ಕಾರ್ಯಸಿದ್ಧಿ ಹನುಮಾನ್ ದೇವಾಲಯ ಲೋಕಾರ್ಪಣೆ
ಮೈಸೂರು

ಕಾರ್ಯಸಿದ್ಧಿ ಹನುಮಾನ್ ದೇವಾಲಯ ಲೋಕಾರ್ಪಣೆ

December 19, 2021

ಮೈಸೂರು,ಡಿ.18(ಎಂಟಿವೈ)- ಮೈಸೂರಿನ ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಕೇರಳ ಶೈಲಿಯಲ್ಲಿ ನಿರ್ಮಿಸಿರುವ ಕಾರ್ಯಸಿದ್ಧಿ ಹನು ಮಾನ್ ದೇವಾಲಯವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲೋಕಾರ್ಪಣೆ ಮಾಡಿದರು.

ಮೈಸೂರು-ನಂಜನಗೂಡು ಮುಖ್ಯ ರಸ್ತೆಯ ದತ್ತನಗರದಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣದಲ್ಲಿ ನೂತನವಾಗಿ ಆಕರ್ಷಕ ಶೈಲಿಯಲ್ಲಿ ನಿರ್ಮಿಸಿರುವ ದೇವಾಲಯವನ್ನು ಉದ್ಘಾ ಟಿಸಿದ ಮಾಜಿ ಸಿಎಂ ಬಿ.ಎಸ್.ಯಡಿ ಯೂರಪ್ಪ, ರಾಮಾಯಣದಲ್ಲಿನ ಉಲ್ಲೇಖದಂತೆ ದೇವಾಲಯದಲ್ಲಿ ಮೂರು ಕಡೆ ಪ್ರತಿಷ್ಠಾಪಿ ಸಲಾಗಿರುವ ಕಾರ್ಯಸಿದ್ಧಿ ಹನುಮಾನ್ ಮೂರ್ತಿಯ ದರ್ಶನ ಪಡೆದರು.

ಇದೇ ವೇಳೆ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಯಡಿಯೂರಪ್ಪ ಅವರಿಗೆ ಆಶೀರ್ವಾದ ಮಾಡಿ, ಪ್ರಸಾದ ವಿತರಿ ಸಿದರು. ಈ ಸಂದರ್ಭದಲ್ಲಿ ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಸ್ವಾಮೀಜಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು. ದತ್ತ ಜಯಂತಿ ಮಾರ್ಗಶಿರ ಹುಣ್ಣಿಮೆ ದಿನದಂದು ದೇವಾಲಯ ಉದ್ಘಾಟನೆಗೊಂಡಿ ರುವುದು ವಿಶೇಷವಾಗಿದೆ.

