೆ. ಸಮಾಜ ಬೆಸೆಯುವ ಸಂದರ್ಭದಲ್ಲಿ ಇವರು ಕಂದಕ ನಿರ್ಮಿಸುತ್ತಾರೆ ಎಂದು ಖಂಡಿಸಿದರು. ರಂಗಕರ್ಮಿ ನಾಗೇಶ್ ಮಾತನಾಡಿ, ಹಿಂದೆ ಬಿ.ಜಯಶ್ರೀಯವ ರಿಗೂ ಕಿರುಕುಳ ನೀಡಿ ಅವರು ರಾಜೀ ನಾಮೆ ನೀಡಿ ಹೋಗುವಂತೆ ಮಾಡಿ ದ್ದರು. ಈಗ ಅಡ್ಡಂಡ ಕಾರ್ಯಪ್ಪ ರವರಿಗೂ ಅದನ್ನೇ ಮಾಡುತ್ತಿದ್ದಾರೆ. ತನ್ಮೂಲಕ ಕೆಲವೇ ವ್ಯಕ್ತಿಗಳ ಕೈಯ್ಯಲ್ಲಿ ಆಡಳಿತ ಇರಬೇಕೆಂಬ ಹುನ್ನಾರ ಇದರ ಹಿಂದೆ ಅಡಗಿದೆ ಎಂದರು.

ಕುಂಬಾರಕೊಪ್ಪಲಿನ ನವೀನ್ ಮಾತ ನಾಡಿ, ಹಿಂದೆ ನಿರ್ದೇಶಕರಾಗಿದ್ದ ಜನಾ ರ್ಧನ್ ತಮ್ಮ ಪತ್ನಿ, ಸಂಬಂಧಿಕರಿಗೆಲ್ಲಾ ಸಂಭಾವನೆ ಕೊಟ್ಟುಕೊಂಡಿದ್ದರೆಂಬ ಆರೋಪವಿದೆ. ಅಲ್ಲದೇ ಕೆಲವರು ರಂಗಾಯಣವನ್ನು ಸಂಜೆ ವೇಳೆ ಬಾರ್ ರೀತಿ ಮೋಜುತಾಣ ಸಹ ಮಾಡಿಕೊಂಡಿ ದ್ದರು. ಈಗ ಅದಕ್ಕೆಲ್ಲ ಕಡಿವಾಣ ಬಿದ್ದಿರು ವುದರಿಂದ ಅವರೆಲ್ಲಾ ಆಕ್ರೋಶಗೊಂಡಿ ದ್ದಾರೆ ಎಂದು ದೂರಿದರು. ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ ಮೈ.ಕಾ.ಪ್ರೇಮ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಾಮಾ ಜಿಕ ಚಿಂತಕ ಮಲ್ಲಾರಾಜೇ ಅರಸ್, ಮುಖಂಡರಾದ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಬಿಜೆಪಿ ಕಾರ್ಯಕರ್ತ ರಾದ ರೋಹಿತ್, ರವಿ, ಚೇತನಭೂಷಣ್, ನಾರಾಯಣ್, ಮಹೇಶ್, ಬಿಜೆಪಿ ಎಸ್‍ಸಿ ಮೋರ್ಚಾ ಮೈಸೂರು ನಗರ ಉಪಾ ಧ್ಯಕ್ಷ ಸೋಮಶೇಖರ್, ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಗಿರೀಶ್ ಮತ್ತಿತರರು ಹಾಜರಿದ್ದರು.

Translate »