Tag: budget session

ಪಕ್ಷಗಳ ಕಚ್ಚಾಟ:ಮೊದಲ-ಕೊನೆ ಪುಟಕ್ಕೆ ರಾಜ್ಯಪಾಲರ ಭಾಷಣ ಮೊಟಕು
ಮೈಸೂರು

ಪಕ್ಷಗಳ ಕಚ್ಚಾಟ:ಮೊದಲ-ಕೊನೆ ಪುಟಕ್ಕೆ ರಾಜ್ಯಪಾಲರ ಭಾಷಣ ಮೊಟಕು

February 7, 2019

ವಿಧಾನ ಮಂಡಲ ಬಜೆಟ್ ಅಧಿವೇಶನ ಪ್ರಾರಂಭ ಬೆಂಗಳೂರು: ಮೈತ್ರಿ ಪಕ್ಷಗಳಲ್ಲಿನ ಆಂತರಿಕ ಕಚ್ಚಾಟ, ಆಪರೇಷನ್ ಕಮಲ, ಕಾಂಗ್ರೆಸ್ ಸದಸ್ಯ ರಿಂದಲೇ ಸರ್ಕಾರಕ್ಕೆ ಇರಿಸುಮುರಿಸು, ಗೋಜಲು, ಗೊಂದ ಲದ ನಡುವೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಳೆದ ಏಳು ತಿಂಗಳಲ್ಲಿ ನೀಡಿದ್ದ ಕೆಲವು ಜನಪರ ಯೋಜನೆಗಳು ಜನರ ಮನಸ್ಸಿಗೆ ನಾಟಿರಲಿಲ್ಲ. ಇಂತಹ ಕಾರ್ಯಕ್ರಮಗಳನ್ನು ರಾಜ್ಯಪಾಲ ವಜುಭಾಯ್ ವಾಲಾ ಇಂದು ವಿಧಾನಸಭೆಯಲ್ಲಿ ಬಿಂಬಿಸುವ ಕೆಲಸ ಮಾಡಿದರು. ಹೊಸ ವರ್ಷದ ಆರಂಭದಲ್ಲಿ ವಾಡಿಕೆಯಂತೆ ವಿಧಾನ ಮಂಡಲದ ಜಂಟಿ ಸದನಗಳನ್ನು ಉದ್ದೇಶಿಸಿ ಮಾತನಾಡಿದ ಅವರು,…

ಆದಾಯ ತೆರಿಗೆ ಮಿತಿ 5ಲಕ್ಷಕ್ಕೆ ಏರಿಕೆ
ಮೈಸೂರು

ಆದಾಯ ತೆರಿಗೆ ಮಿತಿ 5ಲಕ್ಷಕ್ಕೆ ಏರಿಕೆ

February 2, 2019

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ, ಮಧ್ಯಮ ವರ್ಗದವರು, ರೈತರು, ಮಹಿಳೆಯರು, ಅಸಂಘಟಿತ ವಲಯದ ಶ್ರಮಿಕರ ಓಲೈಕೆಗೆ 5 ವರ್ಷಗಳ ಆಡಳಿತದ ಕೊನೆಯ ಓವರ್‍ನಲ್ಲಿ ಭರ್ಜರಿ ಸಿಕ್ಸರ್‍ಗಳನ್ನೇ ಸಿಡಿಸಿದೆ. ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಿಸುವಂತೆ ಬಹಳ ಕಾಲದಿಂದ ಕೇಳುತ್ತಲೇ ಇದ್ದ ಮಧ್ಯಮ ವರ್ಗದವರಿಗೆ ಭರಪೂರ ಕೊಡುಗೆಯನ್ನೇ ನೀಡಲಾಗಿದೆ. ಅರುಣ್ ಜೇಟ್ಲಿ ಅವರಿಗೆ ಬದಲಿಯಾಗಿ ತಾತ್ಕಾಲಿಕವಾಗಿ ಕೇಂದ್ರ ಹಣಕಾಸು ಹೊಣೆ ಹೊತ್ತಿರುವ ಪಿಯೂಷ್ ಗೋಯಲ್ ಅವರು ಶುಕ್ರವಾರ ಮಂಡಿಸಿದ ಈ ಮಧ್ಯಂತರ ಬಜೆಟ್‍ನಲ್ಲಿ ಕೃಷಿ…

