ಬೆಂಗಳೂರು,ಏ.20-ಕೋವಿಡ್-19 ಪರಿಸ್ಥಿತಿ ಅರಿಯುವುದ ಕ್ಕಾಗಿ ರಾಜ್ಯಪಾಲರ ಸಭೆ ಮುಗಿದ, ಬಳಿಕ ಸಚಿವರ ಜೊತೆಗೆ ಆಸ್ಪತ್ರೆ, ಸ್ಮಶಾನಗಳ ಪರಿಶೀಲನೆಗೆ ಬರಲು ಸಿದ್ಧವಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಇದೇ ವೇಳೆ ಕೋವಿಡ್‍ನಿಂದ ಮೃತಪಪಟ್ಟ ವರ ಅಂತಿಮ ಸಂಸ್ಕಾರ ಸರ್ಕಾರಿ ಜಾಗದಲ್ಲಿ ಗೌರವಯುತ ವಾಗಿ ಆಗಲಿ ಎಂದು ಶಿವಕುಮಾರ್ ಆಗ್ರಹಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಶವ ಸಂಸ್ಕಾರಕ್ಕೂ ತೊಂದರೆಯಾಗು ತ್ತಿರುವುದು ಕಂದಾಯ ಸಚಿವರಿಗೆ ಗೊತ್ತಾಗಬೇಕು. ಸರತಿ ಸಾಲಿನಲ್ಲಿ ನಿಂತು ಹೆಣ ಸುಡುವಂತೆ ಮಾಡುತ್ತಿದ್ದಾರೆ. ಸರ್ಕಾರ…
ಕೋವಿಡ್-19: ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರಗಳಿಗೆ ಸಹಕಾರ ನೀಡುವಂತೆ ಸೇನೆಗೆ ರಾಜನಾಥ್ ಸಿಂಗ್ ಸೂಚನೆ
April 21, 2021ನವದೆಹಲಿ, ಏ. 20- ದೇಶದಾದ್ಯಂತ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರಗಳಿಗೆ ಎಲ್ಲಾ ರೀತಿ ಯಲ್ಲೂ ಸಹಕಾರ ನೀಡುವಂತೆ ಮೂರೂ ಸೇನಾಪಡೆ ಗಳಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಸೂಚನೆ ನೀಡಿದ್ದಾರೆ. ಈ ಕುರಿತು ರಕ್ಷಣಾ ಇಲಾಖೆಯ ಮೂಲಗಳು ಮಾಹಿತಿ ನೀಡಿದ್ದು, ಕೊರೊನಾ ಪರಿಸ್ಥಿತಿ ನಿಭಾಯಿಸು ವಲ್ಲಿ ರಾಜ್ಯ ಸರ್ಕಾರಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುವಂತೆ ರಾಜನಾಥ್ ಸಿಂಗ್ ಸೇನಾಪಡೆಗಳಿಗೆ ಸೂಚನೆ ನೀಡಿದ್ದು, ಈ ಸಂಬಂಧ ವಿವಿಧ ರಾಜ್ಯಗಳಲ್ಲಿರುವ…
ಅಭಿವೃದ್ಧಿ ಕಾಮಗಾರಿ ನಿಲ್ಲಿಸಿ, ಜನರ ಆರೋಗ್ಯಕ್ಕೆ ಒತ್ತು ನೀಡಿ
April 19, 2021ಬೆಂಗಳೂರು, ಏ.18-ಅಭಿವೃದ್ಧಿ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಜನರ ಆರೋಗ್ಯಕ್ಕೆ ಒತ್ತು ನೀಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಕ್ಷಣವೇ ಕೋವಿಡ್‍ಗೆ 300 ಕೋಟಿ ರೂ. ಮೀಸಲಿಡಿ ಎಂದು ಒತ್ತಾಯಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಜನ ಇದ್ದರೆ ಜೀವನ, ಜನರಿದ್ದರೇನೆ ರಾಜ್ಯ, ಆರ್ಥಿಕತೆ, ಸರ್ಕಾರ ಇವೆಲ್ಲಾ ಉಳಿಯುತ್ತದೆ. ಅದರಿಂದಾಗಿ ಮೊದಲು ಜನರ ಪ್ರಾಣ ಉಳಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು. 2020ರ ಮಾರ್ಚ್‍ನಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳು…
ಇಂದಿನಿಂದ ಬೆಂಗಳೂರಲ್ಲಿ ಟಫ್ ರೂಲ್ಸ್?