ಸ್ವಾಮೀಜಿಗೆ ಉಪಾಸನಾ ದೇವತೆ: 1966ರಲ್ಲಿ ಗಣಪತಿ ಸಚ್ಚಿದಾನಂದ ಆಶ್ರಮ ಸ್ಥಾಪನೆಗೊಂಡಿತು. ಸ್ವಾಮೀಜೀ ಅವರ ಪರಂಪರೆಯಂತೆ ದತ್ತಾತ್ರೆಯ ಮೂರ್ತಿಯಿಂದಾಗಿ ದತ್ತಪೀಠ ಸ್ಥಾಪಿತ ವಾಗಿದ್ದರೂ, ಗಣಪತಿ ಸಚ್ಚಿದಾನಂದ ಸ್ವಾಮೀಜಿಗೆ ಆಂಜನೇಯಸ್ವಾಮಿ ಮೇಲೆ ಎಲ್ಲಿಲ್ಲದ ಪ್ರೀತಿ. ಗಣಪತಿ ಸ್ವಾಮೀಜಿ ಅವರಿಗೆ 8 ವರ್ಷವಾಗಿದ್ದಾಗ ಅವರ ತಾಯಿ, ಮೇಕೆದಾಟು ಪ್ರದೇಶದ ಬಳಿ ಆಂಜನೇಯಸ್ವಾಮಿ ದೇವಾಲಯ ವೊಂದರಲ್ಲಿ ಉಪದೇಶ ಮಾಡಿದ್ದ ಫಲ ವಾಗಿ ಗಣಪತಿ ಸ್ವಾಮೀಜಿಗೆ ಆಂಜ ನೇಯ ಉಪಾಸನ ದೇವರಾಗಿಯೂ ಹಾಗೂ ಅಕ್ಕರೆಯ ಆರಾಧ್ಯ ದೇವರಾಗಿ ದ್ದಾರೆ. ಈ ಹಿನ್ನೆಲೆಯಲ್ಲೇ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಕಾರ್ಯಸಿದ್ಧಿ ಹನುಮಾನ್ ದೇವಾಲಯ ನಿರ್ಮಿಸಿದ್ದಾರೆ ಎಂದು ಆಶ್ರಮದ ಮೂಲಗಳು ತಿಳಿಸಿವೆ.
3 ಕೋಟಿ ರೂ. ವೆಚ್ಚ: ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ನೂತನವಾಗಿ ನಿರ್ಮಿಸಿರುವ ಕಾರ್ಯಸಿದ್ಧಿ ಹನು ಮಾನ್ ದೇವಾಲಯ ಮೈಸೂರಿನ ವಿಶಿಷ್ಟ ವಾದ ದೇವಾಲಯವಾಗಿದೆ. ಜೈ ಸರ್ಮಲ್ ಯೆಲ್ಲೋ ಮಾರ್ಬಲ್ ಬಳಸಿ ಕೇರಳ ಶೈಲಿಯಲ್ಲಿ ದೇವಾಲಯ ನಿರ್ಮಿಸಲಾಗಿದೆ.

ಒಂದೇ ಸ್ಥಳದಲ್ಲಿ ಮೂರು ಆಂಜನೇಯ ದೇವಾಲಯ: ಇಂದು ಬೆಳಗ್ಗೆ ಲೋಕಾ ರ್ಪಣೆಗೊಂಡ ಕಾರ್ಯಸಿದ್ಧಿ ಹನು ಮಾನ್ ದೇವಾಲಯ ಹಲವು ವೈಶಿ ಷ್ಟ್ಯತೆಗೆ ಸಾಕ್ಷಿಯಾಗಿದೆ. ಒಂದೇ ಸ್ಥಳದಲ್ಲಿ ಮೂರು ಕಡೆ ವಿಭಿನ್ನವಾದ ಆಂಜನೇಯ ಸ್ವಾಮಿಯ ಮೂರ್ತಿ ಪ್ರತಿಷ್ಠಾಪಿಸ ಲಾಗಿದ್ದು, ಏಕಕಾಲದಲ್ಲಿ ಉದ್ಘಾಟನೆಗೊಂಡಿದೆ. ದೇವಾಲಯದ ಮೇಲ್ಭಾಗದ ಪೀಠದಲ್ಲಿ 45 ಅಡಿ ಎತ್ತರದ ಏಕಶಿಲೆಯಿಂದ ಕೆತ್ತನೆ ಮಾಡಿರುವ ಆಂಜನೇಯಸ್ವಾಮಿ ಮೂರ್ತಿ, ದೇವಾಲಯದ ಒಳಭಾಗದಲ್ಲಿ ಕಾರ್ಯ ಸಿದ್ಧಿ ಆಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪಿಸಿದ್ದು, ಇದು ಪೂಜಾ ದೇವ ರಾಗಿದೆ. ದೇವಾಲಯ ಒಳಗೆ ಪಾತಾಳ ದಲ್ಲಿ ಪಾತಾಳಾಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಇದು ಈ ದೇವಾ ಲಯದ ವಿಶೇಷತೆಗಳಲ್ಲಿ ಒಂದಾಗಿದೆ.

