ಅಂಬೇಡ್ಕರ್‍ಗೆ ಅವಹೇಳನ ಆರೋಪ: ದಸಂಸ ಪ್ರತಿಭಟನೆ
ಮೈಸೂರು

ಅಂಬೇಡ್ಕರ್‍ಗೆ ಅವಹೇಳನ ಆರೋಪ: ದಸಂಸ ಪ್ರತಿಭಟನೆ

April 18, 2021

ಮೈಸೂರು,ಏ.17(ವೈಡಿಎಸ್)-ಡಾ. ಬಿ.ಆರ್.ಅಂಬೇಡ್ಕರ್ ಕುರಿತು ಅವಹೇಳನ ಕಾರಿ ಹೇಳಿಕೆ ನೀಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಯಿತು.
ಇತ್ತೀಚೆಗೆ ಸಕಲೇಶಪುರ ತಾಲೂಕಿನ ಕುಂಬರಹಳ್ಳಿಯ ಅರುಣ್‍ಗೌಡ ಎಂಬಾತ ದಲಿತರು ಮತ್ತು ಅಂಬೇಡ್ಕರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿ ರುವುದು ಖಂಡನೀಯ. ಈಗಾಗಲೇ ಸಕ ಲೇಶಪುರ ಪೆÇಲೀಸ್ ಠಾಣೆಯಲ್ಲಿ ಪ್ರಕ ರಣ ದಾಖಲಾಗಿದ್ದರೂ ಅರುಣ್ ಗೌಡ ನನ್ನು ಬಂಧಿಸಲು ಪೊಲೀಸರು ಮೀನಾ -ಮೇಷ ಎಣಿಸುತ್ತಿದ್ದಾರೆ. ಸಕಲೇಶಪುರ ಪಟ್ಟಣವನ್ನು ಬಂದ್ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಅಸಮಾ ಧಾನ ವ್ಯಕ್ತಪಡಿಸಿದರು.

ಕೂಡಲೇ ಅರುಣ್ ಗೌಡ ಹಾಗೂ ಆತನ ಸಹಪಾಠಿಗಳನ್ನು ಬಂಧಿಸಿ, ಗಡಿ ಪಾರು ಮಾಡಬೇಕು ಎಂದು ಆಗ್ರಹಿಸಿ ದರು. ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿಪತ್ರ ಸಲ್ಲಿಸಿದರು.

ಜಿಲ್ಲಾ ಪ್ರಧಾನ ಸಂಚಾಲಕ ಬನ್ನಹಳ್ಳಿ ಸೋಮಣ್ಣ, ಉಪ ಪ್ರಧಾನ ಸಂಚಾಲಕ ದೊಡ್ಡಸಿದ್ದು ಹಾದನೂರು, ಸಂಚಾಲಕಿ ಪುಟ್ಟಲಕ್ಷ್ಮಮ್ಮ, ವಸಂತ ಹೊನ್ನೇನಹಳ್ಳಿ, ಮುಖಂಡರಾದ ಶಿವಕುಮಾರ್, ನಾಗ ರಾಜು ವಾಟಾಳು, ಚಂದ್ರು ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Translate »