ವಿದ್ಯಾರ್ಥಿಗಳ ಗುರಿ ಈಡೇರಿಸುವುದು ಶಿಕ್ಷಕರ ಕರ್ತವ್ಯ
ಕೊಡಗು

ವಿದ್ಯಾರ್ಥಿಗಳ ಗುರಿ ಈಡೇರಿಸುವುದು ಶಿಕ್ಷಕರ ಕರ್ತವ್ಯ

September 10, 2018

ವಿರಾಜಪೇಟೆ: ವಿದ್ಯಾರ್ಥಿಗಳ ಗುರಿಯನ್ನು ಈಡೇರಿಸುವುದು ಶಿಕ್ಷಕರಾದ ವರ ಕರ್ತವ್ಯ, ವಿದ್ಯಾರ್ಥಿಗಳು ಶ್ರದ್ಧೆ ಯಿಂದ ಕಲಿತು ತಮ್ಮ ಜೀವನವನ್ನು ರೂಪಿಸಿ ಕೊಳ್ಳುವಂತಾಗಬೇಕು ಎಂದು ವಿರಾಜ ಪೇಟೆ ಸರ್ವೋದಯ ವಿದ್ಯಾಲಯದ ಸಹ ಪ್ರಾಧ್ಯಾಪಕಿ ಎಂ.ವಾಣಿ ಹೇಳಿದರು.

ವಿರಾಜಪೇಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಇಕೋ ಕ್ಲಬ್ ಉದ್ಘಾಟನಾ ಸಮಾರಂಭ ಉದ್ಘಾಟಿಸಿದ ಎಂ.ವಾಣಿ, ತಮ್ಮ ಭಾಷಣದಲ್ಲಿ ಮಾನವನು ತನ್ನ ಬದುಕಿನಲ್ಲಿ ಸಮಾಜ ಸೇವೆಯಂ ತಹ ಉತ್ತಮ ಕೆಲಸವನ್ನು ಮಾಡಬೇಕು. ಜೀವನದಲ್ಲಿ ಎಲ್ಲಕ್ಕಿಂತ ಮಿಗಿಲಾದದ್ದು, ವಿದ್ಯಾರ್ಥಿಗಳು ಶಿಸ್ತು ಮತ್ತು ಛಲದಿಂದ ವಿದ್ಯೆ ಕಲಿತು ಉನ್ನತ ಹುದ್ದೆಗೆ ಏರು ವಂತಾಗಬೇಕು ಎಂದರು.

ಕಾಲೇಜು ಅಭಿವೃದ್ಧಿ ಸಮಿತಿಯ ಉಪಾ ಧ್ಯಕ್ಷ ಪಟ್ರಪಂಡ ರಘು ನಾಣಯ್ಯ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪಾಠ ದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯು ಭಾಗವಹಿ ಸುವುದರೊಂದಿಗೆ ಜೀವನದಲ್ಲಿ ಏನೇ ಅಡ ಚಣೆಗಳು ಬಂದರು ಶಿಕ್ಷಣವನ್ನು ಮುಂದು ವರಿಸುವ ಮೂಲಕ ಗುರಿ ಮುಟ್ಟುವಂತಾಗ ಬೇಕು. ಕೊಡಗಿನಲ್ಲಿ ಪ್ರಕೃತಿ ವಿಕೋಪದ ಸಂದರ್ಭ ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಮತ್ತು ಅರ್‍ಎಸ್‍ಎಸ್ ಕಾರ್ಯಕರ್ತರು ಮೊದಲು ಸಂತ್ರಸ್ತರಿಗೆ ನೆರವಾದರು ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಎನ್.ಕೆ. ಜ್ಯೋತಿ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲ್ಲನ್ನು ಕೆತ್ತಿ ಶಿಲೆಯನ್ನು ಮಾಡಿ ದಂತೆ ಶಿಕ್ಷಕರಾದವರು ವಿದ್ಯಾರ್ಥಿಗಳ ಮನ ಸನ್ನು ತಿದ್ದಿ ಅವರ ಮುಂದಿನ ಭವಿಷ್ಯವನ್ನು ರೂಪಿಸುವಂತಾಗಬೇಕು. ವಿದ್ಯಾರ್ಥಿ ಒಗ್ಗಟ್ಟಿ ನಿಂದ ಸಂಘದ ಚಟುವಟಿಕೆಗಳನ್ನು ಮಾಡ ಬೇಕು. ಅನೇಕ ವಿದ್ಯಾರ್ಥಿಗಳು ಮೊಬೈಲ್ ಫೋನ್‍ಗಳ ಮೊರೆಹೋಗುವುದರಿಂದ ಕಲಿಕೆಯಲ್ಲಿ ಹಿಂದೆ ಉಳಿದಿದ್ದಾರೆ. ಅದರಿಂದ ಪಾಠದ ಕಡೆಗೆ ಹೆಚ್ಚು ಗಮನ ಹರಿಸಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಹೇಳಿದರು.

ಉಪನ್ಯಾಸಕ ಅಂತೋಣಿ ಅಲ್ವಾರೀಸ್ ವಿದಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಲಾಭಿವೃದ್ಧಿ ಸಮಿತಿಯ ಆಶಾ ಸುಬ್ಬಯ್ಯ, ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ಎಂ.ದಿನೇಶ್ ಮಾತನಾಡಿದರು. ಉಪನ್ಯಾಸಕರಾದ ಚಾಲ್ರ್ಸ್ ಡಿಸೋಜ ಸ್ವಾಗತಿಸಿದರು. ಸಿ.ಯು.ರೋಸಿ ಅವರು ವರದಿ ಮಂಡಿಸಿದರು, ದತ್ತಿನಿಧಿ ಬಗ್ಗೆ ಪಿ.ಎ.ಸುಜಾತ ತಿಳಿಸಿದರು. ಸಿ.ಜಿ. ಬೀನಾ ನಿರೂಪಿಸಿದರೆ. ಕನ್ನಡ ಉಪನ್ಯಾಸ ಕರಾದ ಕೆ.ಬಿ.ಗೌರಿ ವಂದಿಸಿದರು.

Translate »