April 19, 2021ಬೆಂಗಳೂರು, ಏ.18-ರಾಜ್ಯದಲ್ಲಿ ಕೊರೊನಾ ಸೋಂಕು ಸ್ಫೋಟಗೊಂಡಿದ್ದು, ಭಾನುವಾರ ಒಂದೇ ದಿನ 19,067 ಮಂದಿಗೆ ಸೋಂಕು ತಗುಲಿದ್ದು, 81 ಮಂದಿ ಮೃತಪಟ್ಟಿ ದ್ದಾರೆ. ಬೆಂಗಳೂರಲ್ಲಿ ಪರಿಸ್ಥಿತಿ ಕೈಮೀರುತ್ತಿದ್ದು, 12,793 ಮಂದಿಗೆ ಇಂದು ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸೋಮವಾರದಿಂದ ಬೆಂಗ ಳೂರಿನಲ್ಲಿ ಕಠಿಣ ನಿಯಮಗಳನ್ನು ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನಲ್ಲಿ ವ್ಯಾಪಕವಾಗಿ ಹರಡುತ್ತಿ ರುವ ಕೊರೊನಾಗೆ ಕಡಿವಾಣ ಹಾಕಲು ನಾಳೆಯಿಂದ (ಏ.19) ಕಠಿಣ ನಿಯಮ ಗಳನ್ನು ಜಾರಿಗೆ ತರಲು ಇಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ…
ಆತಂಕ ಬೇಡ, ಟೆಸ್ಟ್, ಟ್ರಾಕ್, ಟ್ರೀಟ್ಮೆಂಟ್ ಅವಶ್ಯ
April 18, 2021ಕೊರೊನಾ ಸಭೆ ಬಳಿಕ ಮಹತ್ವದ ಸೂಚನೆ ನೀಡಿದ ಪ್ರಧಾನಿ ಮೋದಿ ನವದೆಹಲಿ: ದೇಶದಲ್ಲಿ ಅತಿಯಾಗುತ್ತಿರುವ ಕೊರೊನಾ ವೈರಸ್ ಪ್ರಕರಣ, ಅದರ ನಿಯಂತ್ರಣ ಹಾಗೂ ಲಸಿಕೆ ವಿತರಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಭೆ ನಡೆಸಿದರು. ಈ ವೇಳೆ ತ್ರಿಬಲ್ ಟಿ ಸೂತ್ರವನ್ನು ಮೋದಿ ಪುನರುಚ್ಚರಿಸಿದ್ದಾರೆ. ಇದನ್ನು ಪಾಲಿಸಿದರೆ ಮಾತ್ರ ವೇಗವಾಗಿ ಕೊರೊನಾ ನಿಯಂತ್ರಣ ಸಾಧ್ಯ ಎಂದಿದ್ದಾರೆ. ಟೆಸ್ಟ್, ಟ್ರಾಕ್, ಹಾಗೂ ಟ್ರೀಟ್ಮೆಂಟ್. ಇದು ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಹೇಳಿದ ತ್ರಿಬಲ್ ಟಿ ಸೂತ್ರ….
