ಯುವಕ ಅನುಮಾನಾಸ್ಪದ ಸಾವು
ಹಾಸನ

ಯುವಕ ಅನುಮಾನಾಸ್ಪದ ಸಾವು

March 20, 2019

ಹಾಸನ: ಹಾಸನದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ಎನ್‍ಟಿಸಿಯಲ್ಲಿ ಕೆಲಸ ಮಾಡುವ ಯುವಕನೋರ್ವ ರೈಲು ಹಳಿ ಮೇಲೆ ಅನುಮಾನ ಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಂಗರಹಳ್ಳಿಯಲ್ಲಿ ನಡೆದಿದೆ.

ಹೊಳೆನರಸೀಪುರ ತಾಲೂಕು ಹನುಮನಹಳ್ಳಿ ಗ್ರಾಮದ ನಿವಾಸಿ ರಘು ಸಾವನ್ನಪ್ಪಿರುವ ಯುವಕ. ಈಗಾಗಲೇ ಹಾಸನ ತಾಲೂಕಿನ ಮಿನರ್ವ ಮಿಲ್ ಕಾರ್ಮಿಕರು ಕಳೆದ ಹಲವಾರು ದಿನದಿಂದ ಪ್ರತಿಭಟನಾ ಧರಣಿ ನಡೆಸುತ್ತಿದ್ದು, ಈ ಯುವಕನೂ ಪಾಲ್ಗೊಂಡಿದ್ದನು. ಸೋಮವಾರ ತನ್ನ ಹೀರೋ ಹೋಂಡ ಸ್ಪ್ಲೆಂಡರ್ ಬೈಕಿನಲ್ಲಿ ಬಂದಿದ್ದು, ರೈಲ್ವೆ ಹಳಿ ಬಳಿ ನಿಲ್ಲಿಸಿ ರೈಲು ಬರುವ ವೇಳೆ ತಲೆ ಕೊಟ್ಟಿರಬಹುದು ಎಂದು ಹೇಳಲಾಗಿದೆ. ರೈಲು ಈತನ ದೇಹದ ಮೇಲೆ ಹರಿದ ಪರಿಣಾಮ ದೇಹ ತುಂಡಾಗಿದೆ. ಈತ ಹೇಗೆ ಸಾವನ್ನಪ್ಪಿರಬಹುದು. ಇಲ್ಲ ಯಾರಾ ದರೂ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿರಬಹುದೇ ಎಂಬುದು ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರ ಬರಬೇಕಾಗಿದೆ.

Translate »