ಪೌಷ್ಠಿಕ ಆಹಾರ ಸೇವನೆಯಿಂದ ಆರೋಗ್ಯ ಉತ್ತಮ
ಚಾಮರಾಜನಗರ

ಪೌಷ್ಠಿಕ ಆಹಾರ ಸೇವನೆಯಿಂದ ಆರೋಗ್ಯ ಉತ್ತಮ

September 10, 2018

ಚಾಮರಾಜನಗರ: ಪೌಷ್ಠಿಕ ಆಹಾ ರಗಳನ್ನು ಸೇವಿಸುವುದರಿಂದ ಆರೋ ಗ್ಯವು ಉತ್ತಮವಾಗಿರುತ್ತದೆ. ಜೊತೆಗೆ ರೋಗಗಳಿಂದ ದೂರವಿರಬಹುದು ಎಂದು ಚಾಮರಾಜನಗರ ಜಿಲ್ಲಾ ಕಾನೂನು ಸೇವೆ ಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ ತಿಳಿಸಿದರು.

ನಗರದ ಸರ್ಕಾರಿ ಮೆಟ್ರಿಕ್ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ “ವಿಶ್ವ ಪೌಷ್ಠಿಕತೆ ವಾರ” ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಪ್ರತಿಯೊಬ್ಬ ಮನುಷ್ಯನಿಗೆ ಪೌಷ್ಠಿಕ ಆಹಾರ ಅವಶ್ಯಕ, ಪೌಷ್ಠಿಕ ಅಹಾರವನ್ನು ಸೇವನೆ ಮಾಡುವುದರಿಂದ ಆರೋಗ್ಯವು ಉತ್ತಮ ವಾಗಿರುತ್ತದೆ. ಹದಿಹರೆಯದ ವಯಸ್ಸಿನಲ್ಲಿ ರಕ್ತದಕೊರತೆಗಳು ಕಂಡುಬರಲು ಸರಿ ಯಾದ ಸಮಯದಲ್ಲಿ ಆಹಾರ ಸ್ವೀಕರಿ ಸದೆ ಇರುವುದೇ ಕಾರಣ, ಸರಿಯಾದ ಸಮಯಕ್ಕೆ ಪೌಷ್ಠಿಕ ಆಹಾರಗಳನ್ನು ಪಡೆದು ಕೊಂಡರೆ ಆರೋಗ್ಯವಂತರಾಗಬಹುದು ಎಂದು ತಿಳಿಸಿದರು.

ರಾಜ್ಯ ಸರ್ಕಾರವೂ ಸರ್ಕಾರಿ ವಸತಿ ನಿಲ ಯಗಳಿಗೆ ಪೌಷ್ಠಿಕ ಆಹಾರಗಳಾದ ರಾಗಿ, ಅಕ್ಕಿ, ಗೋಧಿ, ಮೊಟ್ಟೆ, ಹಾಲು ಇನ್ನು ಮುಂತಾದ ಪದಾರ್ಥಗಳನ್ನು ನೀಡುತ್ತ ಬಂದಿದೆ. ವಿದ್ಯಾರ್ಥಿಗಳು ಇಂತಹ ಅಹಾರ ಗಳನ್ನು ಸೇವಿಸುವುದರಿಂದ ಪೌಷ್ಠಿಕತೆ ಹೆಚ್ಚುತದೆ ಎಂದು ವಿಶಾಲಾಕ್ಷಿ ತಿಳಿಸಿದರು.

ಮೆಡಿಕಲ್ ಕಾಲೇಜಿನ ಆಸಿಸ್ಟೆಂಟ್ ಪ್ರೊಫೆ ಸರ್ ಡಾ.ಗಿರೀಶ್ ಮಾತನಾಡಿ, ತರಕಾರಿ ಮತ್ತು ಸೊಪ್ಪುಗಳನ್ನು ತಿನ್ನುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಪೌಷ್ಠಿಕ ಆಹಾರಗಳನ್ನು ಸೇವಿಸುವುದ ರಿಂದ ಮನುಷ್ಯನ ದೇಹದಲ್ಲಿ ಕಬ್ಬಿಣದ ಅಂಶಗಳು ಹೆಚ್ಚು ಶಕ್ತಿವಂತರಾಗಬಹುದು. ಹಿಂದಿನ ಕಾಲದಲ್ಲಿ ರಾಗಿಮುದ್ದೆ, ಜೋಳದ ಮುದ್ದೆ, ಗೋಧಿರೋಟ್ಟಿ, ಇನ್ನು ಹಲ ವಾರು ಪೌಷ್ಠಿಕ ಅಹಾರವನ್ನು ಸೇವನೆ ಮಾಡುತ್ತಿದ್ದರು. ಈಗ ಗೋಬಿಮಂಜರಿ, ನ್ಯೂಡಲ್ಸ್ ಇಂತಹ ಅಹಾರಗಳನ್ನು ಸೇವಿ ಸುವವರು ಹೆಚ್ಚು ಜನರಿದ್ದಾರೆ ಇದರಿಂದ ಪೌಷ್ಠಿಕಾಂಶ ಸಿಗುವುದಿಲ್ಲ ಎಂದು ತಿಳಿಸಿದರು.

ಪ್ರತಿಯೊಬ್ಬ ವಿದ್ಯಾರ್ಥಿಗಳು ಬೆಳಗ್ಗೆ ಸಮಯಕ್ಕೆ ಸರಿಯಾಗಿ ತಿಂಡಿ ಮತ್ತು ಊಟವನ್ನು ಮಾಡಬೇಕು. ಇಲ್ಲದಿದ್ದರೆ ಗ್ಯಾಸ್ರ್ಟ್ಟಿಕ್ ನಿಮ್ಮನ್ನು ಆವರಿಸುತ್ತದೆ. ಇದ ರಿಂದ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಪ್ರತಿ ಆರು ತಿಂಗಳಿಗೊಂಮ್ಮೆ ಜಂತುಹುಳು ನಿವಾರಣೆ ಮಾತ್ರೆಯನ್ನು ಸೇವಿಸಬೇಕು. ಎಂದು ತಿಳಿಸಿದರು.

ಜಿಲ್ಲಾ ವಕೀಲ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯದರ್ಶಿ ಅರ್.ಅರುಣ್‍ಕುಮಾರ್, ಜಂಟಿ ಕಾರ್ಯ ದರ್ಶಿ ದಲಿತರಾಜು, ಜಿಲ್ಲಾ ಪ್ರಭಾರ ಅರೋಗ್ಯ ಇಲಾಖೆ ಶಿಕ್ಷಣಾಧಿಕಾರಿ ಡಾ. ನಾರಾಯಣಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಜಯಕಾಂತ, ಮೇಲ್ವಿಚಾರಕಿ ಶಿಶು ಅಭಿ ವೃದ್ಧಿ ಯೋಜನಾಧಿಕಾರಿ ಶಿವಲೀಲಾ, ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ಶಿವಮ್ಮ, ಬಾಲನ್ಯಾಯ ಮಂಡಲಿ ಸದಸ್ಯ ಸುರೇಶ್ ಹಾಗೂ ಇನ್ನು ಮುಂತಾದವರು ಹಾಜರಿದ್ದರು.

Translate »