ತಮಿಳಿನ ಖ್ಯಾತ ನಟ ವಿವೇಕ್ ಹಠಾತ್ ನಿಧನ: ಪ್ರಧಾನಿ ಮೋದಿ, ದುಃಖತಪ್ತ ಚಿತ್ರರಂಗ ಕಂಬನಿ
April 18, 2021ನವದೆಹಲಿ/ಚೆನ್ನೈ, ಏ. 17- ತಮಿಳು ನಟ,ಹಾಸ್ಯ ಕಲಾವಿದ ವಿವೇಕ್ ತೀವ್ರ ಹೃದಯಾಘಾತಕ್ಕೀಡಾಗಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ನಸುಕಿನ ಜಾವ ಮೃತಪಟ್ಟಿದ್ದು ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜಕೀಯ ನಾಯಕರು, ಕಲಾವಿದರು ಕಂಬನಿ ಮಿಡಿದಿದ್ದಾರೆ. ಖ್ಯಾತ ನಟ ವಿವೇಕ್ ಅಕಾಲಿಕ ನಿಧನವು ಅನೇಕರನ್ನು ದುಃಖಿತಗೊಳಿ ಸಿದೆ. ಅವರ ಹಾಸ್ಯಪ್ರಜ್ಞೆ ಮತ್ತು ಬುದ್ಧಿವಂತಿಕೆಯ ಸಂಭಾಷಣೆ ಗಳು ಜನರನ್ನು ರಂಜಿಸಿದವು. ಚಲನಚಿತ್ರ ಜೀವನದಲ್ಲಿ, ಪರಿಸರ ಮತ್ತು ಸಮಾಜದ ಬಗೆಗಿನ ಅವರ ಕಾಳಜಿಯು ಅಚ್ಚಳಿಯದ್ದು. ಅವರ ಕುಟುಂಬ, ಸ್ನೇಹಿತರು…
ಬೆಂಗಳೂರು ಲಾಕ್‍ಡೌನ್‍ಗೆ ಸಲಹೆ
April 12, 2021ಬೆಂಗಳೂರು,ಏ.11-ರಾಜ್ಯದಲ್ಲಿ ಎರಡನೇ ಅಲೆಯ ಕೊರೊನಾ ಸ್ಫೋಟಗೊಂಡಿದ್ದು, ಭಾನುವಾರ ಒಂದೇ ದಿನ 10,250 ಪ್ರಕರಣ ದಾಖಲಾಗಿ, 40 ಮಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆ ಯಲ್ಲಿ ಆರೋಗ್ಯ ಖಾತೆ ಸಚಿವ ಡಾ.ಕೆ.ಸುಧಾಕರ್ ಅವರು ವಿಧಾನ ಸೌಧದಲ್ಲಿ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ಒಂದೇ ದಿನ 7584 ಮಂದಿಗೆ ಸೋಂಕು ದೃಢ ಪಟ್ಟಿದ್ದು ಆತಂಕಕ್ಕೆ ಕಾರಣವಾಗಿದೆ. ತಾಂತ್ರಿಕ ಸಲಹಾ ಸಮಿತಿಯು ಬೆಂಗಳೂರಿನಲ್ಲಿ 10 ದಿನಗಳ ಕಾಲ ಲಾಕ್‍ಡೌನ್ ಜಾರಿಗೊಳಿಸುವಂತೆ ಸಲಹೆ ನೀಡಿದೆ ಎನ್ನಲಾಗಿದೆ. ಅಲ್ಲದೇ ಮೇ ಮೊದಲ…
ಉತ್ತಮ ಆರೋಗ್ಯವೂ ಜನರ ಮೂಲಭೂತ ಹಕ್ಕಾಗಿದೆ
April 8, 2021ಬೆಂಗಳೂರು, ಏ.7(ಕೆಎಂಶಿ)- ನೀರು, ವಸತಿಯಂತೆ ಉತ್ತಮ ಆರೋಗ್ಯ ಸೌಲಭ್ಯವನ್ನು ಪಡೆಯುವುದು ಕೂಡ ಸಾಮಾನ್ಯ ಜನರ ಮೂಲಭೂತ ಹಕ್ಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ಗಳ ವಿಶ್ವವಿದ್ಯಾಲಯದಲ್ಲಿ ನಡೆದ ವಿಶ್ವ ಆರೋಗ್ಯ ದಿನಾಚರಣೆಯಲ್ಲಿ ಮಾತನಾ ಡಿದ ಸಚಿವರು, ಜಗತ್ತಿನಲ್ಲಿ ಯಾರು ಯಾವುದೇ ಜಾತಿ, ಅಂತಸ್ತಿನಲ್ಲಿ ಜನಿಸಿದರೂ ಅವರಿಗೆ ಆರೋಗ್ಯ ಸೌಲಭ್ಯ ವಂಚಿತವಾಗಬಾರದು. ಎಲ್ಲರಿಗೂ ಉತ್ತಮ ಆರೋಗ್ಯ ಸೌಲಭ್ಯ ಸಿಗಬೇಕು. ನೀರು, ವಸತಿಯಂತೆ ಆರೋಗ್ಯ ಸೌಲಭ್ಯ ಕೂಡ ಮೂಲಭೂತ…
ಮೈಸೂರು ರೇಸ್ ಕ್ಲಬ್‍ಗೆ ಸರ್ಕಾರಿ ಭೂಮಿ ಗುತ್ತಿಗೆ: ಆದೇಶ ಹಿಂಪಡೆಯಲು ಸರ್ಕಾರಕ್ಕೆ ಕೊನೆಯ ಅವಕಾಶ
April 8, 2021ಬೆಂಗಳೂರು,ಏ.7-ಮೈಸೂರು ರೇಸ್ ಕ್ಲಬ್ ಲಿಮಿ ಟೆಡ್‍ಗೆ 139 ಎಕರೆ ಸರ್ಕಾರಿ ಭೂಮಿಯನ್ನು ಗುತ್ತಿಗೆ ನೀಡಿರುವ ಆದೇಶವನ್ನು ವಾಪಸ್ ಪಡೆಯುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲು ಸರ್ಕಾರಕ್ಕೆ ಹೈಕೋರ್ಟ್ ಅಂತಿಮ ಅವಕಾಶ ನೀಡಿದೆ. ರೇಸ್ ಕ್ಲಬ್‍ಗೆ ಮೈಸೂರಿನ ಕುರುಬರಹಳ್ಳಿಯಲ್ಲಿ 139 ಎಕರೆ ಸರ್ಕಾರಿ ಭೂಮಿಯನ್ನು 30 ವರ್ಷಗಳವರೆಗೆ ಅವೈಜ್ಞಾನಿಕವಾಗಿ ಗುತ್ತಿಗೆ ನೀಡ ಲಾಗಿದೆ ಎಂದು ಆಕ್ಷೇಪಿಸಿ ವಕೀಲ ಉಮಾಪತಿ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ…
‘ಪರೀಕ್ಷಾ ಪೇ ಚರ್ಚಾ’: ರಾಜ್ಯದ ಇಬ್ಬರು ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ
April 8, 2021ನವದೆಹಲಿ, ಏ.7-ಪ್ರಧಾನಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳೊಂದಿಗೆ `ಪರೀಕ್ಷಾ ಪೇ ಚರ್ಚಾ’ ಕುರಿತು ಸಂವಾದ ನಡೆಸಿದ್ದು, ವಿಶೇಷವಾಗಿ ಈ ಬಾರಿ ಚರ್ಚೆ ಯಲ್ಲಿ ಭಾಗವಹಿಸಲು ಪಾಲಕರು, ಶಿಕ್ಷಕರಿಗೂ ಅವಕಾಶ ನೀಡಲಾಗಿದೆ. ಈ ಸಂವಾದದಲ್ಲಿ ಆಯ್ಕೆಯಾದ ದೇಶದ ಮೂವತ್ತು ವಿದ್ಯಾರ್ಥಿಗಳಲ್ಲಿ ರಾಜ್ಯದ ಇಬ್ಬರು ಆಯ್ಕೆ ಯಾಗಿದ್ದು, ಇವರೊಂದಿಗೂ ಮಾತನಾಡಿದ್ದಾರೆ. ಈ ಬಾರಿ ಕೊರೊನಾ ಸಾಂಕ್ರಾಮಿಕ ರೋಗದ ಕಾರಣ ಸಂವಾದ ವರ್ಚ್ಯುಯಲ್ ಆಗಿ ನಡೆದಿದೆ. ಇದರಲ್ಲಿ 14 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಮೋದಿ ಅವರೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದಾರೆ. ಈ…