ಶಿಥಿಲಗೊಂಡ 66 ಶಾಲಾ ಕೊಠಡಿಗಳ ದುರಸ್ತಿ ಕಾಮಗಾರಿಗೆ `ಗ್ರಹಣ’!
ಮೈಸೂರು

ಶಿಥಿಲಗೊಂಡ 66 ಶಾಲಾ ಕೊಠಡಿಗಳ ದುರಸ್ತಿ ಕಾಮಗಾರಿಗೆ `ಗ್ರಹಣ’!

April 18, 2021

ಮೈಸೂರು, ಏ.17(ಎಂಟಿವೈ)- ಮೈಸೂರು ಜಿಲ್ಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡಗಳ ದುರಸ್ತಿಗೆ ವಿಳಂಬ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶನಿವಾರ ತರಾಟೆಗೆ ತೆಗೆದು ಕೊಂಡರು. ದುರಸ್ತಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ನೇತೃತ್ವ ವಹಿಸಿದ್ದ ಅಧ್ಯಕ್ಷೆ, ಪಂಚಾ ಯತ್ ರಾಜ್ ಇಂಜಿನಿಯರಿಂಗ್ ವಿಭಾ ಗದ ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಕಿಡಿಕಾರಿದರು. ಯಾರ ಮೇಲಾ ದರೂ ಕಟ್ಟಡ ಬೀಳಬೇಕೆ? ಅನಾಹುತ ಸಂಭವಿಸುವವರೆಗೂ ಕೆಲಸ ಮಾಡುವು ದಿಲ್ಲವೇ? ಎಂದು ತರಾಟೆಗೆ ತೆಗೆದುಕೊಂಡರು.

2019-20ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೀಡಾದ 418 ಶಾಲಾ ಕೊಠಡಿಗಳ ದುರಸ್ತಿಗೆ ಸೂಚಿಸಲಾಯಿತು. ಈವರೆಗೆ 277 ಕೊಠಡಿಗಳ ದುರಸ್ತಿಯಷ್ಟೇ ಆಗಿದೆ. 75 ಕೊಠಡಿಗಳ ಕಾಮಗಾರಿ ಪ್ರಗತಿ ಯಲ್ಲಿದೆ. 66 ಕೊಠಡಿಗಳ ದುರಸ್ತಿ ಕಾಮ ಗಾರಿ ಆರಂಭಗೊಂಡೇ ಇಲ್ಲ. ಈ ದುರಸ್ತಿ ಕಾಮಗಾರಿಗಳನ್ನು ಕಳೆದ ವರ್ಷವೇ ಪೂರ್ಣಗೊಳಿಸಬೇಕಿತ್ತು. ಹೀಗಿರುವಾಗ 2020-21ನೇ ಸಾಲಿನ ದುರಸ್ತಿ ಕಾಮ ಗಾರಿಗಳನ್ನು ಈಗ ಕೈಗೆತ್ತಿಕೊಳ್ಳಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥನ್, ಶಾಲಾ ಕಟ್ಟಡಗಳ ದುರಸ್ತಿಗೆ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ಶೇ.75ರಷ್ಟು ಕಾಮಗಾರಿ ಪೂರ್ಣಗೊಳಿಸಿದ ನಂತರವೇ ಉಳಿದ ಅನುದಾನ ಬಿಡುಗಡೆಯಾಗುತ್ತದೆ. ಈಗ ಶೇ.75ರಷ್ಟು ಕಾಮಗಾರಿ ಪೂರ್ಣಗೊಳಿ ಸಲು ಅಗತ್ಯವಾದ 8.36 ಕೋಟಿ ರೂ.ಗಳ ಅನುದಾನ ಬಿಡುಗಡೆಯಾದರೂ ಅಧಿ ಕಾರಿಗಳು ಮಾತ್ರ 75 ಕೊಠಡಿಗಳ ಕಾಮಗಾರಿಯನ್ನೇ ಕೈಗೆತ್ತಿಕೊಂಡಿಲ್ಲ. ಇಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಪಂ ಮುಖ್ಯ ಯೋಜನಾಧಿಕಾರಿ ಧನುಷ್ ಮಾತನಾಡಿ, ಕಾಮಗಾರಿಯಲ್ಲಿ ವಿಳಂಬ ನೀತಿ ಸರಿಯಲ್ಲ. 15 ದಿನ ದೊಳಗೆ ಕಾಮಗಾರಿ ಪೂರ್ಣಗೊಳಿಸಿ ವರದಿ ನೀಡಬೇಕು ಎಂದರು.

