ಗುಂಡ್ಲುಪೇಟೆ: ‘ಮಾಜಿ ಸಚಿವ ದಿ.ಮಹದೇವ ಪ್ರಸಾದ್ ಅವರು ಜೀವಿತ ಅವಧಿಯ ಉದ್ದಕ್ಕೂ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದರು’ ಎಂದು ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್ ಹೇಳಿದರು. ತಾಲೂಕಿನ ಬೇಗೂರಿನ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ದಿವಂಗತ ಎಚ್.ಎಸ್.ಮಹದೇವ ಪ್ರಸಾದ್ ಅವರ 60ನೇ ಹುಟ್ಟುಹಬ್ಬ ಆಚರಣೆ ಅಂಗವಾಗಿ ಎಸ್.ಎಲ್.ವಿ.ಗ್ರೂಪ್ಸ್ ಮಾಲೀಕ ಉದ್ಯಮಿ ಆರ್.ಯಶವಂತಕುಮಾರ್ ಆಯೋಜಿಸಿದ್ದ ಉಚಿತ ಕಣ್ಣು ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ನನ್ನ ಅಣ್ಣನ 60ನೇ ವರ್ಷದ ಹುಟ್ಟುಹಬ್ಬ ಆಚರಣೆ ವೇಳೆಯಲ್ಲಿ ಪ್ರತಿ ವರ್ಷವೂ ಕೂಡ ಅನೇಕ…
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
August 14, 2018ಚಾಮರಾಜನಗರ: ಖಾಯಂ ನೌಕರರನ್ನಾಗಿ ನೇಮಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಸೋಮವಾರ ಗ್ರಾಮ ಪಂಚಾಯಿತಿ ನೌಕರರು, ಅಕ್ಷರ ದಾಸೋಹ ಅಡುಗೆಯವರು, ಸಹಾಯಕಿ ಯರು ಹಾಗೂ ಕಂಪ್ಯೂಟರ್ ಆಪರೇ ಟರ್ಸ್‍ಗಳು ಪ್ರತಿಭಟನೆ ನಡೆಸಿದರು. ಹಳೇ ಖಾಸಗಿ ಬಸ್ ನಿಲ್ದಾಣದಿಂದ ಮೆರ ವಣಿಗೆ ಆರಂಭಿಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ ಭವನಕ್ಕೆ ತೆರಳಿ ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು. ಬಳಿಕ, ಯಳಂದೂರು ತಹಶೀಲ್ದಾರ್ ಚಂದ್ರ ಮೌಳಿ ಅವರಿಗೆ ಮನವಿ ಸಲ್ಲಿಸಿದರು. ನೋಟಿಫಿಕೇಷನ್ ನಂ.ಕೆಎಇ 152 ಎಲ್‍ಎಂಡಬ್ಲ್ಯು 2008, ಬೆಂಗಳೂರು ದಿನಾಂಕ…
ಬಂದೂಕು, ಶಸ್ತ್ರ ಠೇವಣಿ ಮಾಡಲು ಸೂಚನೆ
August 13, 2018ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಹಾಗೂ ಕೊಳ್ಳೇಗಾಲ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಪಟ್ಟಣ ವ್ಯಾಪ್ತಿಯ ಎಲ್ಲಾ ಶಸ್ತ್ರ ಬಂದೂಕು ಪರವಾನಗಿ ದಾರರು ಶಸ್ತ್ರ ಬಂದೂಕುಗಳನ್ನು ಸಂಬಂಧಪಟ್ಟ ವ್ಯಾಪ್ತಿ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡುವಂತೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಆದೇಶಿಸಿದ್ದಾರೆ. ಚುನಾವಣಾ ಘೋಷಿತ ಪ್ರದೇಶದಲ್ಲಿ ಹೊರಗಿನ ಅಥವಾ ಯಾವುದೇ ವ್ಯಕ್ತಿಗಳು ಶಸ್ತ್ರ ಬಂದೂಕುಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಈ ಆದೇಶವು ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವ ಸೆ.3ರವರೆಗೂ ಜಾರಿಯಲ್ಲಿರುತ್ತದೆ. ಸದರಿ ಆದೇಶವನ್ನು ಉಲ್ಲಂಘಿಸಿದಲ್ಲಿ ಆಮ್ರ್ಸ್ ಆಕ್ಟ್ 1959ರ ರೀತ್ಯಾ ಕಾನೂನು ಕ್ರಮ…
ನಾಳೆ ನಗರದಲ್ಲಿ ಕೇಂದ್ರಿಯ ವಿದ್ಯಾಲಯ ಲೋಕಾರ್ಪಣೆ
August 12, 2018ಚಾಮರಾಜನಗರ: ತಾಲೂಕಿನ ಮಾದಾಪುರ ಗ್ರಾಮದ ಬಳಿ 16 ಕೋಟಿ ರೂ. ವೆಚ್ಚದಡಿ ನಿರ್ಮಾಣ ಮಾಡಿರುವ ಕೇಂದ್ರಿಯ ವಿದ್ಯಾಲಯ ಆ. 13ರ ಮಧ್ಯಾಹ್ನ 12 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ. ಉದ್ಘಾಟನೆ ಸಂಪೂರ್ಣ ಸಜ್ಜುಗೊಂಡಿರುವ ಕೇಂದ್ರಿಯ ವಿದ್ಯಾಲಯ ಕಟ್ಟಡ ವನ್ನು ಪರಿಶೀಲಿಸಿದ ನಂತರ ಕೇಂದ್ರ ದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಸಂಸದ ಆರ್.ಧ್ರುವನಾರಾಯಣ ಈ ಬಗ್ಗೆ ಮಾಹಿತಿ ನೀಡಿದರು. ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಸಂಸತ್ತಿನ ವ್ಯವಹಾರಗಳ ಕೇಂದ್ರ ಸಚಿವ ಅನಂತ್‍ಕುಮಾರ್ ನೂತನ ಶಾಲಾ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ…
ನಾಳೆ ಚಾ.ನಗರದಲ್ಲಿ ಪ್ರಥಮ ಜಿಲ್ಲಾ ಬ್ರಾಹ್ಮಣ ಸಮ್ಮೇಳನ
August 11, 2018ಚಾಮರಾಜನಗರ: ಜಿಲ್ಲಾ ಬ್ರಾಹ್ಮಣ ಸಂಘದ ಆಶ್ರಯದಲ್ಲಿ ಆಗಸ್ಟ್ 12ರ ಭಾನುವಾರದಂದು ನಗರದ ನಂದಿ ಭವನದಲ್ಲಿ ‘ಪ್ರಥಮ ಜಿಲ್ಲಾ ಬ್ರಾಹ್ಮಣ ಸಮ್ಮೇಳನ’ ನಡೆಯಲಿದೆ. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಜೆ.ಎಂ.ಹೆಗಡೆ ಈ ವಿಷಯ ತಿಳಿಸಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲಾ ವಿಪ್ರ ಬಂಧುಗಳನು ಒಂದೆಡೆಗೆ ಸೇರಿಸುವುದು. ಪರಸ್ಪರ ವಿಶ್ವಾಸ, ಸೌಹಾ ರ್ದಯುತ ಬಾಂಧವ್ಯ ವೃದ್ಧಿ, ಸಂಘಟನೆ ಹಾಗೂ ಸ್ವಾವಲಂಬನೆಯ ದೃಷ್ಟಿಯಿಂದ ಸಮ್ಮೇಳನ…
ಬಡತನ ಬೇಗೆ ತಾಳದೆ ಯುವತಿ ಆತ್ಮಹತ್ಯೆ
August 11, 2018ಹನೂರು: ಬಡತನ ಬೇಗೆ ತಾಳಲಾರದೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಲೈಮಹದೇಶ್ವರ ಬೆಟ್ಟದಿಂದ ವರದಿಯಾಗಿದೆ. ಹನೂರು ತಾಲೂಕಿನ ಮಲೈಮಹದೇಶ್ವರ ಬೆಟ್ಟದ ಯುವತಿ ಪವಿತ್ರ (19 ವರ್ಷ) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಘಟನೆ ವಿವರ: ಮಲೈಮಹದೇಶ್ವರ ಬೆಟ್ಟದ ದೀಪದ ಒಡ್ಡು ಬಳಿ ಬರುವ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಯುವತಿ ಮನೆಯಲ್ಲಿದ್ದ ಕಬ್ಬಿಣದ ರಾಡ್‍ಗೆ ನೇಣು ಹಾಕಿಕಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಮೃತಳಿಗೆ ತಂದೆ ಇಲ್ಲ ತಾಯಿ ಆಶ್ರಯದಲ್ಲಿ ಮೂವರು ಹೆಣ್ಣು ಮಕ್ಕಳು…
ಲೋಕಸಭಾ ಚುನಾವಣೆಗೂ ಮುನ್ನವೇ ರಾಜ್ಯ ಸರ್ಕಾರ ಪತನ : ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಭವಿಷ್ಯ
August 10, 2018ಚಾಮರಾಜನಗರ: ಮುಂಬರುವ ಲೋಕಸಭಾ ಚುನಾವ ಣೆಗೂ ಮುನ್ನವೇ ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂದು ಮಾಜಿ ಮುಖ್ಯ ಮಂತ್ರಿ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಭವನದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಜನ ಸಾಮಾನ್ಯರಿಗೆ ಭಾರ ಆಗಿದೆ. ಆಡಳಿತ ವೈಫಲ್ಯವಾಗಿದೆ, ಆಡಳಿತ ಕೇಂದ್ರ ವಿಧಾನ ಸೌಧದಲ್ಲಿ ವರ್ಗಾವಣೆ ದಂಧೆ ವಿಪರೀತ ವಾಗಿದೆ. ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಇಷ್ಟು…
