Tag: Chamarajanagar

ಇಂದು ದೊಡ್ಡ ಗಣಪತಿ ಪ್ರತಿಷ್ಠಾಪನೆ
ಚಾಮರಾಜನಗರ

ಇಂದು ದೊಡ್ಡ ಗಣಪತಿ ಪ್ರತಿಷ್ಠಾಪನೆ

September 13, 2018

ಚಾಮರಾಜನಗರ: ಚಾಮರಾಜನಗ ರದಲ್ಲಿ 1962 ರಿಂದಲೂ ಅಸ್ಥಿ ತ್ವದಲ್ಲಿ ಇರುವ ಶ್ರೀವಿದ್ಯಾ ಗಣ ಪತಿ ಮಂಡಳಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ರಥದ ಬೀದಿಯಲ್ಲಿ ಗಣ ಪತಿಯನ್ನು ಪ್ರತಿಷ್ಠಾಪಿಸಲಿದೆ. ಸಿಂಹಾಸನದ ಮೇಲೆ ವಿರಾಜಮಾನ ರಾಗಿ ಕುಳಿತಿರುವ ದರ್ಬಾರ್ ಗಣಪತಿಯನ್ನು ಈ ವರ್ಷ ಪ್ರತಿಷ್ಠಾಪಿಸಲಾಗುವುದು. ಗಣೇಶ ಹಬ್ಬದ ದಿನವಾದ ಗುರುವಾರ ದರ್ಬಾರ್ ಗಣಪತಿಯನ್ನು ಕೂರಿಸಲು ಸಿದ್ಧತೆಗಳು ನಡೆ ದಿದೆ ಎಂದು ಗಣಪತಿ ಮಂಡಳಿ ಅಧ್ಯಕ್ಷ ಎಂ.ಜಿ.ಗಣೇಶ್ ತಿಳಿಸಿದ್ದಾರೆ. ಶ್ರೀ ವಿದ್ಯಾ ಗಣಪತಿ ಮಂಡಳಿಯು ಪ್ರತಿ ವರ್ಷವೂ ವಿಭಿನ್ನ…

ಚಾಮರಾಜನಗರ ಜಿಲ್ಲೆಯಲ್ಲೂ ನಾಡಹಬ್ಬ ದಸರಾ ಆಚರಣೆ
ಚಾಮರಾಜನಗರ

ಚಾಮರಾಜನಗರ ಜಿಲ್ಲೆಯಲ್ಲೂ ನಾಡಹಬ್ಬ ದಸರಾ ಆಚರಣೆ

September 12, 2018

ಚಾಮರಾಜನಗರ: ಇತಿಹಾಸ ಪ್ರಸಿದ್ಧ ನಾಡಹಬ್ಬ ದಸರಾ ಮಹೋತ್ಸವವನ್ನು ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲೂ ನಾಲ್ಕು ದಿನಗಳ ಕಾಲ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆಯಲ್ಲಿ ದಸರಾ ಮಹೋತ್ಸವ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಸರ್ಕಾರದ ನಿರ್ದೇಶನದ ಅನುಸಾರ ಚಾಮರಾಜನಗರ ನಗರದಲ್ಲೂ ನಾಲ್ಕು ದಿನಗಳ ಕಾಲ ದಸರಾ ಉತ್ಸವವನ್ನು ಆಯೋಜಿಸುವ ಸಂಬಂಧ ಚರ್ಚೆ ನಡೆಸಲಾಯಿತು. ನವರಾತ್ರಿ ಸಂದರ್ಭದಲ್ಲಿ…

ತೆಂಗಿನ ಮರದಿಂದ ಬಿದ್ದು ಕೂಲಿ ಕಾರ್ಮಿಕ ಸಾವು
ಚಾಮರಾಜನಗರ

ತೆಂಗಿನ ಮರದಿಂದ ಬಿದ್ದು ಕೂಲಿ ಕಾರ್ಮಿಕ ಸಾವು

September 12, 2018

ಚಾಮರಾಜನಗರ:  ಕಾಯಿ ಕೀಳಲು ತೆಂಗಿನಮರ ಹತ್ತಿದ್ದ ಕೂಲಿ ಕಾರ್ಮಿಕನೋರ್ವ ಆಕಸ್ಮಿಕವಾಗಿ ಬಿದ್ದು ಮೃತ ಪಟ್ಟಿರುವ ಘಟನೆ ತಾಲೂಕಿನ ವೆಂಕಟಯ್ಯನಛತ್ರ ಗ್ರಾಮದ ವಿ.ಸಿ.ಹೊಸೂರಿನಲ್ಲಿ ಮಂಗಳವಾರ ನಡೆದಿದೆ. ಚಾಮರಾಜನಗರ ತಾಲೂಕಿನ ಅಮಚವಾಡಿ ಗ್ರಾಮದ ಮಹದೇವಶೆಟ್ಟಿ (53) ಮೃತಪಟ್ಟ ಕೂಲಿ ಕಾರ್ಮಿಕ. ವಿ.ಸಿ. ಹೊಸೂರು ಗ್ರಾಮದ ರಾಜಣ್ಣ ಎಂಬುವರ ತೋಟಕ್ಕೆ ಕಾಯಿ ಕೀಳಲು ಮಹದೇವಶೆಟ್ಟಿ ತೆರಳಿದ್ದ. ಈ ವೇಳೆ ಮರ ಹತ್ತಿ ಕಾಯಿ ಕೀಳುವ ವೇಳೆ ಆಕಸ್ಮಿಕವಾಗಿ ಮರದಿಂದ ಬಿದ್ದು ತೀವ್ರವಾಗಿ ಗಾಯ ಗೊಂಡನು. ತಕ್ಷಣವೇ ತೋಟದ ಮಾಲೀಕ ರಾಜಣ್ಣ ಗಾಯಾಳು…

ಅತ್ಯಾಚಾರ ಆರೋಪಿಗೆ ಜಾಮೀನು ನಕಾರ
ಚಾಮರಾಜನಗರ

ಅತ್ಯಾಚಾರ ಆರೋಪಿಗೆ ಜಾಮೀನು ನಕಾರ

September 12, 2018

ಚಾಮರಾಜನಗರ:  ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಆರೋಪಿಗೆ ನಗರದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ತಿರಸ್ಕರಿಸಿದೆ. ಮಾಡ್ರಳ್ಳಿ ಗ್ರಾಮದ ಅಪ್ರಾಪ್ತ ಬಾಲಕಿಯನ್ನು ಅದೇ ಊರಿನ ಗೋಪಿ ಅಲಿಯಾಸ್ ಗೋಪಾ ಲಕೃಷ್ಣ ಎಂಬಾತ ಬಾಲಕಿಯನ್ನು ಪುಸಲಾ ಯಿಸಿ ಅಪಹರಿಸಿ ಅತ್ಯಾಚಾರ ಎಸಗಿದ್ದಾನೆಂದು ಬಾಲಕಿಯ ತಂದೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಫೋಕ್ಸೋ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳ ಲಾಗಿತ್ತು. ಆರೋಪಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ. ಈ ಜಾಮೀನು ಅರ್ಜಿ ಯನ್ನು ಪ್ರಧಾನ…

ಚಾಮರಾಜನಗರ ಜಿಲ್ಲೆಯಲ್ಲಿ ‘ಭಾರತ್ ಬಂದ್’ಗೆ ಉತ್ತಮ ಪ್ರತಿಕ್ರಿಯೆ
ಚಾಮರಾಜನಗರ

ಚಾಮರಾಜನಗರ ಜಿಲ್ಲೆಯಲ್ಲಿ ‘ಭಾರತ್ ಬಂದ್’ಗೆ ಉತ್ತಮ ಪ್ರತಿಕ್ರಿಯೆ

September 11, 2018

ಚಾಮರಾಜನಗರ: ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸೋಮವಾರ ಕರೆ ನೀಡಿದ ಭಾರತ್ ಬಂದ್‍ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಹಿನ್ನೆಲೆಯಲ್ಲಿ ಕೆಎಸ್‍ಆರ್‍ಟಿಸಿ ಹಾಗೂ ಖಾಸಗಿ ಬಸ್ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಹೊರ ರಾಜ್ಯದ ಹಾಗೂ ಗ್ರಾಮಾಂತರ ಪ್ರದೇಶದ ಪ್ರಯಾಣಿಕರು ಪರದಾಡುವಂತಾಯಿತು. ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಫೋಷಿಸಲಾಗಿತ್ತು. ಅಂಗಡಿ-ಮುಂಗಟ್ಟುಗಳು, ಹೊಟೇಲ್‍ಗಳು, ಚಿತ್ರಮಂದಿರಗಳು ಬಾಗಿಲು ಮುಚ್ಚಿದವು. ಪೆಟ್ರೋಲ್ ಬಂಕ್‍ಗಳು ಬಂದ್ ಆಗಿದ್ದ…