ರಾಮಾಯಣದಲ್ಲಿ ಉಲ್ಲೇಖಿಸಿದಂತೆ: ರಾಮಾಯಣದಲ್ಲಿ ಉಲ್ಲೇಖವಾಗಿರುವ ದಶಕಂಠ ರಾವಣ, ಅಹಿ ರಾವಣ, ಮಹೀ ರಾವಣರನ್ನು ಸಂಹಾರದ ಪ್ರಸಂಗದಲ್ಲಿ ಹನುಮಾನ್‍ರ ಸ್ಮರಣೆಯ ಈ ದೇವಾ ಲಯದಲ್ಲಿ ಕಾಣಬಹುದು. ರಾವಣರ ಮೂವರು ಸಹೋದರರ ಸಂಹಾರದಲ್ಲಿ ಇದ್ದದ್ದು, ಆಂಜನೇಯಸ್ವಾಮಿ ಮಾತ್ರ. ಹೀಗಾಗಿ ಈ ಮೂರು ಆಂಜನೇಯ ದೇವರು ಏಕಸ್ಥಾನದಲ್ಲಿರಬೇಕೆಂದು ಸ್ವಾಮೀಜಿಗಳ ಆಶಯವಾಗಿತ್ತು. ಅದಕ್ಕಾಗಿ ಸಂಕಲ್ಪ ಮಾಡಿ ಹೊರಭಾಗದಲ್ಲಿ 45 ಅಡಿ ಎತ್ತರ ಮೂರ್ತಿ, ದೇವಾಲಯದಲ್ಲಿ ಕಾರ್ಯಸಿದ್ಧಿ ಹನುಮನ ಮೂರ್ತಿ ಹಾಗೂ ಪಾತಾಳದಲ್ಲಿ ಪಾತಾಳಾಂಜ ನೇಯ ಮೂರ್ತಿ ಪ್ರತಿಷ್ಟಾಪಿಸಿದ್ದಾರೆ.

ಹನುಮಾನ್ ಚಾಲೀಸ್: ದೇವಾಲ ಯದ ಒಳಗಡೆ ಕೇರಳದ ಶೈಲಿ ಯಲ್ಲಿ ಹನುಮಾನ್ ಚಾಲೀಸಾ ನ್ಯೂರಲ್ ಪೇಯಿಂ ಟಿಂಗ್ ಮಾಡಲಾಗಿದೆ. ಕೇರಳ ಭಕ್ತರು ನ್ಯೂರಲ್ ಪೇಯಿಂಟಿಂಗ್ ಸಮರ್ಪಿಸಿದ್ದಾರೆ. ಇದು ಹನುಮಂತನ ಸಂದೇಶವನ್ನು ಹನು ಮಾನ್ ಚಾಲೀಸ್ ಮೂಲಕ ಸಾರಲಿದೆ.
ತ್ರೀಡಿ ಮ್ಯಾಪಿಂಗ್: ಗಣಪತಿ ಸಚ್ಚಿದಾ ನಂದ ಆಶ್ರಮದ ಆವರಣದಲ್ಲಿನ ನೂತನ ಕಾರ್ಯಸಿದ್ದಿ ಹನುಮಾನ್ ದೇವಾಲಯದ ಮೇಲ್ಭಾಗದಲ್ಲಿರುವ ಏಕಶಿಲಾ ಹನುಮನ ಮೂರ್ತಿಯ ಮೇಲೆ ಪ್ರತಿ ಶನಿವಾರ, ಭಾನು ವಾರ ಸಂಜೆ 7.10, 7.40ಕ್ಕೆ ಹಾಗೂ 8.10ಕ್ಕೆ ತ್ರಿಡಿ ಪ್ರೊಜೆಕ್ಷನ್ ಮ್ಯಾಪಿಂಗ್ ಲೇಸರ್ ಶೋ ನಡೆಸಲಾಗುತ್ತದೆ. ಆಂಜನೇಯಸ್ವಾಮಿ ಮೂರ್ತಿ ಮೇಲೆ ಹನುಮಾನ್ ಚಾಲೀಸಾ ಅರ್ಥ ಬರುವಂತೆ ಪ್ರದರ್ಶಿಸಲಾಗುತ್ತದೆ.

Translate »