ಬಜೆಟ್ ಅಧಿವೇಶನಕ್ಕೆ ತೆರೆ, ಮುಂದಿನ ಅಧಿವೇಶನ  ಬೆಳಗಾವಿಗೆ ಶಿಫ್ಟ್
ಮೈಸೂರು

ಬಜೆಟ್ ಅಧಿವೇಶನಕ್ಕೆ ತೆರೆ, ಮುಂದಿನ ಅಧಿವೇಶನ  ಬೆಳಗಾವಿಗೆ ಶಿಫ್ಟ್

July 14, 2018

ಬೆಂಗಳೂರು: 11 ದಿನಗಳ ಬಜೆಟ್ ಅಧಿವೇಶನಕ್ಕೆ ಶುಕ್ರವಾರ ತೆರೆ ಬಿದ್ದಿದ್ದು, ಮುಂದಿನ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜುಲೈ 5ರಂದು ಮಂಡಿಸಿದ್ದ 2018-19ನೇ ಸಾಲಿನ ಬಜೆಟ್‍ಗೆ ಅಂಗೀಕಾರ, ರೈತರ ಸಾಲ ಮನ್ನಾ ಮೊತ್ತವನ್ನು 40 ಸಾವಿರ ಕೋಟಿ ರುಪಾಯಿಗೆ ಏರಿಕೆ ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ಅಧಿವೇಶನ ದಲ್ಲಿ ತೆಗೆದುಕೊಳ್ಳಲಾಗಿದೆ. ನಿನ್ನೆ ಬಿಜೆಪಿ ಸಭಾತ್ಯಾಗದ ಮಧ್ಯೆಯೇ ಕರ್ನಾಟಕ ಧನವಿನಿಯೋಗ ವಿಧೇಯಕ, ಮೋಟಾರು ವಾಹನಗಳ ತೆರಿಗೆ…

ಡಿಕೆಶಿಯಲ್ಲಿ ಇನ್ನು ಪವರ್ ಇದೆ…ರೇವಣ್ಣಗೆ ವಾಸ್ತು ಪ್ರಕಾರ ಮುಂದ್ಗಡೆ ಸೀಟ್…
ಮೈಸೂರು

ಡಿಕೆಶಿಯಲ್ಲಿ ಇನ್ನು ಪವರ್ ಇದೆ…ರೇವಣ್ಣಗೆ ವಾಸ್ತು ಪ್ರಕಾರ ಮುಂದ್ಗಡೆ ಸೀಟ್…

July 5, 2018

ಬೆಂಗಳೂರು: ವಿಧಾನ ಮಂಡಲ ಬಜೆಟ್ ಅಧಿವೇಶನದ 3ನೇ ದಿನವಾದ ಇಂದು ಹಲವಾರು ಸ್ವಾರಸ್ಯ ಕರ ಸನ್ನಿವೇಶಗಳು ಕಂಡುಬಂದವು. ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರು ತಮ್ಮ ಪಂಚಿಂಗ್ ಡೈಲಾಗ್ ಗಳು ಕೆಲವರನ್ನು ತಬ್ಬಿಬ್ಬಾಗಿಸಿದರೆ, ಉಳಿ ದವರನ್ನು ನಗೆಗಡಲಲ್ಲಿ ಮುಳುಗಿಸಿದವು. ಡಿಕೆಶಿ ಪವರ್ರು: ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸದನಕ್ಕೆ ತಡವಾಗಿ ಆಗಮಿಸಿದಾಗ `ಶಭಾಷ್, ಡಿ.ಕೆ.ಶಿವಕುಮಾರ್ ಅವರು ಕೊನೆಗೂ ಆಗಮಿಸಿದರು. ಅವರಿಗೆ ಸ್ವಾಗತ’ ಎಂದು ಛೇಡಿಸಿದರು. ಡಿ.ಕೆ.ಶಿವಕುಮಾರ್ ಅವರು ತಮ್ಮ ಆಸನದಲ್ಲಿ ಆಸೀನರಾಗುತ್ತಿದ್ದಂತೆಯೇ ಕರೆಂಟ್ ಬಂತು. ಆಗ `ಏನೇ ಆದರೂ…