ಭಾರತ್ ಬಂದ್‍ಗೆ ತಾಲೂಕು ಕೇಂದ್ರಗಳಲ್ಲಿ ಬೆಂಬಲ
ಚಾಮರಾಜನಗರ

ಭಾರತ್ ಬಂದ್‍ಗೆ ತಾಲೂಕು ಕೇಂದ್ರಗಳಲ್ಲಿ ಬೆಂಬಲ

September 11, 2018

ಚಾಮರಾಜನಗರ:  ಭಾರತ್ ಬಂದ್‍ಗೆ ಜಿಲ್ಲೆಯ ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ, ಹನೂರು ಸೇರಿದಂತೆ ಇತರೆಡೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬಂದ್ ಹಿನ್ನೆಲೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಎಸ್‍ಡಿಪಿಐ ಹಾಗೂ ಬಿಎಸ್‍ಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಗುಂಡ್ಲುಪೇಟೆ ವರದಿ:ತೈಲ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಮತ್ತು ಎಡಪಕ್ಷಗಳು ಕರೆದಿದ್ದ ಭಾರತ್ ಬಂದ್‍ಗೆ ಪಟ್ಟಣ ಮತ್ತು ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಪಟ್ಟಣದಲ್ಲಿ ಬೆಳಿಗ್ಗೆಯಿಂದಲೇ ಅಂಗಡಿ-ಮುಂಗಟ್ಟು, ಸಾರಿಗೆ ಬಸ್, ಆಟೋ, ಟೆಂಪೆÇೀ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಕಾಂಗ್ರೆಸ್ ಮುಖಂಡ ಎಚ್.ಎಂ.ಗಣೇಶ್‍ಪ್ರಸಾದ್ ನೇತೃತ್ವದಲ್ಲಿ…

ಭಾರತ್ ಬಂದ್‍ಗೆ ಬೆಂಬಲ: ಇಂದು ಜಿಲ್ಲೆಯಲ್ಲೂ ಬಂದ್ ಆಚರಣೆ
ಚಾಮರಾಜನಗರ

ಭಾರತ್ ಬಂದ್‍ಗೆ ಬೆಂಬಲ: ಇಂದು ಜಿಲ್ಲೆಯಲ್ಲೂ ಬಂದ್ ಆಚರಣೆ

September 10, 2018

ಇಂದು ಶಾಲಾ-ಕಾಲೇಜುಗಳಿಗೆ ರಜೆ ಚಾಮರಾಜನಗರ:  ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ಅಗತ್ಯ ವಸ್ತುಗಳ ದರವನ್ನು ಕೇಂದ್ರದ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಏರಿಕೆ ಮಾಡಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷವು ನಾಳೆ (ಸೆ.10, ಸೋಮ ವಾರ) ಭಾರತ್ ಬಂದ್‍ಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಸಹ ಬಂದ್ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಭವನದಲ್ಲಿ ಭಾನುವಾರ ಕರೆದಿದ್ದ ತುರ್ತು ಪತ್ರಿಕಾ ಗೋಷ್ಟಿಯಲ್ಲಿ ಅವರು ಈ…

ಯಳಂದೂರಿನಲ್ಲಿ ಉಪಹಾರ ಸೇವಿಸಿದ ಮಕ್ಕಳು ಅಸ್ವಸ್ಥ ಪ್ರಕರಣ: ವಸತಿ ಶಾಲೆಗೆ ಗಿರಿಜನ ಕಲ್ಯಾಣಾಧಿಕಾರಿ ಭೇಟಿ, ಪರಿಶೀಲನೆ
ಚಾಮರಾಜನಗರ

ಯಳಂದೂರಿನಲ್ಲಿ ಉಪಹಾರ ಸೇವಿಸಿದ ಮಕ್ಕಳು ಅಸ್ವಸ್ಥ ಪ್ರಕರಣ: ವಸತಿ ಶಾಲೆಗೆ ಗಿರಿಜನ ಕಲ್ಯಾಣಾಧಿಕಾರಿ ಭೇಟಿ, ಪರಿಶೀಲನೆ

