ಚಾಮರಾಜನಗರ ಜಿಲ್ಲೆಯಲ್ಲೂ ನಾಡಹಬ್ಬ ದಸರಾ ಆಚರಣೆ
ಚಾಮರಾಜನಗರ

ಚಾಮರಾಜನಗರ ಜಿಲ್ಲೆಯಲ್ಲೂ ನಾಡಹಬ್ಬ ದಸರಾ ಆಚರಣೆ

September 12, 2018

ಚಾಮರಾಜನಗರ: ಇತಿಹಾಸ ಪ್ರಸಿದ್ಧ ನಾಡಹಬ್ಬ ದಸರಾ ಮಹೋತ್ಸವವನ್ನು ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲೂ ನಾಲ್ಕು ದಿನಗಳ ಕಾಲ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆಯಲ್ಲಿ ದಸರಾ ಮಹೋತ್ಸವ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಸರ್ಕಾರದ ನಿರ್ದೇಶನದ ಅನುಸಾರ ಚಾಮರಾಜನಗರ ನಗರದಲ್ಲೂ ನಾಲ್ಕು ದಿನಗಳ ಕಾಲ ದಸರಾ ಉತ್ಸವವನ್ನು ಆಯೋಜಿಸುವ ಸಂಬಂಧ ಚರ್ಚೆ ನಡೆಸಲಾಯಿತು. ನವರಾತ್ರಿ ಸಂದರ್ಭದಲ್ಲಿ ದಸರಾ ಏರ್ಪಡಿಸಲು ಸಭೆ ನಿರ್ಣಯಿಸಿತು.

ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಪ್ರತಿಬಾರಿಯಂತೆ ಈ ಬಾರಿ ಕೂಡ ಮೈಸೂರು ದಸರಾ ಮಹೋತ್ಸವವನ್ನು ಜಿಲ್ಲೆಗೂ ವಿಸ್ತರಿಸಲಾಗಿದೆ. ಈ ಹಿಂದೆ ನಡೆದ ಕಾರ್ಯಕ್ರಮಗಳಂತೆ ಹಾಗೂ ಸಮಿತಿಗಳ ತೀರ್ಮಾನದಂತೆ ಕಾರ್ಯ ನಿರ್ವಹಿಸಬೇಕು. ದಸರಾ ಸಿದ್ಧತೆಗೆ ಅಧಿಕಾರಿಗಳು ತೊಡಗಿಕೊಳ್ಳಬೇಕು ಎಂದರು.

ಈ ಹಿಂದೆ ಆಯೋಜಿಸಿದ ಮಾದರಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಇತರೆ ಸಿದ್ಧತೆಗಳು ನಡೆಯಬೇಕು. ಅರ್ಥ ಪೂರ್ಣ ದಸರಾ ಆಚರಣೆಗೆ ಅವಶ್ಯ ವಿರುವ ಏರ್ಪಾಡುಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಶಾಸಕರಾದ ಆರ್. ನರೇಂದ್ರ ಹಾಗೂ ಸಿ.ಎಸ್. ನಿರಂಜನಕುಮಾರ್ ಮಾತನಾಡಿ, ದಸರಾ ಆಚರಣೆಯನ್ನು ಅಚ್ಚುಕಟ್ಟಾಗಿ ಮಾಡಬೇಕು. ಸ್ಥಳೀಯ ಕಲಾವಿದರಿಗೂ ಅವಕಾಶ ನೀಡಿ ಹೆಚ್ಚು ಸಮಯ ಕಾರ್ಯ ಕ್ರಮ ನೀಡುವಂತಾಗಬೇಕು. ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ದಸರಾ ಮಹೋತ್ಸವ ನೆರವೇರಬೇಕು ಎಂದರು.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತ ನಾಡಿ, ದಸರಾ ಆಚರಣೆಗೆ ಅಗತ್ಯವಿರುವ ಸ್ವಾಗತ ಸಮಿತಿ, ಸಾಂಸ್ಕೃತಿಕ ಸಮಿತಿ, ಸ್ಥಳೀಯ ಕಲಾವಿದರ ಹಾಗೂ ರಾಜ್ಯ ಮಟ್ಟದ ಕಲಾ ವಿದರ ಆಯ್ಕೆ ಸಮಿತಿ, ವೇದಿಕೆ ಸಮಿತಿ, ಶಾಲಾ-ಕಾಲೇಜು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಆಯ್ಕೆ ಸಮಿತಿ ಕಾರ್ಯ ನಿರ್ವಹಣೆ ಮಾಡಲಿವೆ ಎಂದರು.

ದಸರಾ ಮಹೋತ್ಸವಕ್ಕೆ ಪೂರಕವಾಗಿ ಆಹಾರ ಸಮಿತಿ, ವೇದಿಕೆ, ಸ್ವಚ್ಛತೆ, ಆರೋಗ್ಯ, ಪ್ರಚಾರ, ಸಂಚಾರ ನಿಯಂತ್ರಣ ಮತ್ತು ಭದ್ರತಾ ಸಮಿತಿಗಳು ಕಾರ್ಯನಿರ್ವಹಿಸ ಬೇಕಿದೆ. ಕಾರ್ಯಕ್ರಮಗಳ ಆಯ್ಕೆ ಇತರೆ ಅವಶ್ಯ ಆಯೋಜನೆಗೆ ಕ್ರಮ ತೆಗೆದು ಕೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ತಿಳಿಸಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಮ್ಮ, ಉಪಾಧ್ಯಕ್ಷ ಜೆ.ಯೋಗೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೀತಾಪ್ರಸನ್ನ, ಉಪವಿಭಾ ಗಾಧಿಕಾರಿ ಫೌಜಿಯಾ ತರನ್ನುಮ್ ಇತರರು ಸಭೆಯಲ್ಲಿ ಹಾಜರಿದ್ದರು.

Translate »