ಖಾಸಗಿ ಸಾಲ ಮನ್ನಾ ಸಂಬಂಧ ಹಾಲಿ, ಮಾಜಿ ಸಿಎಂಗಳ ಜಟಾಪಟಿ
ಮೈಸೂರು

ಖಾಸಗಿ ಸಾಲ ಮನ್ನಾ ಸಂಬಂಧ ಹಾಲಿ, ಮಾಜಿ ಸಿಎಂಗಳ ಜಟಾಪಟಿ

July 4, 2018

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜು.5ರಂದು ಮಂಡಿಸಲಿರುವ ಬಜೆಟ್‍ನಲ್ಲಿ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಪ್ರಕಟಿಸಲಿದ್ದಾರೆ ಎಂಬ ನಿರೀಕ್ಷೆ ಬೆನ್ನಲ್ಲೇ ರೈತರ ಖಾಸಗಿ ಸಾಲ ಮನ್ನಾ ಬಗ್ಗೆ ವಿಧಾನಸಭೆಯಲ್ಲಿ ಇಂದು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಡುವೆ ಕಾವೇರಿದ ಚರ್ಚೆ ನಡೆಯಿತು. ಮುಖ್ಯಮಂತ್ರಿಗಳು ಚುನಾವಣೆಗೂ ಮುನ್ನ ರೈತರು ಖಾಸಗಿ ವ್ಯಕ್ತಿಗಳಿಂದ ಪಡೆದಿರುವ ಸಾಲವನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಧ್ಯ…

ಸೀರಿಯಸ್ ಚರ್ಚೆ ವೇಳೆ ಸಿಲ್ಲಿ ಥಿಂಗ್ಸ್…!
ಮೈಸೂರು

ಸೀರಿಯಸ್ ಚರ್ಚೆ ವೇಳೆ ಸಿಲ್ಲಿ ಥಿಂಗ್ಸ್…!

July 4, 2018

ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಸಾಲ ಮನ್ನಾ ವಿಚಾರವಾಗಿ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಡುವೆ ಜಟಾಪಟಿ ನಡೆಯುತ್ತಿದ್ದ ವೇಳೆ ಅದಕ್ಕೂ ತಮಗೂ ಸಂಬಂಧವೇ ಇಲ್ಲವೆಂಬಂತೆ ಶಾಸಕರು ಮೊಬೈಲ್ ವೀಕ್ಷಣೆ ತಲ್ಲೀನರಾಗಿದ್ದುದು ಕಂಡುಬಂತು. ರೈತರ ಸಾಲ ಮನ್ನಾ ವಿಚಾರದಲ್ಲಿ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಟಾಂಗ್ ನೀಡುತ್ತಿದ್ದರು. ಹೆಚ್.ಡಿ. ರೇವಣ್ಣ ಮಧ್ಯೆ ಎದ್ದು ನಿಂತರಾದರೂ, ಏನೂ ಮಾತನಾಡದೇ ಹಾಗೇ ಕುಳಿತುಕೊಂಡರು. ಮೊದಲ ಬಾರಿಗೆ ಶಾಸಕರಾಗಿರುವ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಅವರು ತಾವು ಭಾಗವಹಿಸಿರುವ ಚೊಚ್ಚಲ ಅಧಿವೇಶನದ…

ಇಂದು ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್ ಅಧಿವೇಶನ ಆರಂಭ
ಮೈಸೂರು

ಇಂದು ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್ ಅಧಿವೇಶನ ಆರಂಭ

July 2, 2018

 ಜು.12ರವರೆಗೆ ನಡೆಯಲಿರುವ ಅಧಿವೇಶನ ಜು.5ರಂದು ಬಜೆಟ್ ಮಂಡನೆ ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್ ಅಧಿವೇಶನ ನಾಳೆ (ಜು.2)ಯಿಂದ ಆರಂಭವಾಗಲಿದೆ. ಜು.12ರವರೆಗೆ ನಡೆಯಲಿರುವ ಈ ಅಧಿವೇಶನದಲ್ಲಿ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜು.5ರಂದು ಬಜೆಟ್ ಮಂಡಿಸಲಿದ್ದಾರೆ. ಈ ಅಧಿವೇಶನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಣ್ಣ, ಅತೀ ಸಣ್ಣ ಹಾಗೂ ಮಧ್ಯಮ ವರ್ಗದ ರೈತರು ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಮಾಡಿರುವ ಸಾಲವನ್ನು ಸಂಪೂರ್ಣವಾಗಿ ಮನ್ನಾ ಘೋಷಣೆ ಮಾಡಲಿದ್ದಾರೆ. ಒಟ್ಟು 53 ಸಾವಿರ ಕೋಟಿ ರೈತರ ಸಾಲ…

Translate »