ಬಡತನ ಬೇಗೆ ತಾಳದೆ ಯುವತಿ ಆತ್ಮಹತ್ಯೆ
ಚಾಮರಾಜನಗರ

ಬಡತನ ಬೇಗೆ ತಾಳದೆ ಯುವತಿ ಆತ್ಮಹತ್ಯೆ

August 11, 2018

ಹನೂರು:  ಬಡತನ ಬೇಗೆ ತಾಳಲಾರದೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಲೈಮಹದೇಶ್ವರ ಬೆಟ್ಟದಿಂದ ವರದಿಯಾಗಿದೆ.

ಹನೂರು ತಾಲೂಕಿನ ಮಲೈಮಹದೇಶ್ವರ ಬೆಟ್ಟದ ಯುವತಿ ಪವಿತ್ರ (19 ವರ್ಷ) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ.

ಘಟನೆ ವಿವರ: ಮಲೈಮಹದೇಶ್ವರ ಬೆಟ್ಟದ ದೀಪದ ಒಡ್ಡು ಬಳಿ ಬರುವ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಯುವತಿ ಮನೆಯಲ್ಲಿದ್ದ ಕಬ್ಬಿಣದ ರಾಡ್‍ಗೆ ನೇಣು ಹಾಕಿಕಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈ ಸಂಬಂಧ ಮೃತಳಿಗೆ ತಂದೆ ಇಲ್ಲ ತಾಯಿ ಆಶ್ರಯದಲ್ಲಿ ಮೂವರು ಹೆಣ್ಣು ಮಕ್ಕಳು ಬೆಳೆಯುತ್ತಿದ್ದು, ಅದರಲ್ಲಿ ಮೊದಲನೆ ಪುತ್ರಿಯಾಗಿದ್ದ ಈಕೆ ಯಾವುದೇ ಕೆಲಸ ಇಲ್ಲದೆ ಬಡತನ ಬೇಗೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ತಾಯಿ ಜಯಲಕ್ಷ್ಮಿ ಮಲೈಮಹದೇಶ್ವರ ಠಾಣೆಯಲ್ಲಿ ದೂರು ನೀಡಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

Translate »