ಮಹಿಳೆ ಮೇಲೆ ಹಲ್ಲೆ ಯತ್ನ; ಆರೋಪಿಗಳ ಬಂಧನ
ಕೊಡಗು

ಮಹಿಳೆ ಮೇಲೆ ಹಲ್ಲೆ ಯತ್ನ; ಆರೋಪಿಗಳ ಬಂಧನ

September 10, 2018

ವಿರಾಜಪೇಟೆ: ವಿ.ಪೇಟೆ ಬಳಿಯ ಕಲ್ಲುಬಾಣೆಯ ಯುವಕರಿಬ್ಬರು ಅಲ್ಲಿನ ಮನೆ ಯೊಂದಕ್ಕೆ ನುಗ್ಗಿ ಮನೆಯ ಯಜಮಾನಿಯನ್ನು ಎಳೆದಾಡಿ ದಾಂಧಲೆ ನಡೆಸಿದ್ದು, ಈಗ ಪೊಲೀಸರ ಅತಿಥಿಯಾಗಿದ್ದಾರೆ. ಊಟ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭ ಅಲ್ಲಿನ ಸುಬ್ರಮಣಿ ಎಂಬುವರ ಪುತ್ರ ಪ್ರಕಾಶ್(27) ಹಾಗೂ ಶಿವಣ್ಣ ಎಂಬುವರ ಪುತ್ರ ಮಿಥನ್(17) ಎಂಬಿಬ್ಬರು ಆಮೀನಾ ಒಂಟಿಯಾಗಿರುವುದನ್ನು ತಿಳಿದು ಮನೆಯ ಒಳಗೆ ನುಗ್ಗಿ ಮಹಿಳೆಯನ್ನು ಎಳೆದಾಡಿ ಮಾನಭಂಗಕ್ಕೆ ಯತ್ನಿಸಿರುವುದಾಗಿ ವಿರಾಜಪೇಟೆ ನಗರ ಠಾಣೆ ಪೊಲೀಸರಿಗೆ ಆಮೀನಾ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಪ್ರಕಾಶ್ ಮತ್ತು ಮಿಥುನ್‍ನನ್ನು ಬಂಧಿಸಿದ್ದು, ಆರೋಪಿಗಳು ಗಾಂಜಾ ಸೇವಿಸಿದ್ದರೆನ್ನಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಆದೇಶಿಸಿರುವುದಾಗಿ ಡಿ.ವೈ.ಎಸ್.ಪಿ.ನಾಗಪ್ಪ ತಿಳಿಸಿದ್ದಾರೆ.

Translate »