ಮೋದಿಯನ್ನು ವಿಶ್ವವೇ ಒಪ್ಪುತ್ತದೆ… ಸಿದ್ದರಾಮಯ್ಯ, ಪಾಕಿಸ್ತಾನ ಒಪ್ಪುವುದಿಲ್ಲ
August 10, 2018ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಡೀ ವಿಶ್ವವೇ ಒಪ್ಪುತ್ತದೆ. ಆದರೆ ಸಿದ್ದರಾಮಯ್ಯ ಮತ್ತು ಪಾಕಿಸ್ತಾನ ಮಾತ್ರ ಒಪ್ಪುವುದಿಲ್ಲ. ದೇಶದ ಪ್ರಧಾನಿ ಆಗಿರುವ ನರೇಂದ್ರ ಮೋದಿ ಅವರು, ದೇಶದ ರಕ್ಷಣೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಪಾಕಿಸ್ತಾನದ ಗೂಂಡಾವರ್ತನೆಗೆ ಸರಿಯಾದ ರೀತಿಯಲ್ಲಿಯೇ ಉತ್ತರ ಕೊಡುತ್ತಿದ್ದಾರೆ. ದೇಶದ ಪ್ರತಿಯೊಬ್ಬ ಸೈನಿಕನಿಗೂ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ. ಎಲ್ಲರೊಂದಿಗೆ ಪ್ರೀತಿ-ವಿಶ್ವಾಸದಿಂದ ಇಂದು ಭಾರತದ ಗೌರವವನ್ನು ಪ್ರಪಂಚಕ್ಕೆ ಕೊಂಡೊಯ್ದಿದ್ದಾರೆ. ಇಡೀ ವಿಶ್ವವೇ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳುತ್ತಿದೆ. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ…
‘ಗಂಡ ಸತ್ತ ಹೆಂಡತಿ, ಹೆಂಡತಿ ಸತ್ತ ಗಂಡನ ಕೂಡಾವಳಿಯಂತೆ ಸರ್ಕಾರ’
August 10, 2018ಚಾಮರಾಜನಗರ: ಗಂಡ ಸತ್ತ ಹೆಂಡತಿ, ಹೆಂಡತಿ ಸತ್ತ ಗಂಡ ಕೂಡಾವಳಿ ಮಾಡಿಕೊಂಡು ಜೀವನ ನಡೆಸುವಂತೆ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಕೂಡಾವಳಿ ಮಾಡಿಕೊಂಡಿವೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು. ನಗರದ ನಂದಿ ಭವನದಲ್ಲಿ ಗುರುವಾರ ನಡೆದ ಪಕ್ಷದ ಶಕ್ತಿ ಕೇಂದ್ರದ ಮೇಲ್ಪಟ್ಟ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹೆಂಡತಿ ಸತ್ತ ಗಂಡ, ಗಂಡ ಸತ್ತ ಹೆಂಡತಿ ಕೂಡಿಕೊಂಡು ಜೀವನ ನಡೆಸುವಂತೆ ಜೆಡಿಎಸ್-ಕಾಂಗ್ರೆಸ್ ಕೂಡಿಕೊಂಡು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಈ ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲ. ರಾಜ್ಯದ…
ಜಿಲ್ಲಾಸ್ಪತ್ರೆಗೆ ಎಂಸಿಐ ಅಧಿಕಾರಿಗಳ ತಂಡ ಭೇಟಿ
August 10, 2018ಚಾಮರಾಜನಗರ: ನಗರದ ಮೆಡಿಕಲ್ ಕಾಲೇಜಿಗೆ ಮುಂದಿನ ವರ್ಷದ ಪ್ರವೇಶಾತಿಗೆ ಅನುಮತಿ ನೀಡುವ ಹಿನ್ನಲೆಯಲ್ಲಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ)ದ ಮೂರು ಜನರ ತಂಡ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗುರುವಾರ ಪರಿಶೀಲಿಸಿತು. ದೆಹಲಿಯಿಂದ ಆಗಮಿಸಿದ್ದ ಎಂಸಿಐ ಮೂವರು ಅಧಿಕಾರಿಗಳ ತಂಡ, ಜಿಲ್ಲಾ ಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ, ಐಸಿಯು, ವಾರ್ಡ್‍ಗಳು ಹಾಗೂ ಆಸ್ಪತ್ರೆಯ ಎಲ್ಲಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿತು. ನಂತರ ಯಡಬೆಟ್ಟದ ತಪ್ಪಲಿನಲ್ಲಿ ಇರುವ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿತು….