ಜಿಲ್ಲಾಸ್ಪತ್ರೆಗೆ ಎಂಸಿಐ ಅಧಿಕಾರಿಗಳ ತಂಡ ಭೇಟಿ
ಚಾಮರಾಜನಗರ

ಜಿಲ್ಲಾಸ್ಪತ್ರೆಗೆ ಎಂಸಿಐ ಅಧಿಕಾರಿಗಳ ತಂಡ ಭೇಟಿ

August 10, 2018

ಚಾಮರಾಜನಗರ: ನಗರದ ಮೆಡಿಕಲ್ ಕಾಲೇಜಿಗೆ ಮುಂದಿನ ವರ್ಷದ ಪ್ರವೇಶಾತಿಗೆ ಅನುಮತಿ ನೀಡುವ ಹಿನ್ನಲೆಯಲ್ಲಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ)ದ ಮೂರು ಜನರ ತಂಡ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗುರುವಾರ ಪರಿಶೀಲಿಸಿತು.

ದೆಹಲಿಯಿಂದ ಆಗಮಿಸಿದ್ದ ಎಂಸಿಐ ಮೂವರು ಅಧಿಕಾರಿಗಳ ತಂಡ, ಜಿಲ್ಲಾ ಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ, ಐಸಿಯು, ವಾರ್ಡ್‍ಗಳು ಹಾಗೂ ಆಸ್ಪತ್ರೆಯ ಎಲ್ಲಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿತು. ನಂತರ ಯಡಬೆಟ್ಟದ ತಪ್ಪಲಿನಲ್ಲಿ ಇರುವ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿತು. ಪರಿಶೀಲನಾ ಕಾರ್ಯವೂ ನಾಳೆಯೂ (ಆ.10) ನಡೆಯಲಿದೆ ಎಂದು ಆಸ್ಪತ್ರೆಯ ಮೂಲಗಳು ‘ಮೈಸೂರು ಮಿತ್ರ’ನಿಗೆ ಖಚಿತ ಪಡಿಸಿವೆ.

ಈ ಸಂದರ್ಭದಲ್ಲಿ ಮೆಡಿಕಲ್ ಕಾಲೇಜಿನ ಡೀನ್ ಹಾಗೂ ನಿರ್ದೇಶಕ ಡಾ. ರಾಜೇಂದ್ರ, ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ರಘುರಾಂ ಸರ್ವೆಗರ್ ಹಾಗೂ ವೈದ್ಯರುಗಳು ಹಾಜರಿದ್ದರು. ಎಂಸಿಐ ಅಧಿಕಾರಿಗಳ ತಂಡ ಆಸ್ಪತ್ರೆಗೆ ಭೇಟಿ ನೀಡುವ ವಿಷಯ ತಿಳಿದಿದ್ದರಿಂದ ಇಡೀ ಆಸ್ಪತ್ರೆ ಹಾಗೂ ಆವರಣ ಇಂದು ಸ್ವಚ್ಛತೆಯಿಂದ ಕೂಡಿತ್ತು. ಶೌಚಾಲಯ ಗಳು, ವಾರ್ಡ್‍ಗಳಲ್ಲೂ ಸಹ ಸ್ವಚ್ಛತೆ ಇದ್ದುದ್ದು ಕಂಡು ಬಂತು. ಇದಲ್ಲದೇ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದು ಕಂಡು ಬಂತು.

Translate »