ಪರಿಸರ ಮಾಲಿನ್ಯದಿಂದ ಕಾಡಂಚಿನ ಜನರಿಗೆ ತೊಂದರೆ: ಅಂಬಾಡಿ ಮಾಧವ್
ಚಾಮರಾಜನಗರ

ಪರಿಸರ ಮಾಲಿನ್ಯದಿಂದ ಕಾಡಂಚಿನ ಜನರಿಗೆ ತೊಂದರೆ: ಅಂಬಾಡಿ ಮಾಧವ್

August 11, 2018

ಗುಂಡ್ಲುಪೇಟೆ:  ಆಧುನಿಕ ಜೀವನ ಶೈಲಿ ಹಾಗೂ ಕಲುಷಿತ ಪರಿ ಸರದಿಂದಾಗಿ ಕಾಡಂಚಿನ ಗ್ರಾಮಗಳ ಜನರು ಒಂದಲ್ಲಾ ಒಂದು ರೀತಿಯಲ್ಲಿ ತೊಂದರೆ ಗೊಳಗಾಗುತ್ತಿದ್ದಾರೆ ಎಂದು ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಅಂಬಾಡಿ ಮಾಧವ್ ಹೇಳಿದರು.

ತಾಲೂಕಿನ ಬಂಡೀಪುರದ ಸ್ವಾಗತ ಕಚೇರಿ ಯಲ್ಲಿ ಅರಣ್ಯ ಇಲಾಖೆ, ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘ, ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ಎನ್.ಎ.ಬಿ. ಮತ್ತು ಅರ ವಿಂದ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲರಿಗೂ ಕಣ್ಣು ಪ್ರಮುಖ ಅಂಗವಾಗಿ ದ್ದರೂ ಕಾಲ ಕಾಲಕ್ಕೆ ತಪಾಸಣೆ ಮಾಡಿಸಿ ಕೊಳ್ಳದೇ ನಿರ್ಲಕ್ಷ್ಯ ವಹಿಲಾಗುತ್ತಿದೆ. ಎಲ್ಲಾ ಆಸ್ಪತ್ರೆಗಳಲ್ಲಿಯೂ ಕಣ್ಣಿಗೆ ಸಂಬಂಧಿಸಿದ ವೈದ್ಯರ ಕೊರತೆಯಿಂದ ಸಕಾಲದಲ್ಲಿ ತೊಂದರೆ ಗುರುತಿಸಲಾಗದೆ ಬಹುತೇಕ ಜನರು ತಮ್ಮ ದೃಷ್ಠಿ ಯನ್ನು ಕಳೆದುಕೊಳ್ಳುವಂತಾಗಿದೆ ಎಂದರು.

ಸಂಘದ ಅಧ್ಯಕ್ಷ ರಾ.ಬಾಬುಪ್ರಸಾದ್ ಮಾತನಾಡಿ, ಸಂಘವು ಹಲವಾರು ವರ್ಷ ಗಳಿಂದ ಹಲವು ಶಿಬಿರಗಳನ್ನು ಆಯೋ ಜಿಸಿ ಬಡಜನತೆಗೆ ನೆರವಾಗುತ್ತಿದ್ದು ಸಮಾಜ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನ್ಯಾಷ ನಲ್ ಅಸೋಸಿಯೇಷನ್ ಆಫ್ ಬ್ಲೈಂಡ್ಸ್ ಸಂಸ್ಥೆಯ ಯೋಜನಾ ಸಂಯೋಜಕ ಕೆ.ರಮೇಶ್ ಮಾತನಾಡಿ, ತಮ್ಮ ಸಂಸ್ಥೆಯು ಅಂಧರಿಗೆ ಓದುವ, ಬರೆಯುವ ಕೆಲಸ ಮಾಡುವ ಜತೆಗೆ ಅವರನ್ನು ಸ್ವಾವಲಂಬಿಯಾಗಿ ಬದು ಕಲು ಶ್ರಮಿಸುತ್ತಿದೆ. 2002ರಿಂದ ಸುಮಾರು 350 ಶಿಬಿರಗಳನ್ನು ನಡೆಸಿ 25 ಸಾವಿರ ಕಣ್ಣಿನ ತೊಂದರೆಯಿದ್ದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಿದೆ ಎಂದರು.

ಅರವಿಂದ ಕಣ್ಣಿನ ಆಸ್ಪತ್ರೆಯ ವೈದ್ಯ ಡಾ.ಶಿವ ಪ್ರಸನ್ನ ಮಾತನಾಡಿ, ಕಲುಷಿತ ಪರಿಸರ ದಲ್ಲಿ ಬದುಕುತ್ತಿರುವ ಜನತೆಗೆ ಕಣ್ಣಿನ ಸಮಸ್ಯೆ ಗಳು ಎದುರಾಗುತ್ತಿದ್ದು, ಇದನ್ನು ಗಂಭೀರ ವಾಗಿ ಪರಿಗಣಿಸಿಲ್ಲ. ಸಕ್ಕರೆ ರೋಗದಿಂದ ಪೀಡಿತರಾದವರ ಕಣ್ಣಿನ ದೃಷ್ಠಿ ನಾಶವಾ ಗುವ ಸಂಭವವಿದ್ದು, ಕನಿಷ್ಟ ವರ್ಷಕ್ಕೆರಡು ಬಾರಿ ತಪಾಸಣೆ ಮಾಡಿಸಿಕೊಳ್ಳ ಬೇಕಾಗಿದೆ ಎಂದು ಸಲಹೆ ನೀಡಿದರು.
ಈ ಶಿಬಿರದಲ್ಲಿ ಸುಮಾರು 80ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಹಾಗೂ ಸಾರ್ವಜನಿಕರ ಕಣ್ಣಿನ ತಪಾಸಣೆ ನಡೆಸಲಾಯಿತು. ಅಗತ್ಯ ವಿದ್ದವರಿಗೆ ಅರಣ್ಯ ಇಲಾಖೆಯ ವತಿಯಿಂದ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬಂಡೀಪುರ ಆರ್‍ಎಫ್‍ಒ ಶ್ರೀನಿವಾಸನಾಯ್ಕ, ಅರ ವಿಂದ ಆಸ್ಪತ್ರೆಯ ಸಾರ್ವಜನಿಕ ಸಂಪ ರ್ಕಾಧಿಕಾರಿ ವಿಜಯ ಕಾಂತ್, ಸಂಘದ ನಿರ್ದೇಶಕರಾದ ಸೋಮ ಶೇಖರ್, ಮಹದೇವಸ್ವಾಮಿ, ವೀರಭದ್ರಪ್ಪ, ವೀರೇಂದ್ರ ಪ್ರಸಾದ್, ಮಹದೇವಪ್ರಸಾದ್, ಭೈರೇಶ್ ಗಾಣಿಗ್, ಮಹೇಂದ್ರ, ಕೃಷ್ಣ ಸೇರಿದಂತೆ ಹಲವರು ಇದ್ದರು.

Translate »