ನಾಳೆ ಚಾ.ನಗರದಲ್ಲಿ ಪ್ರಥಮ ಜಿಲ್ಲಾ ಬ್ರಾಹ್ಮಣ ಸಮ್ಮೇಳನ
ಚಾಮರಾಜನಗರ

ನಾಳೆ ಚಾ.ನಗರದಲ್ಲಿ ಪ್ರಥಮ ಜಿಲ್ಲಾ ಬ್ರಾಹ್ಮಣ ಸಮ್ಮೇಳನ

August 11, 2018

ಚಾಮರಾಜನಗರ:  ಜಿಲ್ಲಾ ಬ್ರಾಹ್ಮಣ ಸಂಘದ ಆಶ್ರಯದಲ್ಲಿ ಆಗಸ್ಟ್ 12ರ ಭಾನುವಾರದಂದು ನಗರದ ನಂದಿ ಭವನದಲ್ಲಿ ‘ಪ್ರಥಮ ಜಿಲ್ಲಾ ಬ್ರಾಹ್ಮಣ ಸಮ್ಮೇಳನ’ ನಡೆಯಲಿದೆ.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಜೆ.ಎಂ.ಹೆಗಡೆ ಈ ವಿಷಯ ತಿಳಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲಾ ವಿಪ್ರ ಬಂಧುಗಳನು ಒಂದೆಡೆಗೆ ಸೇರಿಸುವುದು. ಪರಸ್ಪರ ವಿಶ್ವಾಸ, ಸೌಹಾ ರ್ದಯುತ ಬಾಂಧವ್ಯ ವೃದ್ಧಿ, ಸಂಘಟನೆ ಹಾಗೂ ಸ್ವಾವಲಂಬನೆಯ ದೃಷ್ಟಿಯಿಂದ ಸಮ್ಮೇಳನ ಆಯೋಜಿಸಲಾಗಿದೆ. ವಿಪ್ರ ಸಮಾಜದವರು ಸಮಾಜದ ರಾಷ್ಟ್ರದ ಏಳಿ ಗೆಗೆ ತಮ್ಮ ಅನೇಕ ಸಮಸ್ಯೆಗಳ ನಡುವೆ ಅಪರಿಮಿತವಾಗಿ ದುಡಿಯುತ್ತಿದ್ದಾರೆ. ವಿಪ್ರರ ಸಂಘಟನೆ, ಪರಸ್ಪರ ಸಹಾಯ, ಸಹಕಾರ ಉದ್ದೇಶದಿಂದ ಸಮ್ಮೇಳನವನ್ನು ಏರ್ಪಡಿ ಸಲಾಗಿದೆ ಎಂದು ಅವರು ಹೇಳಿದರು.

ಸಮ್ಮೇಳನದ ಸರ್ವಾಧ್ಯಕ್ಷರಾಗಿ ವಿಪ್ರ ಸಮಾಜದ ಹಿರಿಯರಾದ ಕೋಟಂಬಳ್ಳಿ ನರಸಿಂಹಯ್ಯ ಸೂರ್ಯ ನಾರಾಯಣ್ ಅವರನ್ನು ಆಯ್ಕೆ ಮಾಡಲಾಗಿದೆ. ಸಮ್ಮೇ ಳನದ ವೇದಿಕೆಗೆ ನೇತಾಜಿ ಸುಭಾಷ್ ಚಂದ್ರ ಬೋಸ್‍ರವರ ಒಡನಾಡಿಗಳೂ, ದೇಶಭಕ್ತರೂ ಆದ ಗಟ್ಟವಾಡಿಯ ಐಎನ್‍ಎ ರಾಮರಾವ್‍ರವರ ಹೆಸರನ್ನು ಇಡಲಾ ಗಿದೆ. ಚಾಮರಾಜನಗರ ಜಿಲ್ಲೆಯಾಗಿ 21 ವರ್ಷಗಳ ನಂತರ ನಡೆಸುತ್ತಿರುವ ಈ ಪ್ರಥಮ ಬ್ರಾಹ್ಮಣ ಸಮ್ಮೇಳನವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ವೆಂಕಟನಾರಾಯಣ್ ಉದ್ಘಾಟಿಸಲಿದ್ದಾರೆ. ಪ್ರೊ.ಕೆ.ಇ.ರಾಧಾಕೃಷ್ಣ, ಡಾ.ಕೆ.ಪಿ.ಪುತ್ತೂರಾ ಯರು ವಿಚಾರ ಮಂಡಿಸಲಿದ್ದಾರೆ ಎಂದು ಜಿ.ಎಂ.ಹೆಗಡೆ ತಿಳಿಸಿದರು.

ಜಿಲ್ಲೆಯ ವಿಪ್ರ ಸಮಾಜದಲ್ಲಿ ಎಸ್‍ಎಸ್ ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುವುದು. ಹಾಗೂ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುವುದು ಎಂದರು.
ಶೋಭಾಯಾತ್ರೆ: ಸಮ್ಮೇಳನಕ್ಕೂ ಮುನ್ನ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ನಂದಿ ಭವನದವರೆಗೆ ಶೋಭಾ ಯಾತ್ರೆ ನಡೆಯಲಿದೆ. ಶ್ರೀ ವೇದ ಮಾತೆ ಗಾಯತ್ರಿ, ಆಚಾರ್ಯತ್ರಯರ ಭಾವ ಚಿತ್ರಕ್ಕೆ ಗೌರವ ಸಲ್ಲಿಸಿ ಸಮ್ಮೇಳನಾಧ್ಯಕ್ಷರು ಶೋಭಾ ಯಾತ್ರೆಯಲ್ಲಿ ಪಾಲ್ಗೊಳ್ಳಲಿ ದ್ದಾರೆ. ಶ್ರೀರಂಗಪಟ್ಟಣದ ಡಾ.ಭಾನುಪ್ರಕಾಶ್ ಶರ್ಮ ಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಚಿಂತಕರು, ಗಣ್ಯರು, ಪ್ರಮುಖರು ಸಮ್ಮೇ ಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಮಾರು ಒಂದರಿಂದ ಒಂದೂವರೆ ಸಾವಿರ ವಿಪ್ರ ಬಂಧುಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೆಗಡೆ ಹೇಳಿದರು.
ಜಿಲ್ಲಾ ಬ್ರಾಹ್ಮಣ ಸಂಘದ ಕಾರ್ಯ ದರ್ಶಿ ಸುರೇಶ್ ಎನ್.ಋಗ್ವೇದಿ, ಸಂಚಾ ಲಕರಾದ ಸತೀಶ್ ಕುಮಾರ್, ಸುರೇಶ್, ಸದಸ್ಯ ಹೆಚ್.ವಿ.ಭೋಜರಾಜ್ ಸುದ್ದಿ ಗೋಷ್ಟಿಯಲ್ಲಿ ಹಾಜರಿದ್ದರು.

Translate »