ನೀರಿನ ತೊಟ್ಟಿ ಸ್ವಚ್ಛತೆ: ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗಗಳ ಅಪಾಯವಿರು ತ್ತದೆ. ಗ್ರಾಮೀಣ ಭಾಗದ ಎಲ್ಲ ನೀರಿನ ಟ್ಯಾಂಕ್, ನೀರಿನ ತೊಟ್ಟಿಗಳನ್ನು ಗ್ರಾಪಂ ಮೂಲಕ ಶುಚಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಅಧ್ಯಕ್ಷೆ ಸೂಚನೆ ನೀಡಿದರು.
234 ಬಾಲ್ಯವಿವಾಹ ದೂರು: ಮಹಿಳಾ -ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇ ಶಕಿ ಕೆ.ಪದ್ಮ ಮಾತನಾಡಿ, ಕೊರೊನಾ ಹಾವಳಿ ಹಾಗೂ ಲಾಕ್‍ಡೌನ್ ವೇಳೆ ಜಿಲ್ಲೆ ಯಲ್ಲಿ ಒಟ್ಟು 234 ಬಾಲ್ಯವಿವಾಹ ಕುರಿತು ದೂರು ಬಂದಿದ್ದು, ಬಹುತೇಕ ಬಾಲ್ಯ ವಿವಾಹಗಳನ್ನು ತಡೆದಿz್ದÉೀವೆ. ಆದರೆ, 30 ಬಾಲ್ಯವಿವಾಹಗಳು ನಾವು ಸ್ಥಳಕ್ಕೆ ತೆರಳುವಷ್ಟರೊಳಗೆ ಪೂರ್ಣಗೊಂಡಿದ್ದವು. ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿ ಸಲಾಗಿದೆ ಎಂದು ಮಾಹಿತಿ ನೀಡಿದರು.

ಯುಡಿಐಡಿ ಕಾರ್ಡ್: ವಿಶೇಷಚೇತನ ರಿಗೆ 9 ಸಾವಿರ ಯುಡಿಐಡಿ ಕಾರ್ಡ್ ವಿತ ರಿಸಲಾಗಿದೆ. ಕಳೆದ ಹಣಕಾಸು ವರ್ಷ ದಲ್ಲಿ 14 ಶಿಬಿರ ನಡೆಸಲಾಗಿದೆ ಎಂದು ವಿಕಲಚೇತನರ ಕಲ್ಯಾಣ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ಹೋಬಳಿ ಮಟ್ಟದಲ್ಲಿ ಶಿಬಿರ ಏರ್ಪಡಿಸಿದರೆ ವಿಶೇಷ ಚೇತನರಿಗೆ ಅನುಕೂಲವಾಗುತ್ತದೆ ಎಂದು ಅಧ್ಯಕ್ಷೆ ಸಲಹೆ ನೀಡಿದರು.

24 ಲಕ್ಷ ರೂ. ಟೆಂಡರ್: ಜಿಲ್ಲೆಯಲ್ಲಿ ಕ್ರೀಡಾ ಸಾಮಗ್ರಿ ಕಿಟ್ ವಿತರಿಸಲು 24 ಲಕ್ಷ ರೂ.ಗಳ ಟೆಂಡರ್ ಕರೆಯಲಾಗಿದೆ. 1 ಕಿಟ್‍ಗೆ 48 ಸಾವಿರ ರೂ. ವೆಚ್ಚವಾಗು ತ್ತದೆ. ಅದರಲ್ಲಿ 14 ಬಗೆಯ ಆಟದ ಸಾಮಾನುಗಳಿರುತ್ತವೆ. ಗರಡಿ ಮನೆ, ಕ್ರೀಡಾ ಕೇಂದ್ರ, ಸಾಂಸ್ಕøತಿಕ ಕಾರ್ಯ ಕ್ರಮಗಳಿಗೂ ಅನುದಾನ ನೀಡಲಾಗುತ್ತಿದೆ ಎಂದು ಯುವ ಸಬಲೀಕರಣ-ಕ್ರೀಡಾ ಇಲಾಖೆ ಉಪ ನಿರ್ದೇಶಕ ಓಂಪ್ರಕಾಶ್ ಸಭೆಗೆ ಮಾಹಿತಿ ನೀಡಿದರು. ಜಿಪಂ ಉಪಾಧ್ಯಕ್ಷೆ ಗೌರಮ್ಮ, ಸದಸ್ಯರು ಮತ್ತು ವಿವಿಧ ಇಲಾಖೆಗಳ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

Translate »