‘ಗಂಡ ಸತ್ತ ಹೆಂಡತಿ, ಹೆಂಡತಿ ಸತ್ತ ಗಂಡನ ಕೂಡಾವಳಿಯಂತೆ ಸರ್ಕಾರ’
ಚಾಮರಾಜನಗರ

‘ಗಂಡ ಸತ್ತ ಹೆಂಡತಿ, ಹೆಂಡತಿ ಸತ್ತ ಗಂಡನ ಕೂಡಾವಳಿಯಂತೆ ಸರ್ಕಾರ’

August 10, 2018

ಚಾಮರಾಜನಗರ: ಗಂಡ ಸತ್ತ ಹೆಂಡತಿ, ಹೆಂಡತಿ ಸತ್ತ ಗಂಡ ಕೂಡಾವಳಿ ಮಾಡಿಕೊಂಡು ಜೀವನ ನಡೆಸುವಂತೆ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಕೂಡಾವಳಿ ಮಾಡಿಕೊಂಡಿವೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.

ನಗರದ ನಂದಿ ಭವನದಲ್ಲಿ ಗುರುವಾರ ನಡೆದ ಪಕ್ಷದ ಶಕ್ತಿ ಕೇಂದ್ರದ ಮೇಲ್ಪಟ್ಟ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೆಂಡತಿ ಸತ್ತ ಗಂಡ, ಗಂಡ ಸತ್ತ ಹೆಂಡತಿ ಕೂಡಿಕೊಂಡು ಜೀವನ ನಡೆಸುವಂತೆ ಜೆಡಿಎಸ್-ಕಾಂಗ್ರೆಸ್ ಕೂಡಿಕೊಂಡು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಈ ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲ. ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿರುವ ಈ ಸಮ್ಮಿಶ್ರ ಸರ್ಕಾರ ಲೋಕಸಭಾ ಚುನಾವಣೆಗೂ ಮುನ್ನವೇ ಪತನವಾಗಲಿದೆ ಎಂದರು.

Translate »