ಕೊಡಗು

ಬಿಜೆಪಿ ವತಿಯಿಂದ ಪ್ರಬುದ್ಧರ ಗೋಷ್ಠಿ

March 20, 2019

ಪ್ರಧಾನಿ ಮೋದಿಯಿಂದ ಭ್ರಷ್ಟಾಚಾರ ರಹಿತ ದಿಟ್ಟ ಆಡಳಿತ
ಕುಶಾಲನಗರ: ಕಳೆದ ಐದು ವರ್ಷ ಗಳ ಅವಧಿಯಲ್ಲಿ ಕೇಂದ್ರ ಸರ್ಕಾರದ ಆಡಳಿತ ವರ್ಗ ದಲ್ಲಿ ಪ್ರಧಾನಿ ಸಹಿತ ಯಾವೊಬ್ಬ ಸಚಿವರು ಭ್ರಷ್ಟಾ ಚಾರ ರಹಿತವಾಗಿ ದಿಟ್ಟ ಆಡಳಿತ ನಡೆಸಿದ ಹೆಮ್ಮೆ ಯಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಕುಶಾಲನಗರದ ಖಾಸಗಿ ಹೋಟೆಲ್ ಪ್ರೆಸಿ ಡೆಂಟ್ ಹೋಟೆಲ್ ಸಭಾಂಗಣದಲ್ಲಿ ಮಂಗಳ ವಾರ ಹಮ್ಮಿಕೊಂಡಿದ್ದ ಪ್ರಬುದ್ಧರ ಗೋಷ್ಠಿ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಅಪವಾದ, ಆರೋಪ, ಭ್ರಷ್ಟಾಚಾರಗಳು ಇಲ್ಲದ ಮೊದಲ ಸಂಸತ್ ನರೇಂದ್ರ ಮೋದಿ ಅವರ ಆಡ ಳಿತದ ಐದು ವರ್ಷಗಳ ಆಡಳಿತವಾಗಿದೆ. ಇಡೀ ರಾಷ್ಟ್ರ ವನ್ನು ಒಟ್ಟಿಗೆ ತೆಗೆದುಕೊಂಡು ಹೋಗಿ ಶ್ರೀ ರಾಮ ಮಂದಿರವನ್ನು ಕಟ್ಟುವುದು ಮೋದೀ ಜೀಯವರ ಮುಂದಿನ ಕನಸು. ರಾಮ ಮಂದಿರ ನಿರ್ಮಾಣವನ್ನು ವಿರೋಧಿಸುತ್ತಿದ್ದವರು ಕೂಡ ಮಂದಿರ ನಿರ್ಮಾಣ ಆಗಬೇಕು ಎಂದು ಹೇಳು ವಷ್ಟರ ಮಟ್ಟಿಗೆ ಮೋದಿ ಎಲ್ಲರ ವಿಶ್ವಾಸ ಗೆದ್ದಿದ್ದಾರೆ ಎಂದು ಹೇಳಿದರು.

ಕಳೆದ ಐದು ವರ್ಷಗಳ ಹಿಂದೆ ಇದೇ ನರೇಂದ್ರ ಮೋದಿ ನೇತೃತ್ವದಲ್ಲಿ ನಾವು ಜನರ ಬಳಿ ಬಂದು ಮೋದಿಯವರು ಪ್ರಧಾನಮಂತ್ರಿ ಆಗಬೇಕು. ಸ್ವಾಭಿ ಮಾನದ ರಾಷ್ಟ್ರ ಕಟ್ಟಲು ಒಂದು ಓಟು ಕೊಡಿ ಎಂದು ಕೇಳಿದೆವು. ಜನ ಮತ ಹಾಕಿದರು. ಮೋದಿ ಪ್ರಧಾನಿ ಆದರು. ಆಡಳಿತದಲ್ಲಿ ಏನಾದರೂ ಕಪ್ಪು ಚುಕ್ಕಿ ಇದೆಯಾ? ದೇಶದಲ್ಲಿ ಬದಲಾವಣೆಯ ಆಡಳಿತವನ್ನು ದೇಶದ ಜನರು ಕಾಣಲಿಲ್ಲವೇ? ವಿಶ್ವದ ಬಲಿಷ್ಠ ರಾಷ್ಟ್ರವಾದ ಅಮೇರಿಕ ಮೋದಿ ಅವರಿಗೆ ಒಂದು ಕಾಲದಲ್ಲಿ ವೀಸಾ ನೀಡಲು ನಿರಾ ಕರಿಸಿತ್ತು. ಮತ್ತೆ ಅದೇ ರಾಷ್ಟ್ರ ಅದೇ ಮೋದಿ ಯವರ ಜನಾಡಳಿತವನ್ನು ಮೆಚ್ಚಿ ವಿಶ್ವವೇ ನಿಬ್ಬೆರಗಾಗುವ ರೀತಿ ತನ್ನ ದೇಶಕ್ಕೆ ಆಹ್ವಾನಿಸಿ ಕೊಂಡು ಯಾವಾಗಲೂ ಭಾರತದ ನೆರವಿಗೆ ಕಟಿ ಬದ್ಧವಾಗಿರುವುದಾಗಿ ಹೇಳಿರುವುದು ಭಾರತೀ ಯರಾದ ನಮಗೆ ಶೋಭೆಯಲ್ಲವೇ ಎಂದು ಶ್ರೀನಿವಾಸ ಪೂಜಾರಿ ಹೇಳಿದರು.