September 10, 2018

ಯಳಂದೂರು: ಮೆಲ್ಲಹಳ್ಳಿ ಗೇಟ್ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ಹೆಣ್ಣು ಮಕ್ಕಳ ವಸತಿ ಶಾಲೆಗೆ ಜಿಲ್ಲಾ ಗಿರಿಜನ ಕಲ್ಯಾಣಾಧಿಕಾರಿ ಕೃಷ್ಣಪ್ಪ ಬೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ ಬಳಿಕ ವಿದ್ಯಾರ್ಥಿಗಳ ಜತೆಯಲ್ಲಿ ಭಾನುವಾರ ಉಪಹಾರ ಸೇವಿಸಿದರು. ಶನಿವಾರವಷ್ಟೇ ಸುಮಾರು 42 ವಿದ್ಯಾರ್ಥಿಗಳು ಬೆಳಿಗ್ಗೆ ತಿಂಡಿ ತಿಂದು ಮಕ್ಕಳು ಅಸ್ವಸ್ಥರಾಗಿ ಯಳಂದೂರು ಸಾರ್ವಜನಿಕರ ಆಸ್ಪತ್ರೆ ಮತ್ತು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಈ ಹಿನ್ನಲೆಯಲಿ ವಸತಿ ಶಾಲೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಬೇಟಿ ನೀಡಿ ಉಪಹಾರವನ್ನು…

ಪೌಷ್ಠಿಕ ಆಹಾರ ಸೇವನೆಯಿಂದ ಆರೋಗ್ಯ ಉತ್ತಮ
ಚಾಮರಾಜನಗರ

ಪೌಷ್ಠಿಕ ಆಹಾರ ಸೇವನೆಯಿಂದ ಆರೋಗ್ಯ ಉತ್ತಮ

September 10, 2018

ಚಾಮರಾಜನಗರ: ಪೌಷ್ಠಿಕ ಆಹಾ ರಗಳನ್ನು ಸೇವಿಸುವುದರಿಂದ ಆರೋ ಗ್ಯವು ಉತ್ತಮವಾಗಿರುತ್ತದೆ. ಜೊತೆಗೆ ರೋಗಗಳಿಂದ ದೂರವಿರಬಹುದು ಎಂದು ಚಾಮರಾಜನಗರ ಜಿಲ್ಲಾ ಕಾನೂನು ಸೇವೆ ಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ ತಿಳಿಸಿದರು. ನಗರದ ಸರ್ಕಾರಿ ಮೆಟ್ರಿಕ್ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ “ವಿಶ್ವ ಪೌಷ್ಠಿಕತೆ ವಾರ” ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರತಿಯೊಬ್ಬ ಮನುಷ್ಯನಿಗೆ…

ಎಸ್‍ಸಿವಿಟಿ ಪರೀಕ್ಷೆ: ನಿಷೇಧಾಜ್ಞೆ
ಚಾಮರಾಜನಗರ

ಎಸ್‍ಸಿವಿಟಿ ಪರೀಕ್ಷೆ: ನಿಷೇಧಾಜ್ಞೆ

September 10, 2018

ಚಾಮರಾಜನಗರ: ಎಸ್‍ಸಿವಿಟಿ ಪರೀಕ್ಷೆ ಸಂಬಂಧ ಮರಿಯಾಲದ ಜೆಎಸ್‍ಎಸ್ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೆಪ್ಟೆಂಬರ್ 10 ರಿಂದ 14 ರವರೆಗೆ ಥಿಯರಿ ಪರೀಕ್ಷೆಗಳು ಮತ್ತು ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೆಪ್ಟೆಂಬರ್ 15 ರಿಂದ 18 ರವರೆಗೆ ಪ್ರಾಯೋಗಿಕ ಪರೀಕ್ಷೆಗಳು ನಡೆ ಯಲಿದ್ದು, ಪರೀಕ್ಷಾ ಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿ ಪರೀಕ್ಷಾ ದಿನಗಳಂದು ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಆದೇಶ ಹೊರಡಿಸಿದ್ದಾರೆ. ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ 200 ಮೀ ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ಅಂಗಡಿಗಳನ್ನು ಬೆಳಿಗ್ಗೆ…

1 41 42 43 44 45 74
Translate »