ತೆಂಗಿನ ಮರದಿಂದ ಬಿದ್ದು ಕೂಲಿ ಕಾರ್ಮಿಕ ಸಾವು
ಚಾಮರಾಜನಗರ

ತೆಂಗಿನ ಮರದಿಂದ ಬಿದ್ದು ಕೂಲಿ ಕಾರ್ಮಿಕ ಸಾವು

September 12, 2018

ಚಾಮರಾಜನಗರ:  ಕಾಯಿ ಕೀಳಲು ತೆಂಗಿನಮರ ಹತ್ತಿದ್ದ ಕೂಲಿ ಕಾರ್ಮಿಕನೋರ್ವ ಆಕಸ್ಮಿಕವಾಗಿ ಬಿದ್ದು ಮೃತ ಪಟ್ಟಿರುವ ಘಟನೆ ತಾಲೂಕಿನ ವೆಂಕಟಯ್ಯನಛತ್ರ ಗ್ರಾಮದ ವಿ.ಸಿ.ಹೊಸೂರಿನಲ್ಲಿ ಮಂಗಳವಾರ ನಡೆದಿದೆ.

ಚಾಮರಾಜನಗರ ತಾಲೂಕಿನ ಅಮಚವಾಡಿ ಗ್ರಾಮದ ಮಹದೇವಶೆಟ್ಟಿ (53) ಮೃತಪಟ್ಟ ಕೂಲಿ ಕಾರ್ಮಿಕ. ವಿ.ಸಿ. ಹೊಸೂರು ಗ್ರಾಮದ ರಾಜಣ್ಣ ಎಂಬುವರ ತೋಟಕ್ಕೆ ಕಾಯಿ ಕೀಳಲು ಮಹದೇವಶೆಟ್ಟಿ ತೆರಳಿದ್ದ. ಈ ವೇಳೆ ಮರ ಹತ್ತಿ ಕಾಯಿ ಕೀಳುವ ವೇಳೆ ಆಕಸ್ಮಿಕವಾಗಿ ಮರದಿಂದ ಬಿದ್ದು ತೀವ್ರವಾಗಿ ಗಾಯ ಗೊಂಡನು. ತಕ್ಷಣವೇ ತೋಟದ ಮಾಲೀಕ ರಾಜಣ್ಣ ಗಾಯಾಳು ಮಹದೇವ ಶೆಟ್ಟಿಯನ್ನು ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಫಲಕಾರಿ ಆಗದೆ ಮಹದೇವಶೆಟ್ಟಿ ಮೃತಪಟ್ಟನು ಎಂದು ಪೊಲೀಸರು ತಿಳಿಸಿದ್ದಾರೆ. ಶವ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಈ ಸಂಬಂಧ ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »