ಭಾರತ್ ಬಂದ್‍ಗೆ ಬೆಂಬಲ: ಇಂದು ಜಿಲ್ಲೆಯಲ್ಲೂ ಬಂದ್ ಆಚರಣೆ
ಚಾಮರಾಜನಗರ

ಭಾರತ್ ಬಂದ್‍ಗೆ ಬೆಂಬಲ: ಇಂದು ಜಿಲ್ಲೆಯಲ್ಲೂ ಬಂದ್ ಆಚರಣೆ

September 10, 2018

ಇಂದು ಶಾಲಾ-ಕಾಲೇಜುಗಳಿಗೆ ರಜೆ
ಚಾಮರಾಜನಗರ:  ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ಅಗತ್ಯ ವಸ್ತುಗಳ ದರವನ್ನು ಕೇಂದ್ರದ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಏರಿಕೆ ಮಾಡಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷವು ನಾಳೆ (ಸೆ.10, ಸೋಮ ವಾರ) ಭಾರತ್ ಬಂದ್‍ಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಸಹ ಬಂದ್ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಭವನದಲ್ಲಿ ಭಾನುವಾರ ಕರೆದಿದ್ದ ತುರ್ತು ಪತ್ರಿಕಾ ಗೋಷ್ಟಿಯಲ್ಲಿ ಅವರು ಈ ವಿಷಯ ತಿಳಿಸಿದರು.

ಜಿಲ್ಲಾ ಕೇಂದ್ರವಾದ ಚಾಮರಾಜನಗರ, ತಾಲೂಕು ಕೇಂದ್ರಗಳಾದ ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ, ಹನೂರಿ ನಲ್ಲಿ ಬಂದ್‍ಗೆ ಕಾಂಗ್ರೆಸ್ ಪಕ್ಷ ಕರೆ ನೀಡಿದೆ. ಬಿಎಸ್‍ಪಿ, ಎಸ್‍ಡಿಪಿಐ, ಖಾಸಗಿ ಬಸ್ ಮಾಲೀಕರ ಸಂಘ, ಪೆಟ್ರೋಲ್ ಬಂಕ್ ಮಾಲೀಕರು, ಚಿತ್ರ ಮಂದಿರದ ಮಾಲೀ ಕರು, ಕನ್ನಡ ಪರ ಸಂಘಟನೆಗಳು, ಅನೇಕ ಸಂಘ-ಸಂಸ್ಥೆಗಳು ಬಂದ್‍ಗೆ ಬೆಂಬಲ ನೀಡಿವೆ. ಜಿಲ್ಲೆಯ ನಾಗರಿಕರು ಬಂದ್‍ನ್ನು ಸಂಪೂರ್ಣವಾಗಿ ಬೆಂಬ ಲಿಸುವಂತೆ ಅವರು ಮನವಿ ಮಾಡಿದರು.

ಕೇಂದ್ರದ ಮೋದಿ ಸರ್ಕಾರವು ವಿಧಿಸಿ ರುವ ದೈತ್ಯಕಾರಾದ ತೆರಿಗೆಗಳ ಪರಿಣಾಮ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲಗಳ ಬೆಲೆಗಳು ಗಗನಕ್ಕೇರಿದೆ. ಜನ ಸಾಮಾನ್ಯರಿಂದ ಮೋದಿ ಸರ್ಕಾರವು ಕಳೆದ 52 ತಿಂಗಳಲ್ಲಿ ಸರಿ ಸುಮಾರು 11 ಲಕ್ಷ ಕೋಟಿ ರೂ.ಗಳ ತೆರಿಗೆಯನ್ನು ಸಂಗ್ರಹಿಸಿ, ಜನ ಸಾಮಾನ್ಯರನ್ನು ಘಾಸಿ ಗೊಳಿಸಿದೆ. ನಾಗರಿಕರ ದೈನಂದಿನ ಆಯವ್ಯಯ ಮತ್ತು ಕುಟುಂಬದ ವರ ಮಾನವನ್ನು ದುರ್ಬಲಗೊಳಿಸಿದೆ ಎಂದು ಸಚಿವ ಪುಟ್ಟರಂಗಶೆಟ್ಟಿ ಆಪಾದಿಸಿದರು.

