ಕೊರೊನಾ ಸಭೆ ಬಳಿಕ ಮಹತ್ವದ ಸೂಚನೆ ನೀಡಿದ ಪ್ರಧಾನಿ ಮೋದಿ
ನವದೆಹಲಿ: ದೇಶದಲ್ಲಿ ಅತಿಯಾಗುತ್ತಿರುವ ಕೊರೊನಾ ವೈರಸ್ ಪ್ರಕರಣ, ಅದರ ನಿಯಂತ್ರಣ ಹಾಗೂ ಲಸಿಕೆ ವಿತರಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಭೆ ನಡೆಸಿದರು. ಈ ವೇಳೆ ತ್ರಿಬಲ್ ಟಿ ಸೂತ್ರವನ್ನು ಮೋದಿ ಪುನರುಚ್ಚರಿಸಿದ್ದಾರೆ. ಇದನ್ನು ಪಾಲಿಸಿದರೆ ಮಾತ್ರ ವೇಗವಾಗಿ ಕೊರೊನಾ ನಿಯಂತ್ರಣ ಸಾಧ್ಯ ಎಂದಿದ್ದಾರೆ. ಟೆಸ್ಟ್, ಟ್ರಾಕ್, ಹಾಗೂ ಟ್ರೀಟ್ಮೆಂಟ್. ಇದು ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಹೇಳಿದ ತ್ರಿಬಲ್ ಟಿ ಸೂತ್ರ. ಇದೀಗ ಮತ್ತೆ ಮೋದಿ ಇದೇ ಸೂತ್ರ ಪರಿಣಾಮಕಾರಿಯಾಗಿ ಬಳಸಲು ಮನವಿ ಮಾಡಿದ್ದಾರೆ. ಇದೇ ವೇಳೆ ಸ್ಥಳೀಯ ಆಡಳಿತ ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಕೊರೊನಾ ಸೋಂಕಿತರಿಗ ಆಸ್ಪತ್ರೆ, ಬೆಡ್, ವೆಂಟಿಲೇಟರ್, ಆಕ್ಸಿನ್ ಸೇರಿದಂತೆ ವೈದ್ಯಕೀಯ ಸೌಲಭ್ಯ ಸರಿಯಾಗಿ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯಗಳಿಗೆ ಸೂಚನೆ ನೀಡಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಆರೈಕೆಗೆ ಸರಿಯಾದ ಕೋವಿಡ್ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಮೋದಿ ಹೇಳಿದ್ದಾರೆ. ಇನ್ನು ಲಸಿಕೆ ವಿತರಣೆ ಕುರಿತು ಮಾಹಿತಿ ಪಡೆದುಕೊಂಡ ಮೋದಿ, ರೆಮ್ಡಿಸಿವಿರ್ ಸೇರಿದಂತೆ ಇತರ ಲಸಿಕೆ ಪೂರೈಕೆ ಅಭಾವ ಬಗೆಹರಿಸಲು ತೆಗೆದುಕೊಂಡ ಕ್ರಮಗಳ ಕುರಿತು ವರದಿ ಪಡೆದು ಕೊಂಡಿದ್ದಾರೆ. ರೆಮ್ಡಿಸಿವಿರ್ ಸೇರಿದಂತೆ ಸ್ಥಳೀಯ ಲಸಿಕೆ ಉತ್ಪಾದನೆಯನ್ನು ಭಾರತ ಸರ್ಕಾರ ಹೆಚ್ಚಿಸಿದೆ. ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದಾರೆ. ಪಿಎಂ ಕೇರ್ಸ್‍ನಿಂದ 32 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು 162 PSಂ ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. 1 ಲಕ್ಷ ಸಿಲಿಂಡರ್‍ಗಳನ್ನು ಸಂಗ್ರಹಿಸಿ, ಶೀಘ್ರದಲ್ಲೇ ಎಲ್ಲಾ ರಾಜ್ಯಗಳಿಗೆ ಸರಬರಾಜು ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.