ಇದೇ ಸಂದರ್ಭ ಗೋಷ್ಠಿಯಲ್ಲಿ ಭಾಗಿಯಾ ಗಿದ್ದ ಅನೇಕರು ಕೇಂದ್ರ ಸರ್ಕಾರದ ಹಿಂದಿನ ಆಡಳಿತ ಮತ್ತು ಮುಂಬರುವ ಸರ್ಕಾರ ಕೈಗೊ ಳ್ಳಬೇಕಾದ ಯೋಜನೆಗಳ ಬಗ್ಗೆ ಕೋಟಾ ಶ್ರೀನಿ ವಾಸ ಪೂಜಾರಿಯವರೊಂದಿಗೆ ಸಂವಾದ ನಡೆಸಿ ದರು. ರಾಮಜನ್ಮ ಭೂಮಿ ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣ ಏಕೆ ಕೈಗೂಡಲಿಲ್ಲ? ಎಂದು ಎ.ಎಸ್.ಕುಮಾರ್ ಪ್ರಶ್ನಿಸಿದರು. ಗುರು ಕುಲ ಮಾದರಿಯ ಶಿಕ್ಷಣ ವನ್ನು ಮೋದಿ ಸರ್ಕಾರದಲ್ಲಿ ನಿರೀಕ್ಷಿಸಿದ್ದೆವು. ಆದರೆ ಏಕೆ ಕೈಗೂಡಲಿಲ್ಲ ಮುಂಬರುವ ಅವಧಿಯಲ್ಲಾದರೂ ಕೇಂದ್ರ ಸರ್ಕಾರ ಇದನ್ನು ಪಾಲಿಸಲಿ ಎಂದು ಬಿ.ಅಮೃತರಾಜು ಹೇಳಿದರು.

ಕೇಂದ್ರ ಸರ್ಕಾರದ ಸಾಧನೆಗಳ ಕುರಿತು ಜನರ ಮನ ಮುಟ್ಡುವಲ್ಲಿ ಪ್ರಚಾರ ಪಡಿಸುವಲ್ಲಿ ಕಾರ್ಯ ಕರ್ತರು ವಿಫಲರಾಗಿದ್ದಾರೆ ಎಂದು ನಿವೃತ್ತ ಶಿಕ್ಷಕರೊಬ್ಬರು ಹೇಳಿದರು.
ಕಪ್ಪು ಹಣ ವಾಪಸ್ ತರ್ತೇವೆ ಎಂದಿದ್ದರು ಮೋದಿ. ಬ್ಯಾಂಕ್ ಖಾತೆಗೆ ನೇರವಾಗಿ ಹಣ ಹಾಕ್ತೇವೆ ಅಂತಲೂ ಹೇಳಿದ್ದರು ಏನಾಯಿತು? ಗಂಗಾ ನದಿ ಮಾದರಿಯಲ್ಲಿ ಕಾವೇರಿ ನದಿಯನ್ನು ಕೂಡ ಶುದ್ಧೀಕರಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಎಂ.ಎನ್.ಮೂರ್ತಿ ಹಾಗು ಚಂದ್ರಮೊಹನ್ ಚರ್ಚಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಕ್ಷದ ಪ್ರಮುಖರಾದ ಕುಮಾ ರಪ್ಪ, ರಾಬಿನ್ ದೇವಯ್ಯ ಇದ್ದರು.

Translate »