2014 ಮೇ 16ರಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 1 ಬ್ಯಾರೆಲ್‍ಗೆ 107-09 ಡಾಲರ್ ಇದ್ದಿದ್ದು ಈಗ ಅದರ ಬೆಲೆ 73 ಡಾಲರ್‍ಗೆ ಇಳಿ ದಿದೆ. ಅಂದರೆ ಶೇ.40ರಷ್ಟು ಬೆಲೆ ಕಡಿಮೆ ಯಾದರೂ ಕೂಡ ಮೋದಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಸುತ್ತಲೇ ಬಂದಿದೆ ಎಂದು ಸಚಿವರು ಕಿಡಿಕಾರಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇದುವರೆವಿಗೆ 12 ಬಾರಿ ಕೇಂದ್ರ ಅಬಕಾರಿ ತೆರಿಗೆಯನ್ನು ಏರಿಸಿದೆ. ಇದ ರಿಂದಾಗಿ ಜನ ಸಾಮಾನ್ಯರು ಬಳಸುವ ಗೃಹೋಪಯೋಗಿ ಸರಕುಗಳ ಬೆಲೆ ಏರಿದೆ. ಸಾಮಾನ್ಯ ಜನರ ಜೀವನ ಇದ ರಿಂದ ತತ್ತರಿಸಿದೆ. ಆದರೆ ಮೋದಿ ಸರ್ಕಾರಿ ಇದರ ಬಗ್ಗೆ ಗಮನ ಹರಿಸಿಲ್ಲ ಎಂದು ದೂರಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಬಂದ್ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಭುವನೇಶ್ವರಿ ವೃತ್ತದವರೆಗೆ ಪ್ರತಿಭಟನೆ ನಡೆಸ ಲಾಗುವುದು ಎಂದು ತಿಳಿಸಿದರು.
ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನ್ನ, ಮುಖಂಡ ಶ್ರೀಕಾಂತ್ ಸುದ್ದಿಗೋಷ್ಟಿಯಲ್ಲಿ ಹಾಜರಿದ್ದರು.

ಬಂದ್‍ಗೆ ಬೆಂಬಲ ಬೇಡ; ಬಿಜೆಪಿ
ಚಾಮರಾಜನಗರ: ಸೋಮವಾರದ ಭಾರತ ಬಂದ್‍ಗೆ ಸಹಕರಿಸ ದಂತೆ ಬಿಜೆಪಿ ಮನವಿ ಮಾಡಿದೆ. ತೈಲದರದ ವಿಚಾರವಾಗಿ ಬಂದ್‍ಗೆ ಕಾಂಗ್ರೆಸ್ ಕರೆ ನೀಡಿದ್ದು, ತಪ್ಪು ಮಾಹಿತಿಯನ್ನು ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಾಗಿರುವುದರಿಂದ ದೇಶದಲ್ಲಿ ತೈಲ ಬೆಲೆ ಹೆಚ್ಚಳವಾಗಿದೆ. ದೇಶದ ಆರ್ಥಿಕ ಸುಭದ್ರತೆಗೆ ಇದು ಅನಿವಾರ್ಯವಾಗಿದೆ ಎಂದು ಪಕ್ಷದ ಗ್ರಾಮಾಂತರ ಮಂಡಲ ಅಧ್ಯಕ್ಷ ಹೆಚ್.ಎಂ.ಬಸವಣ್ಣ, ನಗರ ಮಂಡಲ ಅಧ್ಯಕ್ಷ ಸುಂದರ್‍ರಾಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕರು ಕಾಂಗ್ರೆಸ್ ಗೊಂದಲದ ಹೇಳಿಕೆಗಳಿಗೆ ಕಿವಿಗೊಡದೆ ಪ್ರಸ್ತುತ ದೇಶದ ಪರಿಸ್ಥಿತಿಯ ಬಗ್ಗೆ ಯೋಚಿಸಬೇಕು. ಸೋಮವಾರದ ಬಂದ್‍ಗೆ ವಿವಿಧ ಸಂಘಟನೆಗಳು, ವರ್ತಕರು, ಬಸ್ ಮಾಲೀಕರು, ಲಾರಿ ಮಾಲೀಕರು, ಆಟೋ ಮಾಲೀಕರು, ಕಾರು ಮಾಲೀಕರು, ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರು ಸಹಕರಿಸಬಾರದು ಎಂದು ಅವರು ಮನವಿ ಮಾಡಿದ್ದಾರೆ.

Translate »